Connect with us


      
ಜಾನಪದ

ರೈತರ ಪರ  ಸರ್ಕಾರ  ಗಟ್ಟಿಯಾಗಿ  ನಿಲ್ಲಲಿದೆ ….. ಮುಖ್ಯಮಂತ್ರಿ ಬೊಮ್ಮಾಯಿ

Published

on

 

ಮೈಸೂರು, ಡಿ.೨೬(ಯುಎನ್ ಐ) ರೈತರು ಎಲ್ಲಾ ರಾಜಕೀಯ ಪಕ್ಷಗಳ ಬೆನ್ನೆಲುಬಿದ್ದಂತೆ. ಚಳವಳಿ ಹಾಗು ರಾಜಕಾರಣದ ನಡುವೆ ಸಂಬಂಧ ಇರಬೇಕಿತ್ತು. ಆದರೆ ವಾಸ್ತವದಲ್ಲಿ ಹಾಗಾಗಲಿಲ್ಲ. ಆಹಾರ ಕೊಂಡುಕೊಂಡವನ ಜೇಬು ಭರ್ತಿಯಾಗಿದೆ. ಆಹಾರ ಉತ್ಪಾದನೆ ಮಾಡಿದ ರೈತನ ಜೇಬು ಖಾಲಿಯಾಗಿದೆ.

ಇಲ್ಲಿನ ಕಲಾಮಂದಿರದಲ್ಲಿ ಇಂದು ಆಯೋಜಿಸಿದ್ದ ರೈತ ಸಮಾವೇಶ ಹಾಗೂ ರೈತ ಹೋರಾಟದಲ್ಲಿ ೪೦ವರ್ಷ ಪೂರೈಸಿರುವ ಕುರುಬೂರು ಶಾಂತಕುಮಾರ್ ಸನ್ಮಾನ ಸಮಾರಂಭದಲ್ಲಿ ಕುರುಬೂರು ಶಾಂತಕುಮಾರ್ ಗೆ ರೈತರತ್ನ ಬಿರುದು, ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿ ಮಾತನಾಡಿದರು.

ಉತ್ಪಾದನೆ ಕಡಿಮೆ ಆದರೂ ಸಮಸ್ಯೆ, ಹೆಚ್ಚಾದರೂ ಸಮಸ್ಯೆಯಾಗಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಹಾರ ಉತ್ಪಾದನೆ ಜಾಸ್ತಿಯಾಗಿದೆ. ಕೃಷಿ ಮತ್ತು ರೈತನ ಮೇಲೆ ನಮ್ಮ ಲಕ್ಷ್ಯ ಇರಬೇಕು. ರೈತರ ಆದಾಯ ಹೆಚ್ಚಾದರೆ ರೈತಾಪಿ ವರ್ಗದ ಸ್ಥಿತಿ ಸುಧಾರಿಸಲಿದೆ.
ಕೇವಲ ಕೃಷಿಯ ಆದಾಯದಿಂದ ರೈತನ ಬದುಕು ಹಸನಾಗುತ್ತಿಲ್ಲ ಹಾಗಾಗಿ ಇತರ ಮೂಲಗಳಿಂದ ರೈತರ ಆದಾಯ ಹೆಚ್ಚಿಸುವ ಚಿಂತನೆಯನ್ನು ಸರ್ಕಾರ ಮಾಡುತ್ತಿದೆ.

ಬೆಳೆ ನಿಯಂತ್ರಣ, ಬೆಲೆ ನಿಗಧಿ ಬಹು ದೊಡ್ಡ ಸಮಸ್ಯೆಯಾಗಿದೆ. ಡಬ್ಯ್ಲುಟಿಒ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ನಮ್ಮ ಹಣೆ ಬರಹ ಬದಲಾಯಿತು. ಈ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದಾಗ ದೂರಗಾಮಿ ಪರಿಣಾಮಗಳು ಬೀರುತ್ತವೆ. ಇದೆಲ್ಲದರ ಪರಿಣಾಮ ಸಾಲದ ಸಂಕೋಲೆಯಲ್ಲಿ ರೈತ ಸಿಲುಕಿದ್ದಾನೆ.

ಅಂತರರಾಷ್ಟ್ರೀಯ ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯಿಂದ ಹೊರ ಬಂದರೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಮೈಷುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಶ್ರೀರಾಮ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕೆ ಎದುರಾಗಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಹ ಕ್ರಮ ಕೈಗೊಳ್ಳಲಾಗುವುದು.

