Published
5 months agoon
ಮುಂಬೈ: ಡಿ. 09 (ಯು.ಎನ್.ಐ) ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಗುರುವಾರ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಅದ್ದೂರಿಯಾಗಿ ನೆರವೇರಿದೆ ಎಂದು ವರದಿಯಾಗಿದೆ.
ಈ ಜೋಡಿ ಸಪ್ತಪದಿ ತುಳಿಯುವುದಕ್ಕೂ ಮುನ್ನ ಮೆಹಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ನೆರವೇರಿತ್ತು. ಮದುವೆಗೆ ಸುಮಾರು 120 ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಇದರಲ್ಲಿ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಮುಂತಾದ ಸೆಲೆಬ್ರಿಟಿಗಳು ಸೇರಿದ್ದಾರೆ.
ಡಿಸೆಂಬರ್ 6 ರಂದು, ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮತ್ತು ಅವರ ಕುಟುಂಬ ಮದುವೆಗಾಗಿ ಅದ್ದೂರಿ ರೆಸಾರ್ಟ್ಗೆ ಬಂದಿತ್ತು. ಮರುದಿನ (ಡಿಸೆಂಬರ್ 7) ಮದುವೆಯ ಪೂರ್ವ ಸಂಭ್ರಮಗಳು ಆರಂಭವಾದವು. ಮಂಗಳವಾರ ಮೆಹಂದಿ ಶಾಸ್ತ್ರ ಇದ್ದು, ಡಿಸೆಂಬರ್ 8 ರಂದು ಹಲ್ದಿ ಮತ್ತು ಸಂಗೀತವನ್ನು ಆಯೋಜಿಸಲಾಗಿತ್ತು.
ಇಂದು (ಡಿಸೆಂಬರ್ 9) ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ದಂಪತಿಗಳು ಖಾಸಗಿಯಾಗಿ ವಿವಾಹವಾಗಲು ಬಯಸಿದ್ದರು ಮತ್ತು ಮದುವೆ ಸ್ಥಳದಿಂದ ಯಾವುದೇ ಫೋಟೋಗಳು ಅಥವಾ ವೀಡಿಯೊಗಳು ಹೊರ ಜಗತ್ತಿಗೆ ಸಿಗದಂತೆ ನೋಡಿಕೊಳ್ಳಲು ಸಮರ್ಥ ತಂಡವನ್ನು ನೇಮಿಸಿದ್ದರು.
ಇಂದು ಸಂಜೆ ಕತ್ರಿನಾ ಮತ್ತು ವಿಕ್ಕಿ ಕುಟುಂಬಸ್ಥರು ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದರು.
ವರದಿಯ ಪ್ರಕಾರ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮದುವೆಯ ದೃಶ್ಯಗಳು ಮತ್ತು ಚಿತ್ರಗಳನ್ನು ಜನಪ್ರಿಯ OTT ಪ್ಲಾಟ್ಫಾರ್ಮ್ಗೆ 100 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ವಿಕ್ಕಿ ಮತ್ತು ಕತ್ರಿನಾ ಮದುವೆಗೆ ಬಂದ ಅತಿಥಿಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿತ್ತು. ನೋ-ಮೊಬೈಲ್ ಡಿಕ್ಟಾಟ್ನಿಂದ ನೋ ಫೋಟೋಗ್ರಫಿಯವರೆಗೆ, ಅವರು ತಮ್ಮ ಮದುವೆಯನ್ನು ