Connect with us


      
ಸಿನೆಮಾ

ಜಗ್ ಜಗ್ ಜೀಯೋ ಚಿತ್ರ ಉತ್ತಮ ಆರಂಭ; ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

Lakshmi Vijaya

Published

on

ಮುಂಬೈ: ಜೂನ್ 25 (ಯು.ಎನ್.ಐ.) ರಾಜ್ ಮೆಹ್ತಾ ಅವರ ಜಗ್ ಜಗ್ ಜೀಯೋ ಚಿತ್ರ ಶುಕ್ರವಾರ ಥಿಯೇಟರ್‌ಗಳಲ್ಲಿ ತೆರೆಕಂಡಿದ್ದು, ಬಿಡುಗಡೆಯಾದ ದಿನವೇ 9 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ವರದಿ ಮಾಡಿದ್ದಾರೆ. ಚಿತ್ರದಲ್ಲಿ ನೀತು ಕಪೂರ್, ಕಿಯಾರಾ ಅಡ್ವಾಣಿ, ವರುಣ್ ಧವನ್, ಮನೀಶ್ ಪಾಲ್ ಮತ್ತು ಪ್ರಜಕ್ತಾ ಕೋಲಿ ನಟಿಸಿದ್ದಾರೆ. ಮುಂಬೈ ಮತ್ತು ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಚಿತ್ರವು ವಿಶೇಷವಾಗಿ ಉತ್ತಮವಾಗಿ ಪ್ರದರ್ಶನಗೊಂಡಿತು ಎಂದು ತರಣ್ ಆದರ್ಶ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಜಗ್‌ಜಗ್ ಜೀಯೋ ಚಿತ್ರವನ್ನ ರಾಜ್ ಮೆಹ್ತಾ ನಿರ್ದೇಶಿಸಿದ್ದಾರೆ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದೆ. ಚಲನಚಿತ್ರ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ.

Share