ರೈತರ ಪರ ರಾಜ್ಯ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ. ರೈತರ ಧ್ವನಿಗೆ ನಾವು ಧ್ವನಿಯಾಗಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ರೈತ ಸಮಾವೇಶದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತ ಪರ ಕಾಳಜಿವುಳ್ಳವರಾಗಿದ್ದಾರೆ. ರೈತರಿದ್ದರಷ್ಟೇ ಜಗತ್ತು ಬದುಕಲಿದೆ, ಉಳಿಯಲಿದೆ . ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕು, ಅತಿವೃಷ್ಠಿಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರವನ್ನು ರೈತರು ಕೇಳುತ್ತಾರೆ. ಯಾವುದೇ ಗಂಭೀರ ಸಮಸ್ಯೆ ಎದುರಾದರೂ ರೈತರು ಎದೆಗುಂದಬಾರದು, ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಆತ್ಮಹತ್ಯೆಯಂತಹ ಯೋಚನೆ ಮಾಡಬಾರದು.
ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಲಿದೆ, ಅಲ್ಲದೇ ಬೆಳೆದ ಉತ್ಪನ್ನಗಳನ್ನು ಸೇವಿಸುವ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆ ಮಾಡಬಾರದು ಎಂದರು.

 

Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

ಏಮ್ಸ್‌ನಲ್ಲಿ 250 ವೈದ್ಯರು, ಸಿಬ್ಬಂದಿಗೆ ಕೊರೊನಾ … OPD ಸೇವೆ ಸ್ಥಗಿತ

Published

on

By

ಭುವನೇಶ್ವರ, ಜ 17(ಯುಎನ್‌ ಐ) ಒಡಿಶಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನಲ್ಲಿ ಸುಮಾರು 250 ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ಇದರಿಂದಾಗಿ ಹೊರ ರೋಗಿಗಳ ಚಿಕಿತ್ಸಾ ವಿಭಾಗ (ಒಪಿಡಿ) ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಪ್ರೊಫೆಸರ್ ಸಚ್ಚಿದಾನಂದ ಮೊಹಾಂತಿ ಹೇಳಿದ್ದಾರೆ. ತುರ್ತು ಪ್ರಕರಣಗಳಿಗೆ ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ. ಕೋವಿಡ್ ಸೋಂಕಿನಿಂದ ಆಸ್ಪತ್ರೆಯನ್ನು ಸುಗಮವಾಗಿ ನಡೆಸಲು ಒಪಿಡಿ ಸೇವೆಗಳನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಅವರು ಹೇಳಿದ್ದಾರೆ. ಭುವನೇಶ್ವರ್ ಏಮ್ಸ್‌ನಲ್ಲಿ ಸ್ವಾಸ್ಥ್ಯ ಆಪ್, ಟೆಲಿಮೆಡಿಸಿನ್ ವಾಟ್ಸಾಪ್ ಕರೆ ಸೇವೆಗಳು ಮೊದಲಿನಂತೆ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

Continue Reading

ಕರ್ನಾಟಕ

ಒಂದು ವರ್ಷದಲ್ಲಿ 156 ಕೋಟಿ ಲಸಿಕೆ: ಪ್ರಪಂಚದಲ್ಲೇ ಅಗ್ರಸ್ಥಾನದ ಹಿರಿಮೆ

Published

on

ಬೆಂಗಳೂರು : ಜನೆವರಿ 16 (ಯು.ಎನ್.ಐ.) ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಖುದ್ದು ಆಸಕ್ತಿಯೊಂದಿಗೆ ಆರಂಭವಾದ ಲಸಿಕಾ ಅಭಿಯಾನದ ಮೂಲಕ ಒಂದು ವರ್ಷದ ಅವಧಿಯಲ್ಲಿ 156 ಕೋಟಿ ಲಸಿಕೆಗಳನ್ನು ಕೊಡಲಾಗಿದ್ದು, ಭಾರತವು ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಲಸಿಕೆಗಳನ್ನು ಕೊಟ್ಟ ರಾಷ್ಟ್ರವೆಂಬ ಹಿರಿಮೆಗೆ ಪಾತ್ರವಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದರು.

