Connect with us


      
ಭಾಷೆ

ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ

Published

on

ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ.

ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ. ಈ ಲಿಪಿ ಎಡದಿಂದ ಬಲಕ್ಕೆ ಬರೆಯಲ್ಪಟ್ಟಿದ್ದು ಅದರಲ್ಲಿಯ ಸರಳ ಸುಂದರ, ಅಕ್ಷರಗಳು ಸುಲಭವಾಗಿ ಗುರುತಿಸುವಂತಿವೆ. ಈ ಅಕ್ಷರಗಳಿಗೆ ತಲೆಕಟ್ಟು ಇರುವುದಿಲ್ಲ. ಥ, ಪ, ಮ, ವ. ಲ, ಹ ಮುಂತಾದ ಅಕ್ಷರಗಳ ಬುಡಕಟ್ಟು ದುಂಡಾಗಿರುತ್ತವೆ.

ಸಂಸ್ಕೃತ ಭಾಷೆಯ ಋ, ವಿಸರ್ಗ, ಜಿಹ್ವಾ ಮೂಲೀಯ ಮತ್ತು ಉಪಧ್ಮಾನೀಯಗಳನ್ನು ನಿರ್ದೇಶಿಸುವ ಸಂಜ್ಞೆಗಳಿರುವುದಿಲ್ಲ. ಅದರಂತೆ ಪದಾದಿಯ ದೀರ್ಘ ಈ ಕಾರವಿಲ್ಲ. ಕರ್ಣಾಟಕದಲ್ಲಿ ಅಶೋಕನ ಬಾಹ್ಮೀ ಲಿಪಿಯ ಶಾನಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ ಎಂಬ ಸ್ಥಳಗಳಲ್ಲಿಯೂ ರಾಯಚೂರು ಜಿಲ್ಲೆಯ ಮಸ್ಕಿ, ಪಾಲ್ಕಗುಂಡು ಮತ್ತು ಗವಿಮಠ ಎಂಬ ಸ್ಥಳಗಳಲ್ಲಿಯೂ ದೊರೆತಿವೆ.

ಅಶೋಕನ ಬ್ರಾಹ್ಮೀ ಲಿಪಿ ಮುಂದೆ 3ನೆಯ ಶತಮಾನದ ವರೆಗೆ ಶುಂಗ, ಕುಶಾನ, ಕ್ಷತ್ರಪ, ಆಂಧ್ರ, ಶಾತವಾಹನ ಮುಂತಾದ ಅರಸರ ಶಾಸನಗಳಲ್ಲಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಕಾಸ ಹೊಂದಿರುತ್ತದೆ. ಕುಶಾನ ಕಾಲದ ಲಿಪಿಯ ಅಕ್ಷರಗಳು ಕಡಿಮೆ ಎತ್ತರವಾಗಿಯೂ ಅಗಲವಾಗಿಯೂ ದಪ್ಪವಾಗಿಯೂ ಇರುತ್ತವೆ. ಕ್ಷತ್ರಪ ಹಾಗೂ ಶಾತವಾಹನರ ಕಾಲದ ಲಿಪಿಗಳೂ ಹೆಚ್ಚು ಕಡಿಮೆ ಇದೇ ವೈಶಿಷ್ಟ್ಯಗಳನ್ನೊಳಗೊಂಡಿವೆ.

