Connect with us


      
ದೇಶ

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪ್ರವೇಶಾತಿ

Kumara Raitha

Published

on

ಕಾಸರಗೋಡು: ಜನೆವರಿ 06 (ಯು.ಎನ್.ಐ.)     ಕಾಸರಗೋಡು ಜಿಲ್ಲೆಯ ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2021-2022 ನೇ ಶೈಕ್ಷಣಿಕ ವರುಷದ ಕನ್ನಡ ಎಂ.ಎ ಪ್ರವೇಶಾತಿಯು ನಡೆಯಲಿದೆ.

ಇಲ್ಲಿ ಎಂ.ಎ ಕನ್ನಡ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರದ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರತಿವರ್ಷ 25,000 ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡುತ್ತದೆ. ಇದರ ಜೊತೆಗೆ ಇತರ ವಿದ್ಯಾರ್ಥಿ ವೇತನಗಳು ಕೂಡ ದೊರಕುತ್ತವೆ. ಇಲ್ಲಿನ ಕನ್ನಡ ವಿಭಾಗಕ್ಕೆ ಖಾಯಂ ಪ್ರಾಧ್ಯಾಪಕರ ನೇಮಕಾತಿಯು ಮುಂದಿನ ದಿನಗಳಲ್ಲಿ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಅಥವಾ ಪೋಷಕರು ಪ್ರವೇಶ ಸಂಬಂಧದ ಹೆಚ್ಚಿನ ಮಾಹಿತಿ ಪಡೆಯಲು 08-01-2022 ರ ಶನಿವಾರದ ಒಳಗಾಗಿ ಈ ಕೆಳಗಿನ ದೂರವಾಣಿಗೆ ಕರೆ ಮಾಡಬಹುದು.

6282871092
9633957423

Share