ಲಸಿಕಾ ಅಭಿಯಾನ ಶುರುವಾಗಿ ಒಂದು ವರ್ಷವಾಗಿದ್ದು, ದೇಶದಲ್ಲಿ ಕೊಡಲಾಗಿರುವ 156 ಕೋಟಿ ಲಸಿಕೆಗಳ ಪೈಕಿ 99 ಕೋಟಿ ಲಸಿಕೆಗಳು ಗ್ರಾಮೀಣ ಭಾಗದಲ್ಲಿ ಬಳಕೆಯಾಗಿವೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಬಹುತೇಕ ಲಸಿಕೆ ತೆಗೆದುಕೊಂಡಿದ್ದು, ಸಮಾಜದ ವಿವಿಧ ವಲಯಗಳ ಬೆಂಬಲದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದ ಸಚಿವರು, ಇದಕ್ಕಾಗಿ ಪ್ರಧಾನಿಯವರನ್ನು ಅಭಿನಂದಿಸಿದರು.

ಲಸಿಕಾ ಅಭಿಯಾನ ಯಶಸ್ವಿಯಾಗಿರುವುದರಿಂದ ಸೋಂಕಿನ ಮಧ್ಯೆಯೂ ನಾವು ಹೆಚ್ಚು ಆತಂಕವಿಲ್ಲದೆ ಬದುಕಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Continue Reading

ಕರ್ನಾಟಕ

ಮೇಕೆದಾಟು ಪಾದಯಾತ್ರೆ ಕೈಬಿಡುವಂತೆ ಸಿದ್ದರಾಮಯ್ಯಗೆ ಎಸ್.ಎಂ.ಕೃಷ್ಣ ಪತ್ರ

Published

on

ಬೆಂಗಳೂರು : ಜನೆವರಿ 12 (ಯು.ಎನ್.ಐ.) ನಾಡಿನ ಜನರ ಆರೋಗ್ಯ ದೃಷ್ಟಿಯಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ಮೊಟಕುಗೊಳಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆಗ್ರಹಿಸಿದ್ದಾರೆ. ಪಾದಯಾತ್ರೆಯನ್ನು ಏಕೆ ನಿಲ್ಲಿಸಬೇಕೆಂಬ ಬಗ್ಗೆ ಸುದೀರ್ಘ ಪತ್ರ ಬರೆದಿರುವ ಎಸ್.ಎಂ.ಕೃಷ್ಣ, ಮೇಕೆದಾಟು ಯೋಜನೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪತ್ರದ ಮುಖೇನ ತಿಳಿಸಿದ್ದಾರೆ.

ಎಸ್.ಎಂ.ಕೃಷ್ಣ ಅವರು ಬರೆದಿರುವ ಪತ್ರದಲ್ಲಿ, “ಸಿದ್ದರಾಮಯ್ಯ ನೇತೃತ್ವದಲ್ಲಿ ಮೇಕೆದಾಟು ಸಂಗಮದಿಂದ ಬೆಂಗಳೂರಿನವರೆಗೆ ಬೆಂಗಳೂರಿನ ಭವಿಷ್ಯ ಹಾಗೂ ಸಾರ್ವಜನಿಕ ಕುಡಿಯುವ ನೀರಿನ ಬವಣಿಯನ್ನು ಶಾಶ್ವತವಾಗಿ ನಿವಾರಿಸಲು ರಾಜ್ಯದ ಬಹುದಿನಗಳ ಬೇಡಿಕೆಯಾದ ಮೇಕವಾಟು ಅಣೆಕಟ್ಟು ನಿರ್ಮಾಣ ಸಂಬಂಧ ಸರ್ಕಾರಗಳ ಗಮನ ಸೆಳೆಯಲು ತಾವು “ ನೀರಿಗಾಗಿ ನಡಿಗೆ ” ಪಾದಯಾತ್ರೆ ಕೈಗೊಂಡಿದ್ದೀರಿ . ಈ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ನನ್ನ ಸಂಪೂರ್ಣ ಸಹಮತವಿದೆ.