ಕರ್ಣಾಟಕದಲ್ಲಿ ಅಶೋಕನ ಬ್ರಾಹ್ಮೀ ಲಿಪಿಯ ಮುಂದಿನ ಹಂತವನ್ನು 2-3ನೆಯ ಶತಮಾನದ ಮಳವಳ್ಳಿ ಮತ್ತು ಬನವಾಸಿಯ ಸಾತಕರ್ಣಿಯ ಶಾಸನಗಳಲ್ಲಿ ಕಾಣುತ್ತೇವೆ. ಇಲ್ಲಿಯೂ ಅಕ್ಷರಗಳ ಎತ್ತರ ಕಡಿಮೆಯಾಗಿದ್ದು ಕೆಲವು ಅಕ್ಷರಗಳಿಗೆ ತ್ರಿಕೋಣಾಕೃತಿಯುಳ್ಳ ತಲೆಕಟ್ಟು ಇರುತ್ತದೆ. ಅಗಲವಾದ ತುದಿಯುಳ್ಳ ಲೇಖನಿಯನ್ನು ಉಪಯೋಗಿಸಿದ್ದರಿಂದ ಇಂಥ ತಲೆಕಟ್ಟುಗಳು ತಲೆದೋರಿವೆಯೆಂದು ಕೆಲವು ವಿದ್ವಾಂಸರು ಹೇಳುತ್ತಾರೆ.

ಅ, ಕ, ರ ಮುಂತಾದ ಅಕ್ಷರಗಳ ಲಂಬರೇಖೆಯ ಕೆಳಭಾಗ ವೃತ್ತಾಕಾರವಾಗಿ ಎಡಗಡೆ ಹೊರಳಿದೆ. ಇತ್ತೀಚೆಗೆ ಗುಲ್ಬರ್ಗಾ ಜಿಲ್ಲೆಯ ಸನ್ನತಿ ಎಂಬ ಸ್ಥಳದಲ್ಲಿ ದೊರೆತ 3ನೆಯ ಶತಮಾನದ ಶಾನಗಳಲ್ಲಿಯ ಕೆಲವು ಅಕ್ಷರಗಳು ಆಂಧ್ರಪ್ರದೇಶದ ನಾಗಾರ್ಜುನ ಕೊಂಡದ ಇಕ್ಷ್ವಾಕು ಅರಸರ ಶಾಸನಗಳ ಅಕ್ಷರಗಳಂತೆ ಸುಂದರವಾಗಿಯೂ ಅಲಂಕಾರಯುತವಾಗಿಯೂ ಕೆತ್ತಲ್ಪಟ್ಟಿವೆ.

ಮೂಲ: ವಿಕಿಪೀಡಿಯ

ಭಾಷೆ

ಇಂದು ವಿಶ್ವ ಹಿಂದಿ ದಿನ; ವಿಶ್ವ ಹಿಂದಿ ದಿನ ಮತ್ತು ರಾಷ್ಟ್ರೀಯ ಹಿಂದಿ ದಿವಸ್‍ಗೆ ಇರುವ ವ್ಯತ್ಯಾಸವೇನು?

Published

on

ನವದೆಹಲಿ: ಜನೆವರಿ 10 (ಯು.ಎನ್.ಐ.) ಹಿಂದಿ ನಮ್ಮ ರಾಷ್ಟ್ರಭಾಷೆ. 1975 ರಲ್ಲಿ ನಡೆದ ಮೊದಲ ವಿಶ್ವ ಹಿಂದಿ ಸಮ್ಮೇಳನದ ದ್ಯೋತಕವಾಗಿ ಪ್ರತಿ ವರ್ಷ ಜನವರಿ 10 ರಂದು ವಿಶ್ವ ಹಿಂದಿ ದಿನ ಅಥವಾ ವಿಶ್ವ ಹಿಂದಿ ದಿವಸ್ ಅನ್ನು ಆಚರಿಸಲಾಗುತ್ತದೆ.

ಹಿಂದಿ ಭಾಷೆಯ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಪ್ರಪಂಚದಾದ್ಯಂತ ಇದನ್ನು ಆಚರಿಸಲಾಗುತ್ತದೆ. ಮೊದಲ ವಿಶ್ವ ಹಿಂದಿ ಸಮ್ಮೇಳನವನ್ನು 1975 ರಲ್ಲಿ ಜನವರಿ 10 ರಂದು ನಾಗ್ಪುರದಲ್ಲಿ ನಡೆಸಲಾಯಿತು.

2005ರಲ್ಲಿ ಜೂನ್ 8 ರಂದು ನಡೆದ ವಿಶ್ವ ಹಿಂದಿ ಸಮ್ಮೇಳನದ ಅನುಸರಣಾ ಸಮಿತಿಯ ಸಭೆಯಲ್ಲಿ, ಪ್ರತಿವರ್ಷ ಜನವರಿ 10 ಅನ್ನು ವಿಶ್ವ ಹಿಂದಿ ದಿನವನ್ನಾಗಿ ಸ್ಮರಿಸಲು ನಿರ್ಧರಿಸಲಾಯಿತು. ಅದರಂತೆ, 2006 ರಲ್ಲಿ ಜನವರಿ 10 ರಂದು ಮೊದಲ ಬಾರಿಗೆ ವಿಶ್ವ ಹಿಂದಿ ದಿನವನ್ನು ಆಚರಿಸಲಾಯಿತು.

ವಿಶ್ವ ಹಿಂದಿ ದಿನ ಮತ್ತು ರಾಷ್ಟ್ರೀಯ ಹಿಂದಿ ದಿವಸ್‍ಗೆ ಇರುವ ವ್ಯತ್ಯಾಸವೇನು?
ಭಾರತವು ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಹಿಂದಿ ದಿವಸ್ ಅನ್ನು ಸಹ ಆಚರಿಸುತ್ತದೆ. ಆದಾಗ್ಯೂ, ಸಂವಿಧಾನ ಸಭೆಯು ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ ಸ್ವೀಕರಿಸಿದ ನೆನಪಿಗಾಗಿ ರಾಷ್ಟ್ರೀಯ ಹಿಂದಿ ದಿವಸ್ ಅನ್ನು ಆಚರಿಸುವುದರಿಂದ ಇದು ವಿಶ್ವ ಹಿಂದಿ ದಿನಕ್ಕಿಂತ ಭಿನ್ನವಾಗಿದೆ.

ಹಿಂದಿಯು 260 ಮಿಲಿಯನ್‍ಗಿಂತಲೂ ಹೆಚ್ಚು ಸ್ಥಳೀಯ ಭಾಷಿಕರನ್ನು ಹೊಂದಿದೆ ಮತ್ತು ವಿಶ್ವದಲ್ಲಿ ನಾಲ್ಕನೇ ಅತಿ ಹೆಚ್ಚು ಮಾತನಾಡುವ ಮೊದಲ ಭಾಷೆಯಾಗಿದೆ.

Continue Reading

ಭಾಷೆ

ಭಾಷೆ, ಸಂಸ್ಕೃತಿ, ಜೀವನ ಪದ್ಧತಿ ಪರಸ್ಪರ ಸಂಬಂಧ ಹೊಂದಿವೆ

Published

on

By

ಮಡಿಕೇರಿ ಜ ೪(ಯುಎನ್ ಐ) “ಸ್ಥಳೀಯ ಭಾಷೆ ಮತ್ತು ಸಂಸ್ಕೃತಿ ಜೀವಂತವಾಗಿರಬೇಕು. ಮೂಲ ಭಾಷೆಯನ್ನು ಮರೆಯಬಾರದು. ಆ ದಿಸೆಯಲ್ಲಿ ಸ್ಥಳೀಯ ಅರೆಭಾಷೆ ಬಳಸುವುದರಿಂದ ಸಂಸ್ಕೃತಿ ಉಳಿಸಲು ಸಾಧ್ಯವಾಗುತ್ತದೆ” ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ನಡೆದ ೨೦೧೯-೨೦ ಮತ್ತು ೨೦೨೦-೨೧ ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿ ಸಚಿವರು ಮಾತನಾಡಿದರು.

ಅರೆಭಾಷೆ ಕೇವಲ ದೈನಂದಿನ ಚಟುವಟಿಕೆಗೆ ಮಾತ್ರವಲ್ಲ. ನಮ್ಮ ಬದುಕಿನ ಭಾಷೆಯಾಗಿದೆ. ಭಾಷೆ, ಸಂಸ್ಕೃತಿ ಮತ್ತು ಜೀವನ ಪದ್ಧತಿ ಒಂದಕ್ಕೊಂದು ಸಂಬಂಧವಿದೆ. ಸ್ಥಳೀಯ ಅರೆಭಾಷೆಯು ಪ್ರೀತಿ, ಸಂಸ್ಕೃತಿಯನ್ನು ಬಿಂಭಿಸುತ್ತದೆ ಎಂದು ಸಚಿವರು ಹೇಳಿದರು.

