Connect with us


      
ರಾಜಕೀಯ

ನಾಯಕತ್ವ ಬದಲಾವಣೆ: ಆಡಳಿತದ ಮೇಲೆ ಪರಿಣಾಮ; ಎಚ್ಚೆತ್ತುಕೊಳ್ಳದಿದ್ದರೆ 2023 ಗೆ ಬೆಲೆ ತೆರಬೇಕಾಗುತ್ತದೆ ! !

Published

on

ಬೆಂಗಳೂರು:ಡಿಸೆಂಬರ್ 27 (ಯು.ಎನ್.ಐ.)    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಆಡಳಿತ ಮತ್ತು ಅಭಿವೃದ್ಧಿ ವಿಷಯಕ್ಕಿಂತ ಪಕ್ಷದ ಆಂತರಿಕ ಸಂಘರ್ಷ ಮತ್ತು ನಾಯಕತ್ವ ಬದಲಾವಣೆಯ ಚರ್ಚೆಯೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

2008 ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಪ್ರಥಮಬಾರಿಗೆ ಅಧಿಕಾರಕ್ಕೆ ಬಂದಾಗ ರಾಜ್ಯದ ಜನರು ಸಾಕಷ್ಟು ಬದಲಾವಣೆಯ ನಿರೀಕ್ಷೆ ಇಟ್ಟುಕೊಂಡಿದ್ದರು. ಆಗಲೂ ಮುಖ್ಯಮಂತ್ರಿಯ ಮೇಲೆ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಯಾಗಿ ಒಂದೇ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ಆಗುವಂತಾಯಿತು.

ಈಗ 2018 ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯದಿದ್ದರೂ ಆಪರೇಷನ್ ಕಮಲದ.ಮೂಲಕ ಯಡಿಯೂರಪ್ಪ ಅವರು ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದರು. ಆದರೆ, ಮತ್ತೆ ಅದೇ ಭ್ರಷ್ಟಾಚಾರದ ಆರೊಪ; ಕುಟುಂಬದ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು  ವಯಸ್ಸಿನ ಕಾರಣ ನೀಡಿ ಅಧಿಕಾರದಿಂದ ಇಳಿಸಿದರು.

ಅವರ ಉತ್ತರಾಧಿಕಾರಿಯಾಗಿ ಜನತಾ ಪರಿವಾರ ಮೂಲದ  ಬಸವರಾಜ್ ಎಸ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ. ಅಧಿಕಾರ ಸ್ವೀಕರಿಸಿದ ಆರಂಭದಲ್ಲಿಯೇ ಬೊಮ್ಮಾಯಿಯವರ ಸರಳ ನಡೆ ಹಾಗೂ ಆಡಳಿತ ವೈಖರಿ ರಾಜ್ಯದ ಜನರಲ್ಲಿ  ಆಶಾ ಭಾವನೆ ಮೂಡಿಸಿದೆ ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.

ಬೊಮ್ಮಾಯಿ ನೇತೃತ್ವದ ಸರ್ಕಾರ ನೂರು ದಿನ ಪೂರೈಸುವಷ್ಟರಲ್ಲಿ ಬಿಟ್ ಕಾಯಿನ್ ಹಗರಣ ಹಾಗೂ ಗುತ್ತಿಗೆಯಲ್ಲಿ 40% ಆರೋಪ ಸಿಎಂ ಬೊಮ್ಮಾಯಿ ಅವರ ಆಡಳಿತಕ್ಕೆ ಯಂತ್ರದ ವೇಗಕ್ಕೆ ಬ್ರೇಕ್ ಹಾಕಿದಂತಾಯಿತು. ಎರಡೂ ಹಗರಣಗಳ ಆರೋಪ ಪಟ್ಟಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಪ್ರತಿಪಕ್ಷಗಳೂ ಬಹಿರಂಗ ಆರೋಪ ಮಾಡುತ್ತಿಲ್ಲ. ಆದರೆ, ಅವರ ಅವಧಿಯಲ್ಲಿ ನಡೆಯುತ್ತಿರುವ ಪ್ರಕರಣಗಳಾಗಿರುವುದರಿಂದ ಅವರನ್ನು ಹೊಣೆಗಾರರನ್ನಾಗಿ ಮಾಡಲು ಪ್ರತಿಪಕ್ಷಗಳು ಪ್ರಯತ್ನ ನಡೆಸುತ್ತಿವೆ.

ಆಡಳಿತ ಪಕ್ಷದಲ್ಲಿಯೇ ಕಸರತ್ತು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಪ್ರತಿಪಕ್ಷಗಳಿಗಿಂತ ಆಡಳಿತ ಪಕ್ಷದಲ್ಲಿಯೇ ಒತ್ತಡ ಹೆಚ್ಚಿದೆ ಎನ್ನುವ ಸತ್ಯ ಗುಟ್ಟಾಗಿ ಏನು ಉಳಿದಿಲ್ಲ. ಬಿಟ್ ಕಾಯಿನ್ ಆರೋಪವನ್ನೇ ಅಸ್ತ್ರವಾಗಿಟ್ಟುಕೊಂಡು ನಾಯಕತ್ವ ಬದಲಾವಣೆ ಮಾಡಬೇಕೆಂದು ಮೂಲ ಬಿಜೆಪಿ ನಾಯಕರ ಒಂದು ಪಡೆ ಹೈಕಮಾಂಡ್ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಬೊಮ್ಮಾಯಿ ಬಿಜೆಪಿ ಸೇರಿ 20 ವರ್ಷಗಳಾಗುತ್ತ ಬಂದರೂ ಅವರನ್ನು ಸಂಘ ಪರಿವಾರ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಂಡಂತೆ ಕಾಣಿಸುವುದಿಲ್ಲ. ಪರಿವಾರ ಮೆಚ್ಚಿಸಲು ಸಿಎಂ ತಮ್ಮ ಮೂಲ ಸಮಾಜವಾದಿ ತತ್ವವನ್ನು ಬದಿಗಿಟ್ಟು ಕಟ್ಟಾ ಹಿಂದುತ್ವವಾದಿಯ ರೀತಿಯಲ್ಲಿ ನಡೆದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿರುವುದು ಅವರ ಹಲವಾರು ಮಾತು ಕೃತಿಗಳಿಂದ ಕಂಡು ಬರುತ್ತದೆ.

