Connect with us


      




ಸಿನೆಮಾ

ಕರೀನಾ ಕಪೂರ್, ಅಮೃತಾ ಅರೋರಾಗೆ ಕೋವಿಡ್ ದೃಢ

Vanitha Jain

Published

on

ಮುಂಬೈ, ಡಿಸೆಂಬರ್ 13(ಯು.ಎನ್.ಐ)ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಖಾನ್ ಮತ್ತು ಅಮೃತಾ ಅರೋರಾರಿಗೆ ಮಂಗಳವಾರ ಕೋವಿಡ್-19 ದೃಢಪಟ್ಟಿದೆ.

ಈ ಇಬ್ಬರು ನಟಿಯರ ಸಂಪರ್ಕಕ್ಕೆ ಬಂದ ವ್ಯಕ್ತಿಗಳೆಲ್ಲರೂ ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕು ಎಂದು ಮುಂಬೈನ ನಾಗರಿಕ ಸಂಸ್ಥೆ ಬೃಹನ್‍ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ. ಕಳೆದ ವಾರ ಮುಂಬೈನಲ್ಲಿ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಆಯೊಜಿಸಿದ್ದ ಸಮಾರಂಭದಲ್ಲಿ ಭಾಗಿಯಾಗಿದ್ದರು ಎಂಬುದು ಇನ್‍ಸ್ಟಾಗ್ರಾಮ್ ಖಾತೆಯಿಂದ ತಿಳಿದು ಬಂದಿದೆ.

“ನಾವು ಅವರನ್ನು (ಕಪೂರ್ ಮತ್ತು ಅರೋರಾ) ಹೋಮ್ ಕ್ವಾರಂಟೈನ್‍ನಲ್ಲಿ ಇರುವಂತೆ ಕೇಳಿಕೊಂಡಿದ್ದೇವೆ. ಅವರ ಎಲ್ಲಾ ನಿಕಟ ಸಂಪರ್ಕಗಳನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದು ಆರೋಗ್ಯದ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಸುರೇಶ್ ಕಾಕಾನಿ ಹೇಳಿದರು.

Share