ಸ್ಥಳೀಯ ಭಾಷೆಗಳನ್ನು ಉಳಿಸಿ ಬೆಳೆಸುವುದರಿಂದ ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯ. ಆ ನಿಟ್ಟಿನಲ್ಲಿ ಮಾತೃ ಭಾಷೆ ಕಲಿಸುವ ಮತ್ತು ಪ್ರೀತಿಸುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಅಕಾಡೆಮಿ ಮೂಲಕ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದರು.

ಬಂದರು ಮತ್ತು ಮೀನುಗಾರಿಕೆ ಸಚಿವರಾದ ಎಸ್.ಅಂಗಾರ ಅವರು ಮಾತನಾಡಿ ಸಾಂಸ್ಕೃತಿಕ ನೆಲೆಗಟ್ಟನ್ನು ಉಳಿಸುವಲ್ಲಿ ಸಾಧಕರಿಗೆ ಸನ್ಮಾನಿಸುತ್ತಿರುವುದು ಭಾಷೆ ಮತ್ತು ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿದೆ ಎಂದರು.

ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿ ‘ಭಾಷೆ, ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ದಾಖಲು ಮಾಡಬೇಕು. ಭಾಷೆ, ಪರಂಪರೆ ಇತಿಹಾಸ ತಿಳಿದು ಮುನ್ನಡೆಯಬೇಕು. ಭಾಷೆ ನಾಶವಾದರೆ ಸಂಸ್ಕೃತಿ ನಾಶವಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಪ್ರತಿಪಾದಿಸಿದರು.’

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಹಾಜರಿದ್ದರು. ೨೦೧೯-೨೦ನೇ ಸಾಲಿಗೆ ಗೌರವ ಪ್ರಶಸ್ತಿ ಪುರಸ್ಕೃತರಾದ ಎನ್.ಎಸ್.ದೇವಿಪ್ರಸಾದ್ , ಇಂದ್ರಾಕ್ಷಿ ವೆಂಕಪ್ಪ ,ಮಾಧವಿ ಸೋನಾ, ಶಿವರಾಮಗೌಡ ಡಾ.ಕೋರನ ಸರಸ್ವತಿ ಪ್ರಕಾಶ್ , ಪದ್ಮಯ್ಯ ಗೌಡ ಎನ್. ಪರಿವಾರಕಾನ ಇವರಿಗೆ ಪ್ರಶಸ್ತಿ ಫಲಕದೊಂದಿಗೆ ತಲಾ ೫೦ ಸಾವಿರ ರೂ. ಚೆಕ್ ನೀಡಿ ಗೌರವಿಸಲಾಯಿತು.

Continue Reading

ಭಾಷೆ

ಮನೆಗೆ ಬಿದ್ದ ಬೆಂಕಿ ಇನ್ನೂ ಆರಿಲ್ಲ

Published

on

By

“ಆಡು ಮುಟ್ಟದ ಸೊಪ್ಪಿಲ್ಲ” ಇದು ಆಡುಮಾತು. ಕೆಲವರಿಗಂತೂ ಬಲು ಅನ್ವಯ. ಅಂಥವರಲ್ಲಿ ಕಯ್ಯಾರ ಕಿಞ್ಞಣ್ಣ ರೈ ಒಬ್ಬರು. ಅವರು ಕೃಷಿಕ, ಕವಿ, ಸಾಹಿತಿ, ಅಧ್ಯಾಪಕ, ಬಹುಭಾಷಾ ವಿದ್ವಾಂಸ, ಹೋರಾಟಗಾರ, ರಾಜಕಾರಣಿ, ಆಡಳಿಗಾರ. ಇಷ್ಟು ಹೆಗ್ಗಳಿಕೆ ಎಷ್ಟು ಜನರಿಗಿದ್ದೀತು.