ಸಂಘ ಪರಿವಾರ ಮೆಚ್ಚಿಸಲೇಂದೇ ಬೊಮ್ಮಾಯಿಯವರು ನೈತಿಕ ಪೊಲೀಸ್ ಗಿರಿ ಪರ ಮಾತನಾಡಿದರು ಎಂಬ ಮಾತುಗಳು ಕೇಳಿ ಬಂದವು. ಅಷ್ಟೇ ಅಲ್ಲದೆ ಮತಾಂತರ ನಿಷೇಧ ಕಾಯ್ದೆಯನ್ನೂ ಸಂಘ ಪರಿವಾರ ಮೆಚ್ಚಿಸಲೆಂದೇ ಜಾರಿಗೆ ತರಲು ಪ್ರಯತ್ನ ನಡೆಸಿದ್ದು, ಅದಕ್ಕಾಗಿ ಸದನದಲ್ಲಿ ಮೇಲಿಂದ ಮೇಲೆ ಎದ್ದು ನಿಂತು ಕಾಯ್ದೆ ಸಮರ್ಥನೆ ಮಾಡಿಕೊಂಡಿದ್ದಷ್ಟೆ ಅಲ್ಲದೇ ಇದು ಆರ್ ಎಸ್ ಎಸ್ ಅಜೆಂಡಾ ಎಂದು ಬಹಿರಂಗವಾಗಿಯೇ ಹೇಳುವ ಮೂಲಕ ತಾವು ಸಂಘ ಪರಿವಾರದ ಆಜ್ಞಾಪಾಲಕ ಎಂದು ಸದನದಲ್ಲಿಯೇ ಸಾಬೀತುಪಡಿಸುವ ಪ್ರಯತ್ನ ನಡೆಸಿದರು.

ಜನವರಿ ನಂತರ ಮುಂದೇನಾಗುತ್ತದೆ ಎಂಬ ಆತಂಕ ಇರುವುದರಿಂದ ವಿಧಾನ ಪರಿಷತ್ತಿನಲ್ಲಿಯೂ ಬಹುಮತ ಇಲ್ಲದಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಮುನಿಸಿಕೊಂಡ ವಿಧಾನ ಪರಿಷತ್ ಸದಸ್ಯರ ಮನವೊಲಿಕೆ ಮಾಡುವ ಮೂಲಕ ಅವರನ್ನು ಕಲಾಪದಿಂದ ದೂರ ಇರುವಂತೆ ಮಾಡುವ ಮೂಲಕ ಅಲ್ಲಿಯೂ ತಮ್ಮ ಅವಧಿಯಲ್ಲಿಯೇ ವಿಧೇಯಕ ಅಂಗೀಕಾರಕ್ಕೆ ಕಸರತ್ತು ನಡೆಸಿದರು. ಆದರೆ, ರಾಜಕೀಯ ಲೆಕ್ಕಾಚಾರ ಅವರಂದುಕೊಂಡಂತೆ ಆಗದೇ ಪರಿಷತ್ತಿನಲ್ಲಿ ವಿಧೇಯಕ ಮಂಡನೆಯಾಗದೇ ಹಾಗೆ ಉಳಿಯುವಂತಾಯಿತು.

ಈ ಸಂಘರ್ಷದ ನಡುವೆಯೇ ಮುಖ್ಯಮಂತ್ರಿ ಮಂಡಿ ನೋವಿನ ಶಸ್ತ್ರ ಚಿಕಿತ್ಸೆಗೆ ವಿದೇಶಕ್ಕೆ ತೆರಳುವುದರಿಂದ ರಾಜಿನಾಮೆ ನೀಡುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಜನವರಿಯಲ್ಲಿ ನಾಯಕತ್ವ ಬದಲಾವಣೆ ಆಗಿಯೇ ಆಗುತ್ತದೆ ಎನ್ನುವ ಕಾರಣಕ್ಕೆ ಸದನದ ಕಲಾಪದಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಶಾಸಕರ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಿತ್ತು.

ಈ ಬಾರಿ ನಾಯಕತ್ವ ಬದಲಾವಣೆಯಾದರೆ ಪಂಚಮಸಾಲಿ ಸಮುದಾಯಕ್ಕೆ ನಾಯಕತ್ವ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಮುರುಗೇಶ್ ನಿರಾಣಿ ತೆರೆಮರೆಯ ಕಸರತ್ತು ನಡೆಸುತ್ತಿದ್ದು, ತಮ್ಮ ನಾಯಕತ್ಬಕ್ಕೆ ತಮ್ಮದೇ ಸಮುದಾಯದ ಪ್ರಮುಖ ನಾಯಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಅವರ ಬೆಂಬಲ ಪಡೆಯಲು ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ಮೂಲಕ ವ್ಯರ್ಥ ಪ್ರಯತ್ನ ನಡೆಸಿ ಮುಜುಗರಕ್ಕೆ ಒಳಗಾಗುವಂತಾಯಿತು.

ಇದರ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಸದನದಲ್ಲಿ ಪ್ರತಿ ವಿಷಯದ ಚರ್ಚೆಯಲ್ಲಿ ಸಕ್ರಿಯರಾಗಿ ಭಾಗವಹಿಸುವ ಮೂಲಕ ತಾವಿನ್ನೂ ರಾಜಕೀಯವಾಗಿ ಫಿಟ್ ಇದ್ದೇನೆ ಎನ್ನುವ ಸಂದೇಶ ರವಾನಿಸಿದ್ದಾರೆ.  ಅಲ್ಲದೆ ನಾಯಕತ್ವ ಬದಲಾವಣೆಯ ಕಸರತ್ತು ನಡೆದರೂ ತಮ್ಮ ಹಿಡಿತದಿಂದ ಕೈ ತಪ್ಪಬಾರದು ಎನ್ನುವ ಕಾರಣಕ್ಕೆ ಚುನಾವಣೆ ಹಾಗೂ ಅಧಿವೇಶನದಲ್ಲಿ ಸಕ್ರೀಯರಾಗಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡಿದಂತೆ ಕಾಣಿಸುತ್ತದೆ. ಮುಖ್ಯವಾಗಿ ಸದನದ  ಒಳಗೂ ಹೊರಗೂ ಬೊಮ್ಮಾಯಿ ಬೆಂಬಲಕ್ಕೆ ಅಚಲವಾಗಿ ನಿಂತಿದ್ದಾರೆ.

ಪಕ್ಷದಲ್ಲಿ ನಡೆಯುತ್ತಿರುವ ಎಲ್ಲ ಆಂತರಿಕ ಸಂಘರ್ಷ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಸಧ್ಯಕ್ಕೆ ಎಲ್ಲದಕ್ಕೂ ಅಲ್ಪ ವಿರಾಮ ಹಾಕುವ ಪ್ರಯತ್ನವನ್ನು ಪಕ್ಷದ ಹೈಕಮಾಂಡ್ ಮಾಡಿದಂತೆ ಕಾಣಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿ ನೋವಿನ ಶಸ್ತ್ರ ಚಿಕಿತ್ಸೆಗೆ ತೆರಳುವ ವಿದೇಶ ಪ್ರವಾಸವನ್ನೂ ಮುಂದೂಡುವಂತೆ ಹೈ ಕಮಾಂಡ್ ಸೂಚಿಸಿದೆ ಎಂಬ ಮಾಹಿತಿ ಇದೆ. ಅದೇ ಕಾರಣಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಸೇರಿದಂತೆ ಪ್ರಮುಖ ನಾಯಕರು ರಾಜ್ಯದಲ್ಲಿ ಸಧ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ರವಾನಿಸುತ್ತಿರುವಂತೆ ಕಾಣಿಸುತ್ತಿದೆ.

ಹಿಂದಿನ ನಿದರ್ಶನಗಳು: ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಒಂದೇ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಯಾದಗಲೆಲ್ಲ ನಂತರದ ಚುನಾವಣೆಯಲ್ಲಿ ಅಧಿಕಾರದಿಂದ ದೂರ ಉಳಿದಿವೆ.  1989 ರಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತಗಳಿಸಿ ಅಧಿಕಾರಕ್ಕೆ ಬಂತು. ಅತ್ಯಲ್ಪ ಅವಧಿಯಲ್ಲಿಯೇ  ಅತ್ಯುತ್ತಮ ಆಡಳಿತ ನೀಡಿದ ವೀರೇಂದ್ರ ಪಾಟೀಲ್ ಅವರ ಮುತ್ಸದಿತನವನ್ನೂ ಲೆಕ್ಕಿಸದೇ ಕಾಂಗ್ರೆಸ್ ಹೈ ಕಮಾಂಡ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿತು. ನಂತರ ಬಂಗಾರಪ್ಪ ತದ ನಂತರ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದರು. ಈ ಬಳಿಕ ಅಧಿಕಾರಕ್ಕೆ ಬಂದಿದ್ದು ಜನತಾ ಪರಿವಾರ. ಯಡಿಯೂರಪ್ಪ 2008ರಲ್ಲಿ ಅಧಿಕಾರಕ್ಕೆ ಬಂದ ನಂತರವೂ ಪೂರ್ಣಾವಧಿ ಪೂರೈಸದೇ ತಾವೇ ಸೂಚಿಸಿದ ಸದಾನಂದ ಗೌಡರಿಗೆ ಮುಖ್ಯಮಂತ್ರಿ ಅಧಿಕಾರ ಬಿಟ್ಟುಕೊಡಬೇಕಾಯಿತು. ಮತ್ತೆ ಭಿನ್ನಮತ, ಬಂಡಾಯ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು. ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು.

ಕಾಲ ಚಕ್ರ ತಿರುಗಿದೆ. ಮತ್ತೆ ಯಡಿಯೂರಪ್ಪ 2018ರಲ್ಲಿ ಮುಖ್ಯಮಂತ್ರಿಯಾದರು. ಅವರೂ ಅಧಿಕಾರದಿಂದ ಇಳಿಯುವಂತಾಯಿತು. ಅವರೇ ಸೂಚಿಸಿದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಅವರ ಪಕ್ಷದ  ಕೆಲವರು ಪ್ರಮುಖವಾಗಿ ಕೆ.ಎಸ್. ಈಶ್ವರಪ್ಪ ಪದೇಪದೇ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಆದರೆ ಅಧಿಕಾರ ಸ್ವೀಕರಿಸಿದ ನಂತರ ಕಡಿಮೆ ಅವಧಿಯಲ್ಲಿಯೇ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸಿ ಮುಂದಿನ ಬಾರಿಯ ಅಧಿಕಾರವನ್ನು ಹರಿವಾಣದಲ್ಲಿಟ್ಟು ಬೇರೆ ಪಕ್ಷಕ್ಕೆ ಬಿಟ್ಟು ಕೊಡುವ ತಪ್ಪನ್ನು ಬಿಜೆಪಿ ಹೈಕಮಾಂಡ್ ಮಾಡುವುದಿಲ್ಲ ಎಂಬ ಮಾತನ್ನು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಆಡಳಿತದ ಮೇಲೆ ಪರಿಣಾಮ:  ಆಡಳಿತ ಪಕ್ಷದಲ್ಲಿ ರಾಜಕೀಯವಾಗಿ ನಾಯಕತ್ವಕ್ಕಾಗಿ ಈ ರೀತಿಯ ಆಂತರಿಕ ಸಂಘರ್ಷ ಏರ್ಪಡುವುದರಿಂದ ಆಡಳಿತ ಯಂತ್ರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಯಡಿಯೂರಪ್ಪ ಅವರು ಅಧಿಕಾರ ನಡೆಸಿದ ಎರಡು ವರ್ಷದಲ್ಲಿ ಒಂದೂವರೆ ವರ್ಷ ರಾಜ್ಯದ ಅಭಿವೃದ್ಧಿ ವಿಷಯಕ್ಕಿಂತ. ನಾಯಕತ್ವ ಬದಲಾವಣೆಯ ವಿಷಯವೇ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಈಗ ಬೊಮ್ಮಾಯಿ ಸಿಎಂ ಅಗಿ ನಾಲ್ಕು ತಿಂಗಳು ಪೂರೈಸುವಷ್ಟರಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದ್ದು, ರಾಜ್ಯದ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.

ಇನ್ನೂ ಒಂದೂವರೆ ವರ್ಷ ಅಧಿಕಾರ ಇರುವಾಗಲೇ ಈ ರೀತಿಯ ಬೆಳವಣಿಗೆ ನಡೆದರೆ ಅಧಿಕಾರಿಗಳು ಯಾವ ಮಂತ್ರಿಯ ಮಾತುಗಳನ್ನೂ ಕೇಳುವುದಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಆಡಳಿತ ಯಂತ್ರ ಸ್ಪಂದಿಸದಂತಾಗುತ್ತದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ದೊಡ್ಡ ಹೊಡೆತ ಬೀಳಲಿದೆ. ಬಿಜೆಪಿ ರಾಷ್ತನಾಯಕರು ಈ ಗೊಂದಲಕ್ಕೆ ಸ್ಪಷ್ಟ ತೆರೆ ಎಳೆಯದಿದ್ದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬೆಲೆ ತೆರಬೇಕಾಗುತ್ತದೆ

ರಾಜಕೀಯ

ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ: ಮುಖ್ಯಮಂತ್ರಿ ಬೊಮ್ಮಾಯಿ

Published

on

ಬಿಜೆಪಿ ಶಾಸಕರ ವಲಸೆ ಸುಳ್ಳು 

ಬೆಂಗಳೂರು: ಜನವರಿ 26 (ಯು.ಎನ್.ಐ)  ಕೆ.ಪಿ.ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದೆ ಹೋಗಿದ್ದಾರೆ ಎಂದು ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಇವರ ತಿಕ್ಕಾಟದಿಂದ ಮುಂದಿನ ದಿನಗಳಲ್ಲಿ ಬಹಳಷ್ಟ ಜನ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆಯೇ ಹೊರೆತು ಅಲ್ಲಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ಸಚಿವರು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬರಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪುನರುಚ್ಚರಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ʼಮೊದಲು ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆʼ -ʼಬಂದೇ ಬಿಡುತ್ತಾರೆʼಎಂದರು. ಈಗ ಚುನಾವಣಾ ಸಂದರ್ಭದಲ್ಲಿ ಬರಲಿದ್ದಾರೆ ಎನ್ನುತ್ತಿದ್ದಾರೆ. ಅಂದರೆ ಮೊದಲು ಮಾತನಾಡಿದ್ದು ಸುಳ್ಳು ಎಂದು ಸ್ಷಷ್ಟವಾಗುತ್ತದೆ ಎಂದರು.

ಯಾವ ಶಾಸಕರು ಬರುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಕಾಂಗ್ರೆಸ್‍ನಲ್ಲಿ ಆಂತರಿಕವಾಗಿ ಸ್ಪರ್ಧೆ ಇದೆ. ಡಿ.ಕೆ.ಶಿವಕುಮಾರ್ ಅವರು ಅವರು, ಇವರ ಬಳಿ ಮಾತನಾಡಿದ್ದೇನೆ ಎಂದು ಅಲ್ಲಲ್ಲಿ ಸುದ್ದಿ ಮಾಡುತ್ತಾರೆ ಎಂದರು.

ಕಾಂಗ್ರೆಸ್ ಅಪ್ರಸ್ತುತವಾಗಲಿದೆ: ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತಿತ್ವವೇ ಇಲ್ಲ. ಪಂಜಾಬ್‍ನಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಗೋವಾದಲ್ಲಿ ಅಧಿಕಾರಕ್ಕೆ ಬರುವ ಪರಿಸ್ಥಿತಿಯೇ ಇಲ್ಲ. ಹೀಗಾಗಿ ಈ ಐದೂ ರಾಜ್ಯಗಳ ಚುನಾವಣೆಯಾದ ಮೇಲೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗಲಿದೆ. ರಾಷ್ಟ್ಟಮಟ್ಟದಲ್ಲಿ ಒಂದು ಪಕ್ಷ ಅಪ್ರಸ್ತುತವಾದಾಗ ಅದರ ಕರಿನೆರಳು ರಾಜ್ಯದ ಕಾಂಗ್ರೆಸ್ ಮೇಲೂ ಹಾಗೂ ರಾಜಕಾರಣದ ಮೇಲೂ ಆಗಲಿದೆ. ಅದರ ಪರಿಣಾಮವನ್ನು ಬರುವ ದಿನಗಳಲ್ಲಿ ಕಾಣಲಿದ್ದೇವೆ ಎಂದರು.
ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯನವರು ಪೈಪೋಟಿ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೇ ಉತ್ತರಿಸುತ್ತಾ, ಅದು ಆಂತರಿಕ ಪೈಪೋಟಿ. ಅವರ ಮಾತುಗಳಲ್ಲಿ ಯಾವುದೇ ಸತ್ಯಾಂಶವೂ ಇಲ್ಲ ವಾಸ್ತವಾಂಶವೂ ಇಲ್ಲ. ಆ ಭೂಮಿಕೆಯೇ ಇಲ್ಲ ಎಂದರು.
ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆಯೇ ಎಂಬ ಪ್ರಶ್ನೆಗೆ , ನಾನು ಎಲ್ಲಿಯೂ ಈ ರೀತಿ ಹೇಳಿಲ್ಲ ಎಂದರು. ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರ ಬಳಿ ಯಾರು ಸಂಪರ್ಕದಲ್ಲಿದ್ದಾರೆ ಎಂದು ವಿಚಾರಣೆ ಮಾಡುವುದಾಗಿ ತಿಳಿಸಿದರು. ನಿಮ್ಮ ಸಂಪರ್ಕದಲ್ಲಿ ಯಾರಾದರೂ ಇದ್ದಾರೆಯೇ ಎಂಬ ಪ್ರಶ್ನೆಗೆ – ʼನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅದರ ಬಗ್ಗೆ ಮಾತನಾಡಲು ನಾನು ಸಿದ್ಧವಿಲ್ಲ. ಅವರ ಹಾಗೆ ಬೇಜವಾಬ್ದಾರಿಯಿಂದ ಮಾತನಾಡಲು ಸಾಧ್ಯವಿಲ್ಲʼ ಎಂದರು.

ರಮೇಶ್ ಜಾರಕಿಹೊಳಿಯವರು ಆಪರೇಷನ್ ಕಮಲದ ಉಸ್ತುವಾರಿ ವಹಿಸಿಕೊಂಡಂತೆ ಮಾತನಾಡುತ್ತಿದ್ದು, ಎಲ್ಲಿ ಹೋದರೂ 15- 20 ಜನ ಬರಲಿದ್ದಾರೆ ಎನ್ನುತ್ತಾರೆ. ನಳಿನ್ ಕುಮಾರ್ ಕಟೀಲ್ ಸಹ ಅದನ್ನೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅದೆಲ್ಲಾ ಗೊತ್ತಿರುವ ವಿಚಾರ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಚುನಾವಣೆ ಬಳಿಕ ನಮ್ಮನ್ನು ಬಿಟ್ಟು ಯಾರೂ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಅವರ ಸದಾಶಯ ಯಾವಾಗಲೂ ಹಾಗೆಯೇ ಇರುತ್ತದೆ. ಅತಂತ್ರವಾದರೆ ಅವರು ಸ್ವತಂತ್ರರಾಗುತ್ತಾರೆ ಎಂದು ಸಹಜವಾಗಿ ಆಶಿಸುತ್ತಾರೆ ಎಂದರು.

Continue Reading

ರಾಜಕೀಯ

ನಾರಾಯಣಗುರು ಟ್ಯಾಬ್ಲೋಗೆ ನಿರಾಕರಣೆ; ಕಾಂಗ್ರೆಸ್‌ ಆಕ್ರೋಶ

Published

on

ಬೆಂಗಳೂರು: ಜನೆವರಿ ೨೬ (ಯು.ಎನ್.‌ಐ.) ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ನಾರಾಯಣ ಗುರು ಟ್ಯಾಬ್ಲೋಗೆ ಅವಕಾಶ ನಿರಾಕರಣೆಯಾಗಿರುವುದಕ್ಕೆ ರಾಜ್ಯ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಪಕ್ಷದ ನಾಯಕರು ಹೇಳಿಕೆ ನೀಡಿದ್ದಾರೆ.

