Connect with us


      




ಸಿನೆಮಾ

“ಕಬ್ಜ” ಟೀಸರ್ ಲಾಂಚ್ ಮುಂದೂಡಿಕೆ

UNI Kannada

Published

on

ಬೆಂಗಳೂರು, ನ. 12(ಯುಎನ್ಐ) ಈಗಾಗಲೇ ಭಾರತದಾದ್ಯಂತ ಸಂಚಲನ ಮೂಡಿಸಿರುವ, ರಿಯಲ್‌ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ  ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಈ ಮೊದಲು ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡುತ್ತೇನೆ ಎಂದು ನಿರ್ದೇಶಕ ಆರ್ ಚಂದ್ರು ತಿಳಿಸಿದ್ದರು.  ಅಷ್ಟರಲ್ಲಿ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಸುದ್ದಿಗೆ ಇಡೀ ಕರುನಾಡು ಮಂಕಾಗಿದ್ದರಿಂದ ಮುಂದೂಡಿಕೆಯ ನಿರ್ರ್ಧಾರ ಕೈಗೊಳ್ಳಲಾಗಿದೆ.

ನಮ್ಮ ಕಬ್ಜ ತಂಡಕ್ಕೂ ಅಪ್ಪು ಅವರ‌ ಅಗಲಿಕೆ ಬಹಳ ನೋವು ತಂದಿದೆ. ಇಂತಹ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂಬ ಉದ್ದೇಶದಿಂದ “ಕಬ್ಜ” ಚಿತ್ರದ ಟೀಸರ್ ಬಿಡುಗಡೆ ಮಾಡಿಲ್ಲ.‌ ಮುಂದಿನ‌ ದಿನಗಳಲ್ಲಿ ಟೀಸರ್ ಲಾಂಚ್ ಮಾಡುವುದಾಗಿ ಟ್ವಿಟರ್ ಮೂಲಕ ಸಿನಿಪ್ರೇಕ್ಷಕರಿಗೆ ಆರ್ ಚಂದ್ರು ತಿಳಿಸಿದ್ದಾರೆ.
ಯುಎನ್ಐ ಎಸ್ಎ 1751

Share