ಹುಟ್ಟೂರು ಪೆರಡಾಲ. ಕಾಸರಗೋಡು ತಾಲ್ಲೂಕು ಬದಿಯಡ್ಲ ಬದಿಯ ಹಳ್ಳಿ. ತುಂಬು ಮನೆತನ. ಶಿಕ್ಷಣದತ್ತ ಒಲವು. ಮನೆಮಾತು ತುಳು. ಕನ್ನಡ – ಸಂಸ್ಕೃತ ಭಾಷೆಗಳಲ್ಲಿ ಪ್ರಕಾಂಡ ಪಾಂಡಿತ್ಯ. ಇಂಗ್ಲಿಷ್‌ ಮೇಲೆಯೂ ಹಿಡಿತ. ಅವರೆಂದೂ ಅನ್ಯಾಯ ಸಹಿಸಿದವರಲ್ಲ. ಸಿಡಿಗುಂಡು. ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಭಾಗಿ. ರಾಷ್ಟ್ರದ ಉನ್ನತಿಗೆ ಕಂಡ ಕನಸು ಅಪಾರ.

ಸ್ವಾತಂತ್ರ್ಯ ಸಂದು ಕೆಲವೇ ವರ್ಷ. ಭಾಷಾವಾರು ಪ್ರಾಂತ್ಯ ರಚನೆ. ಕನ್ನಡದ ಸಿಂಹಕ್ಕೆ ಸಿಡಿಲೆರಗಿತ್ತು. ಕಾಸರಗೋಡು ಕೇರಳಕ್ಕೆ ಸೇರಿತ್ತು. ಅದ್ಹೇಗೆ ಸಾಧ್ಯ ? ಎಲ್ಲೋ ಎಡವಟ್ಟಾಗಿದೆ ಅಂದುಕೊಂಡರು. ಶಾಸಕರಿಂದ ರಾಷ್ಟ್ರಪತಿ ತನಕ ಮನವಿ. ಎಲ್ಲರಿಂದ ನೋಡೋಣ ಆಶ್ವಾಸನೆ. ಅದು ವಾಸನೆಯಷ್ಟೆ. ಆಶ್ವಾಸನೆ ಈಡೇರಲಿಲ್ಲ. ಕಯ್ಯಾರರ ಧೈರ್ಯ ಕುಂದಲಿಲ್ಲ. ಸಮಾನಮನಸ್ಕರೊಂದಿಗೆ ಹೋರಾಟ. ಮಹಾಜನ್‌ ಆಯೋಗ ರಚಿತ. ಕಯ್ಯಾರರು ಸಮಿತಿ ಮುಂದೆ ವಾದ ಮಾಡಿದರು. ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ ಎಂದರು. ದಾಖಲೆ ಒಪ್ಪಿಸಿದರು. ಇವರ ವಾದ ವೈಖರಿಗೆ ನ್ಯಾಯಮೂರ್ತಿ ಮಹಾಜನ್‌ ತಲೆದೂಗಿದರು. ವರದಿ ಬಂತು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಇದು ಅಡಕ.

ಕಯ್ಯಾರರಿಗೆ ಅಪಾರ ಸಂತಸ. ಇನ್ನೇನು ಕರ್ನಾಟಕಕ್ಕೆ ಸೇರಿದೆವು. ಕನ್ನಡತಾಯಿ ಒಡಲ ಮಡಿಲಿಗೆ ಸೇರುವೆವು. ಖುಷಿ. ಸಂಭ್ರಮಿಸಿದರು. ರಾಜಕೀಯ ಇಚ್ಚಾಶಕ್ತಿ ಕೊರತೆ. ಕರ್ನಾಟಕದ ರಾಜಕಾರಣಿಗಳು ಒತ್ತಡ ಹಾಕಲಿಲ್ಲ. ವರದಿ ನೆನೆಗುದಿಗೆ ಬಿತ್ತು. ಆದರೂ ಕನ್ನಡದ ಜೀವ ಸುಮ್ಮನಾಗಲಿಲ್ಲ. ಮನವಿ ಮೇಲೆ ಮನವಿ. ಬಂದವರಿಗೆಲ್ಲ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಇದೇ ಮಂತ್ರ