ನಾರಾಯಣಗುರು ಒಬ್ಬ ದಾರ್ಶನಿಕರು. ಕೇರಳದಲ್ಲಿ ಜಾತೀಯತೆ ಹೆಚ್ಚಿತ್ತು. ನಂಬೂದರಿಗಳ ದೌರ್ಜನ್ಯ ಹೆಚ್ಚಾಗಿತ್ತು. ಕೆಳಗಿನವರನ್ನು ಅಸ್ಪೃಶ್ಯರ  ರೀತಿ ನೋಡ್ತಿದ್ರು. ಗುರುಗಳು ಇದರ ವಿರುದ್ಧ ಚಳುವಳಿ ಆರಂಭಿಸಿದ್ರು. ಮನುಷ್ಯರೆಲ್ಲ ಒಂದೇ ದೇವರು ಒಬ್ಬನೇ ಎಂದ್ರು. ನೀವೇ ದೇಗುಲ ಕಟ್ಟಿ ಪೂಜೆ ಮಾಡಿ ಎಂದ ಇದ್ದರು. ಜನರಲ್ಲಿ ಜಾಗೃತಿ ಮೂಡಿಸಿದ್ದವರು. ಅಂತಹ ವ್ಯಕ್ತಿ ಟ್ಯಾಬ್ಲೋವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಪೆರೇಡ್ ನಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಅಕ್ಷಮ್ಯ ಅಪರಾಧ ವೆಸಗಿದೆ. ಜನರು ಇವತ್ತು ಪ್ರತಿಭಟನೆ ನಡೆಸ್ತಿದ್ದಾರೆ. ಅವರಿಗೆ ನೋವಾಗಿದೆ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ  ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ನಾವು ಬಿಟ್ಟು ಹೋದವರನ್ನ ಸೇರಿಸಿಕೊಳ್ತೇವೆಂದು ಎಲ್ಲಿ ಹೇಳಿದ್ದೇವೆ ? ಕಾಂಗ್ರೆಸ್ ಸಿದ್ಧಾಂತ ಒಪ್ಪಿಬಂದವರಿಗೆ ಸ್ವಾಗತ. ಇದನ್ನೇ ನಾನೂ ಹೇಳಿದ್ದೇನೆ. ಕಾಂಗ್ರೆಸ್ ಬಿಟ್ಟವರನ್ನ ಸೇರಿಸಿಕೊಳ್ಳಲ್ಲ. ಅಸೆಂಬ್ಲಿಯಲ್ಲೇ ನಾನು ಈ ಬಗ್ಗೆ ಹೇಳಿದ್ದೇನೆ. ನಾನು ನಾನಾಗಿ ಯಾರ ಜೊತೆ ಮಾತನಾಡಲ್ಲ. ಅವರಾಗಿ ಬಂದರೆ ಮಾತ್ರ ಮಾತನಾಡ್ತೇನೆ. ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ಅವರ ಹೇಳಿಕೆಗೆ ಮಾತನಾಡಲ್ಲ. ನೋ ನೋ ನಾನು ಮಾತನಾಡಲ್ಲ ಎಂದು ಪುನರುಚ್ಛರಿಸಿದರು.

ವಿಧಾನಸಭೆ ಚುನಾವಣೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ನನಗೆ ಎಲ್ಲ ಕಡೆ ನಿಲ್ಲಿ ಅಂತಾರೆ. ಕೋಲಾರ,ಕೊಪ್ಪಳ,ಚಾಮರಾಜಪೇಟೆಯಲ್ಲೂ ನಿಲ್ಲಿ ಅಂತಾರೆ. ಚಾಮುಂಡೇಶ್ವರಿಯಲ್ಲೂ ನಿಲ್ಲಿ ಅಂತಾರೆ. ವರುಣಾದಲ್ಲೂ ನಿಲ್ಲಿ ಅಂತಾರೆ ನಾನೇ ಬೇಡ ಅಂತ ಸುಮ್ಮನಾಗಿದ್ದೇನೆ ಎಂದರು.

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಅದಕ್ಕೆ ನಾರಾಯಣಗುರು ಸ್ಥಬ್ಧ ಚಿತ್ರ ಕಳಿಸಲಾಗಿತ್ತು. ಆದರೆ  ಕೇಂದ್ರ ಸರ್ಕಾರ ಸ್ಥಬ್ಧ ಚಿತ್ರ ತಿರಸ್ಕರಿಸಿದೆ. ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಹಿರಿಯರನ್ನ ಕಡೆಗಣಿಸಿದೆ. ತಮಿಳುನಾಡಿನ ವೀರಬೊಮ್ಮನ್ ಕೂಡ ಕಡೆಗಣಿಸಿದೆ. ಒನ್ ನೇಷನ್,ಒನ್ ಕಲ್ಚರ್ ಅಂತಾರೆ. ಆದರೆ ನಾರಾಯಣಗುರುಗಳ ಸ್ಥಬ್ಧ ಚಿತ್ರವನ್ನ ತಿರಸ್ಕರಿಸಿದ್ದಾರೆ. ಪ್ರಧಾನಿ ಮೋದಿಯವರು ಕ್ಷಮೆಕೇಳಬೇಕು ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದ್ದಾರೆ.