ಇದೇ ಸಂದರ್ಭದಲ್ಲಿ ಮನುಕುಲಕ್ಕೆ ಗಂಡಾಂತರವಾಗಿ ಕಾಡುತ್ತಿರುವ ಕೋವಿಡ್ ವೈರಸ್ ತನ್ನ ಕಬಂಧ ಬಾಹುಗಳನ್ನು ಬಿತ್ತರಿಸುತ್ತಾ ವಿವಿಧ ರೀತಿಯಲ್ಲಿ ರೂಪಾಂತರಗೊಂಡು ನಮ್ಮನ್ನು ಕಾಡುತ್ತಿದೆ. ಇದರ ಬೇನೆಯಿಂದ ಇಡೀ ಪ್ರಪಂಚ ನಲುಗಿ ಹೋಗಿದ್ದು ಹಲವು ಸಾವು ನೋವುಗಳು ಸಂಭವಿಸಿ ಅನಾಹುತ ಸೃಷ್ಟಿಸಿದೆ. ಇದರ ನಿಯಂತ್ರಣಕ್ಕೆ ಸರ್ಕಾರಗಳು ಎಷ್ಟೇ ಪ್ರಯತ್ನಿಸಿದರೂ ಇನ್ನು ತಹಬದಿಗೆ ಬಂದಿಲ್ಲ .

ಬೆಂಗಳೂರು ವಿಶ್ವದ ನಗರಗಳ ಪಟ್ಟಿಯಲ್ಲಿ ಸ್ಥಾನಗಳಿಸಿದ್ದು , ಪ್ರಪಂಚದ ನಾನಾ ಮೂಲೆಗಳಿಂದ ಪ್ರತಿನಿತ್ಯ ಜನರು ಬಂದು ಹೋಗುತ್ತಿದ್ದಾರೆ. ಇದರ ಮಧ್ಯೆ ಕೊರೊನಾ ವೈರಸ್ ವೇಗವಾಗಿ ಹಬ್ಬುತ್ತಿದೆ . ಇಂತಹ ಸಂದರ್ಭದಲ್ಲಿ ತಾವು ಕೈಗೊಂಡಿರುವ ಪಾದಯಾತ್ರೆ ಕೋವಿಡ್ ನಿಯಂತ್ರಣ ಕ್ರಮಗಳಿಗೆ ಅಡ್ಡಿಪಡಿಸುವ ಸಾಧ್ಯತೆ ಇದೆ . ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿ.ಜೆ.ಪಿ ಸರ್ಕಾರ ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸಲು ಒಪ್ಪಿಗೆ ಸೂಚಿಸಿರುವುದರಿಂದ ಹಾಗೂ ನಾಡಿನ ಜನರ ಆರೋಗ್ಯ ಕಾಪಾಡುವ ಹಿತದೃಷ್ಠಿಯಿಂದ ನಿಮ್ಮ ಪಾದಯಾತ್ರೆಯನ್ನು ಮೊಟಕುಗೊಳಸಬೇಕೆಂದು ಕೋರುತ್ತೇನೆ ಎಂದು ಎಸ್.ಎಂ.ಕೃಷ್ಣ ಮನವಿ ಮಾಡಿಕೊಂಡಿದ್ದಾರೆ.

Continue Reading
Advertisement
ದೇಶ8 mins ago

ಗಣರಾಜ್ಯೋತ್ಸವ.. ನಾರಾಯಣ ಗುರುಗಳಿಗೆ ಅಪಮಾನ.. ಎಸ್ ಡಿ ಪಿ ಐ ಆಗ್ರಹ

ಮಂಗಳೂರು, ಜ ೧೭ (ಯುಎನ್ ಐ) ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ರಾಜ್ಯವಾರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಪ್ರತಿಬಿಂಬಿಸುವ ಸ್ತಬ್ಧ ಚಿತ್ರ ಪ್ರದರ್ಶಿಸಲು ಅವಕಾಶ ನೀಡುವುದು...

ದೇಶ16 mins ago

ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

ನವದೆಹಲಿ: ಜನೆವರಿ 17 (ಯು.ಎನ್.ಐ.) ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ನಾಯಕ ಮತ್ತು ಸಂಕೇತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ವೇಮುಲಾ...

ಕರ್ನಾಟಕ43 mins ago

ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದ ಒಮೈಕ್ರಾನ್!

ಬೆಂಗಳೂರು: ಜನೆವರಿ 17 (ಯು.ಎನ್.ಐ) ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ ಬರೋಬ್ಬರಿ 287 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ತೀವ್ರ ನಿಗಾದ ಮಧ್ಯೆಯೇ ಒಮೈಕ್ರಾನ್ ಪ್ರಕರಣಗಳು...

ದೇಶ56 mins ago

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ...

ದೇಶ58 mins ago

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು...

ಸಿನೆಮಾ1 hour ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ2 hours ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ2 hours ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ2 hours ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು2 hours ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ಟ್ರೆಂಡಿಂಗ್

Share