 

೨೦೧೦. ನಾನು ಕವಿತಾ ಕುಟೀರಕ್ಕೆ ಭೇಟಿ ಕೊಟ್ಟಿದ್ದೆ. ಕಯ್ಯಾರರಿಗೆ ನೂರರ ಗಡಿ ಸಮೀಪ. ಕನ್ನಡ ಎಂದೊಡನೆ ಅಪಾರ ಉತ್ಸಾಹ. ಕುಂದಿದಂತಿದ್ದ ಉತ್ಸಾಹ ಗರಿಗೆದರಿತು. ಒಂದಷ್ಟು ಹೊತ್ತು ಮಾತು.. ಅದೇ ಮಂತ್ರ. ಕಾಸರಗೋಡು ಕರುನಾಡಿಗೆ ಸೇರಬೇಕು. ಸೇರಲೇಬೇಕು. ಇದು ನನ್ನ ಪೂರಕ ದನಿ. ಅವರ ಕಣ್ಣಲ್ಲಿ ಕಂಬನಿ.

ಇಂದು ಜೂನ್‌ ೮. ಕನ್ನಡ ಕಲಿ ಕಯ್ಯಾರರ ಜನ್ಮದಿನ. ಅವರ ನಿರಂತರ ಹೋರಾಟ ನಾಡಿಗೆ ನೆನಪಿದೆ. ಅನೇಕರು ಸ್ಮರಿಸಿದ್ದಾರೆ. ಆದರಿಷ್ಟೆ ಸಾಲದು. ಅವರ ಹೋರಾಟ ಮುಂದುವರಿಯಬೇಕು. ಕಾಸರಗೋಡು, ಕರ್ನಾಟಕಕ್ಕೆ ಸೇರಬೇಕು. ಹೀಗಾದರೆ ಮಾತ್ರ ಅವರ ಚೇತನ ನಗೆ ಚೆಲ್ಲೀತು. ಅವರ ಕನಸು ನನಸಾದೀತು.

೧೯೫೭. ಧಾರವಾಡದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ. ಕುವೆಂಪು ಅಧ್ಯಕ್ಷತೆ. ಅಷ್ಟರಲ್ಲಾಗಲೇ ಭಾಷಾವಾರು ಪ್ರಾಂತ್ಯ ರಚನೆ. ಕೇರಳಕ್ಕೆ ಕಾಸರಗೋಡು ಸೇರಿತ್ತು. ಕನ್ನಡ ಮನಸುಗಳಿಗೆ ನೋವು. ಕಯ್ಯಾರರ ಆಕ್ರೋಶ ಗುಂಡಿನಂತೆ ಸಿಡಿಯಿತು.

ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ

ಎಲ್ಲರೂ ಎದ್ದೆದ್ದು ಓಡಿ ಬನ್ನಿ

ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ

ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ!

ಹಾರೆಗುದ್ಲಿ ಕೊಡಲಿ ನೊಗ ನೇಗಿಲೆತ್ತುತಲಿ

ನೆಲದಿಂದ ಹೊಲದಿಂದ ಹೊರಟು ಬನ್ನಿ

ಕನ್ನಡದ ನಾಡಿಂದ, ಕಾಡಿಂದ, ಗೂಡಿಂದ

ಕಡಲಿಂದ, ಸಿಡಿಲಿಂದ ಗುಡುಗಿಬನ್ನಿ ಬೆಂಕಿಬಿದ್ದಿದೆ ಮನೆಗೆ!