Continue Reading

ರಾಜಕೀಯ

ಸಿದ್ದರಾಮಯ್ಯ ಹೇಳಿಕೆಗೆ ಅಶೋಕ್ ತಿರುಗೇಟು

Published

on

ಬೆಂಗಳೂರು: ಜನೆವರಿ ೨೬ (ಯು.ಎನ್.‌ಐ.) ಕಾಂಗ್ರೆಸ್ ನ 20 ಮಂದಿ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಸಂಪರ್ಕದಲ್ಲಿ ನಮ್ಮವರು ಯಾರೂ ಇಲ್ಲ ಅವರು  ಕುಚೋದ್ಯದ ಹೇಳಿಕೆ ಕೊಡ್ತಿದಾರೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿರುಗೇಟು ನೀಡಿದರು.

ಇಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಾದಯಾತ್ರೆ ಅರ್ಧಕ್ಕೆ ಮೊಟಕಾಗಿದ್ದು ಅವರಿಗೆ ಭ್ರಮನಿರಸನ ಆಗಿದೆ. ಅಪಶಕುನ ಅದು ಅವರಿಗೆ ಅನ್ಕೊಂಡಿದ್ದಾರೆ. ಹೀಗಾಗಿ ಅವರು ಒಳ್ಳೆಯ ಶಕುನಕ್ಕಾಗಿ ಕಾಯುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷದವರು ಎಲ್ಲ ನದಿಗಳ ಹೆಸರೂ ನೆನಪಿಸಿಕೊಳ್ತಾರೆ ಚುನಾವಣೆ ಅಂತ ಎಲ್ಲ ನದಿಗಳ ಮೇಲೂ ಅವರಿಗೆ ಪ್ರೀತಿ ಉಕ್ಕುತ್ತೆ ಚುನಾವಣೆ ಮುಗಿದ ಮೇಲೆ ಯಾವ ನದಿಯ ಹೆಸರೂ ಅವರಿಗೆ ನೆನಪಿರಲ್ಲ. ಯಾವ ನದಿ ಎಲ್ಲಿ ಹುಟ್ಟುತ್ತೆ, ಹರಿಯುತ್ತೆ ಅಂತ ಗೊತ್ತಿರಲ್ಲ ಅವರಿಗೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸುಳ್ಳು ಸುದ್ದಿಗಳು ಈ ಬಗ್ಗೆ ಬರ್ತಿವೆ. ಯಾರೋ ಜ್ಯೋತಿಷ್ಯಾಲಯ ತೆರೆದು ಈ ಸುದ್ದಿ ಹಬ್ಬಿಸ್ತಿದಾರೆ ನಾನೂ‌ ವರಿಷ್ಠರ ಜತೆಗೆ ಸಂಪರ್ಕದಲ್ಲಿದ್ದೇನೆ. ಇದು ಗಾಳಿ ಸುದ್ದಿ, ಗಾಳಿಯಲ್ಲೇ ಹರಿದು ಹೋಗುವ ಸುದ್ದಿ ಅವು. ಬದಲಾವಣೆ ಸಂಬಂಧ ನಮ್ಮ ಪಕ್ಷದಲ್ಲಿ ಚರ್ಚೆ ಆಗ್ತಿಲ್ಲ. ಕುಚೋದ್ಯದ ಹೇಳಿಕೆಗಳನ್ನು ಕೆಲವರು ಕೊಡ್ತಿದಾರೆ. ಈ ಅವಧಿ ಪೂರ್ತಿ ಬೊಮ್ಮಾಯಿ ಅವರೇ ಸಿಎಂ ಆಗಿರ್ತಾರೆ ಮುಂದಿನ ಚುನಾವಣೆಯನ್ನೂ ಬೊಮ್ಮಾಯಿ ನೇತೃತ್ವದಲ್ಲೇ ನಡೆಸ್ತೇವೆ ಎಂದು  ಸಿಎಂ ಪರ ಆರ್ ಅಶೋಕ್ ಬ್ಯಾಟಿಂಗ್ ಮಾಡಿದರು.

 ಜಿಲ್ಲಾ ಉಸ್ತುವಾರಿ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ಸಿಎಂ ನನ್ನ ಜತೆ ಚರ್ಚೆ ನಡೆಸಿಯೇ ಈ ನಿರ್ಣಯ ಮಾಡಿದ್ದಾರೆ. ನಮ್ಮಲ್ಲಿ ಉಸ್ತುವಾರಿ ಹಂಚಿಕೆಯಲ್ಲಿ ಗೊಂದಲ ಇಲ್ಲ.  ನಾನು ಒಂದೂವರೆ ವರ್ಷದ ಹಿಂದೆಯೇ ಜಿಲ್ಲಾ ಉಸ್ತುವಾರಿ ಬೇಡ ಅಂದಿದ್ದೆ. ಯಡಿಯೂರಪ್ಪ ಅವಧಿಯಲ್ಲೂ ಉಸ್ತುವಾರಿ ಇರಲಿಲ್ಲ, ಈಗಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಯಾವ ಸಚಿವರೂ, ಶಾಸಕರೂ ಕಾಂಗ್ರೆಸ್ ಗೆ ಹೋಗಲ್ಲ. ಸೂರ್ಯ ಚಂದ್ರ ಇರೋವರೆಗೂ‌ ೧೭ ಜನರನ್ನು ಸೇರಿಸಿಕೊಳ್ಳಲ್ಲ ಅಂದಿದ್ರು ಸಿದ್ದರಾಮಯ್ಯ. ಅವರಿಗೆ ಸೋಲುವ ಭಯ ಕಾಡ್ತಿದೆ ಹೀಗಾಗಿ ಈಥರದ ಹೇಳಿಕೆಗಳನ್ನು ಕೊಡ್ತಿದಾರೆ ಎಂದು ವ್ಯಂಗ್ಯವಾಡಿದರು.

