Connect with us


      
ಕ್ರೀಡೆ

“ಅಹಂ ಬಿಟ್ಟು ವಿರಾಟ್ ಹೊಸ ನಾಯಕನನ್ನು ಬೆಂಬಲಿಸಬೇಕು” – ಕಪಿಲ್ ದೇವ್

Iranna Anchatageri

Published

on

ಹೊಸದಿಲ್ಲಿ : ಜನೆವರಿ 16 (ಯು.ಎನ್.ಐ.) ವಿರಾಟ್ ಕೊಹ್ಲಿ ಶನಿವಾರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೊಹ್ಲಿ ಕೇವಲ ಟೆಸ್ಟ್ ತಂಡದ ನಾಯಕರಾಗಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಕೊಹ್ಲಿ ಭಾರತ ತಂಡದ ಸಾರಥ್ಯ ತೊರೆದಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವಕ್ಕ ಗುಡ್ ಬೈ ಹೇಳಿದ ಬಳಿಕ, ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕಠಿಣ ಶಬ್ದಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ಅಹಂ ಬಿಟ್ಟು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ ಎಂದಿದ್ದಾರೆ.
ವಿರಾಟ್ ನಿರ್ಧಾರಕ್ಕೆ ಸ್ವಾಗತ
ಮಿಡ್ ಡೇ ಆಂಗ್ಲ ಪತ್ರಿಕೆಯೊಂದಿಗೆ ಮಾತನಾಡಿದ ಕಪಿಲ್, ನಾಯಕತ್ವ ತೊರೆಯುವ ವಿರಾಟ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಟಿ-20 ತಂಡದ ನಾಯಕತ್ವವನ್ನು ತೊರೆದಾಗಿನಿಂದ ಕೋಹ್ಲಿ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತುಂಬಾ ಚಿಂತೆ ಹಾಗೂ ಒತ್ತಡದಲ್ಲಿ ವಿರಾಟ್ ಕೊಹ್ಲಿ ಕಾಣುತ್ತಿದ್ದರು. ಆದ್ದರಿಂತ ನಾಯಕತ್ವ ತ್ಯಜಿಸುವ ನಿರ್ಧಾರ ಕೈಗೊಳ್ಳುವುದರಿಂದ ಅವರು ಗ್ರೌಂಡ್ ನಲ್ಲಿ ಮುಕ್ತವಾಗಿ ಆಡಲು ಸಾಧ್ಯವಾಗುತ್ತದೆ ಎಂದರು.
ಕೊಹ್ಲಿಯಿಂದ ಯೋಚಿಸಿ ನಿರ್ಧಾರ
ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೊಹ್ಲಿ ಯೋಚಿಸಿರಬಹುದು ಎಂದು ಕಪಿಲ್ ಹೇಳಿದ್ದಾರೆ. “ವಿರಾಟ್ ಒಬ್ಬ ಪ್ರಬುದ್ಧ ವ್ಯಕ್ತಿ. ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅವರು ಯೋಚಿಸಿದ್ದಾರೆಂಬ ಖಾತ್ರಿ ಇದೆ. ಬಹುಶಃ ಅವರು ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವವನ್ನು ಎಂಜಾಯ್ ಮಾಡಲು ಸಾಧ್ಯವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಬೆಂಬಲಿಸಬೇಕು” ಎಂದರು.
ಅಹಂಕಾರವನ್ನು ತೊರೆಯಬೇಕು
ವಿರಾಟ್ ಅಹಂ ಬಿಟ್ಟು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ. ಈ ಹಿಂದೆ ಸುನಿಲ್ ಗವಾಸ್ಕರ್ ತನ್ನ ಅಡಿಯಲ್ಲಿ ಆಡಿದ್ದರು ಎಂದು ಕಪಿಲ್ ನೆನಪು ಮಾಡಿಕೊಂಡರು. “ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಮೊಹಮ್ಮದ್ ಅಜರುದ್ದೀನ್ ಅಡಿಯಲ್ಲಿ ತಾನು ಆಡಿದ್ದೇನೆ. ಎಂದಿಗೂ ನಾನು ಅಹಂಕಾರವನ್ನು ಹೊಂದಿರಲಿಲ್ಲ. ವಿರಾಟ್ ತನ್ನ ಅಹಂಕಾರವನ್ನು ಬಿಟ್ಟು ಯುವ ಕ್ರಿಕೆಟಿಗನ ಅಡಿಯಲ್ಲಿ ಆಡಬೇಕಾಗಿದೆ. ಇದು ಅವರಿಗೆ ಮತ್ತು ಭಾರತೀಯ ಕ್ರಿಕೆಟ್‌ಗೆ ನೆರವಾಗಲಿದೆ. ಹೊಸ ನಾಯಕನಿಗೆ ವಿರಾಟ್ ಮಾರ್ಗದರ್ಶನ ನೀಡಬೇಕು. ಬ್ಯಾಟ್ಸ್‌ಮನ್ ಆಗಿ ವಿರಾಟ್‌ನನ್ನು ಟೀಮ್ ಇಂಡಿಯಾ ಕಳೆದುಕೊಳ್ಳಲು ಸಾಧ್ಯವಿಲ್ಲ” ಎಂದು ಕಪಿಲ್ ಹೇಳಿದರು..

Share