ಅಕ್ಕಂದಿರೆ ಅಣ್ಣಂದಿರೆ, ತಂಗಿಯರೆ ತಮ್ಮಂದಿರೆ

ಬೆಂಕಿಯನ್ನಾರಿಸಲು ಬೇಗ ಬನ್ನಿ

ಕನ್ನಡದ ಒಲವೊಂದೆ ಛಲವೊಂದೆ, ನೆಲವೊಂದೆ

ನಾಡ ನುಳಿಸುವೆನಂದರೆ ಓಡಿ ಬನ್ನಿ ಬೆಂಕಿ ಬಿದ್ದಿದೆ ಮನೆಗೆ!

ಕಾಸರಗೋಡು ಇನ್ನೂ ಕರುನಾಡಿಗೆ ಸೇರಿಲ್ಲ. ಅರ್ಥಾತ್‌ ಬಿದ್ದ ಬೆಂಕಿ ಇನ್ನೂ ಆರಿಲ್ಲ. ಆರುವ ತನಕವೂ ಕಯ್ಯಾರರ ಈ ಕವನ ಪ್ರಸ್ತುತ. ಕಯ್ಯಾರರ ಆರ್ತತೆ ನಮ್ಮನ್ನು ಎಬ್ಬಿಸಲಾರದೇ ? ಅವರ ಆಶಯ ಈಡೇರುವುದೆಂದು ? ಕನಸು ನನಸಾದ ದಿನ ಕಯ್ಯಾರರ ಚೇತನ ಮುಗುಳ್ನಗಬಹುದು

Continue Reading
Advertisement
ಕ್ರೀಡೆ4 mins ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ1 hour ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ1 hour ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು2 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ2 hours ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಕರ್ನಾಟಕ2 hours ago

ಇಡೀ ವರ್ಷ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಗೆ ತೀರ್ಮಾನ: ಸಿಎಂ

ಬೆಂಗಳೂರು : ಜನೆವರಿ 23 (ಯು.ಎನ್.ಐ.) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ...

ಅಂಕಣ2 hours ago

ಸ್ವಾತಂತ್ರ್ಯಕ್ಕಿಂತ ದೊಡ್ಡದು ಇನ್ಯಾವುದಿದೆ ?

‌ಅಂಕಣ: ದಿಟನುಡಿ -೩ ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು...

ದೇಶ3 hours ago

ಪಂಜಾಬ್ ಚುನಾವಣೆ: ಕೆಂಪು ಕೋಟೆ ಹಿಂಸಾಚಾರದ ಆರೋಪಿಗೆ ರೈತ ಸಂಘಟನೆಯಿಂದ ಟಿಕೆಟ್!

ಚಂಡೀಗಢ: ಜನೆವರಿ 23 (ಯು.ಎನ್.ಐ.) ರೈತರ ಸಂಘಟನೆ ಯುನೈಟೆಡ್ ಸಮಾಜ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಗೆ 35 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ...

ಕರ್ನಾಟಕ3 hours ago

ನ್ಯಾಯಮೂರ್ತಿ ಕೆ ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು: ಜನವರಿ 23 (ಯು.ಎನ್.ಐ.)  ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ನ್ಯಾಯಮೂರ್ತಿ ಮಂಜುನಾಥ್ ಅವರು...

ಅಂಕಣ3 hours ago

ಸ್ವಾತಂತ್ರ್ಯ ಕೇವಲ ಮನುಷ್ಯನ ಹಕ್ಕೆ?

ಅ‌ಂಕಣ- ಖಚಿತ ನೋಟ ಹೆಸರಾಂತ ಪ್ರಾಣಿಹಕ್ಕುಗಳ ಪ್ರತಿಪಾದಕ, ಪೀಟರ್ ಸಿಂಗರ್ ಹೇಳುವಂತೆ, ಮನುಷ್ಯ ತನ್ನ ಇತಿಹಾಸದಲ್ಲಿ ಮಾಡಿರುವ ಜಾತಿ ಮತ್ತು ಲಿಂಗ ಆಧಾರಿತ ಶೋಷಣೆಯ ಬಗ್ಗೆ ಇಂದು...

ಟ್ರೆಂಡಿಂಗ್

Share