Continue Reading
Advertisement
ದೇಶ10 mins ago

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ; ಶಾಲಾ-ಕಾಲೇಜುಗಳು ಬಂದ್

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ  ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು...

ಕ್ರೀಡೆ26 mins ago

ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

ಮುಂಬೈ: ಜನೆವರಿ ೨೭ (ಯು.ಎನ್.ಐ.) ಇತ್ತೀಚೆಗೆ ಬಿಟ್‌ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್...

ಸಿನೆಮಾ47 mins ago

ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ನಟ ನಾಗಾರ್ಜುನ ಕೊಟ್ಟ ಕಾರಣ ಏನು?

ಹೈದರಾಬಾದ್: ಜನೆವರಿ 27 (ಯು.ಎನ್.ಐ.) ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಮದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ...

ದೇಶ1 hour ago

ಅನ್ಯ ಜಾತಿ ಹುಡುಗಿ ಮದುವೆಯಾದ ಮಗ: ತಾಯಿ ಮೇಲೆ ಹಲ್ಲೆ

ಚೆನ್ನೈ: ಜನೆವರಿ 27 (ಯು.ಎನ್.ಐ.) ಅನ್ಯ ಜಾತಿಯ ಹುಡುಗಿಯನ್ನು ಮಗ ವಿವಾಹವಾದ ಕಾರಣ ತಾಯಿಯನ್ನು ದೀಪದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುಚುಲಿ...

ಸಿನೆಮಾ2 hours ago

‘ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾರೆ’ – ನಟಿ ಶ್ವೇತಾ ತಿವಾರಿ

ಭೋಪಾಲ್: ಜನೆವರಿ 27 (ಯು.ಎನ್.ಐ.) ಕಿರುತೆರೆ ಹಾಗೂ ಹಿಂದಿ ಫಿಲಂ ನಟಿ ಶ್ವೇತಾ ತಿವಾರಿ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫ್ಯಾಶನ್ ಸಂಬಂಧಿತ ವೆಬ್ ಸರಣಿಯ...

ಸಿನೆಮಾ2 hours ago

ವಿವಾಹ ಜೀವನಕ್ಕೆ ಕಾಲಿರಿಸಿದ ಮೌನಿರಾಯ್, ಸೂರಜ್ ನಂಬಿಯಾರ್

ಪಣಜಿ: ಜನೆವರಿ 27 (ಯು.ಎನ್.ಐ.) ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ಇಂದು ಗೋವಾದಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಇವರ ವಿವಾಹದ ಫೋಟೋಗಳು...

ದೇಶ2 hours ago

ಕಾಂಗ್ರೆಸ್ ಉಚ್ಛಾಟಿತ ನಾಯಕ ಕಿಶೋರ್ ಉಪಾಧ್ಯಾಯ ಬಿಜೆಪಿಗೆ ಸೇರ್ಪಡೆ

ಡೆಹ್ರಾಡೂನ್: ಜನೆವರಿ 27 (ಯು.ಎನ್.ಐ.) ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮುನ್ನ, ಉಚ್ಛಾಟಿತ ರಾಜ್ಯ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ ಗುರುವಾರ ಭಾರತೀಯ ಜನತಾ ಪಕ್ಷ (ಬಿಜೆಪಿ)...

ಕ್ರೀಡೆ2 hours ago

ವೆಸ್ಟ್ ಇಂಡೀಸ್ ತಂಡ ಪ್ರಕಟ; ಕೆಮರ್ ರೋಚ್‌ಗೆ ಬುಲಾವ್!

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ಫೆಬ್ರುವರಿ 6 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಕೆಮರ್ ರೋಚ್,...

ದೇಶ3 hours ago

ನಾಲ್ಕು ವಿಮಾನಗಳಲ್ಲಿ “ಹೆಚ್ಚಿನ ಊಟ ಸೇವೆ” ಒದಗಿಸಲು ಮುಂದಾದ ಟಾಟಾ ಗ್ರೂಪ್

ನವದೆಹಲಿ: ಜನೆವರಿ 27 (ಯು.ಎನ್.ಐ.) ಸುಮಾರು 69 ವರ್ಷಗಳ ನಂತರ ಭಾರತ ಸರ್ಕಾರವು ಇಂದು ಅಧಿಕೃತವಾಗಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ಗೆ ಹಸ್ತಾಂತರ ಮಾಡಲಿದೆ. ಮೂಲಗಳ ಪ್ರಕಾರ,...

ವಿದೇಶ3 hours ago

ಪ್ಯಾರಿಸ್ ನಲ್ಲಿ 8 ಗಂಟೆ ಸಭೆ; ರಷ್ಯಾ ಉಕ್ರೇನ್ ಮಧ್ಯೆ ಕದನ ವಿರಾಮ

ಪ್ಯಾರಿಸ್: ಜನೆವರಿ 27 (ಯು.ಎನ್.ಐ.) ಉಕ್ರೇನ್ ಮತ್ತು ರಷ್ಯಾ ನಡುವೆ ಪೂರ್ವ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಪರಿಹಾರದ ಸುದ್ದಿ ಬಂದಿದೆ. ಬುಧವಾರ ಪ್ಯಾರಿಸ್‌ನಲ್ಲಿ ಎಂಟು ಗಂಟೆಗಳ...

ಟ್ರೆಂಡಿಂಗ್

Share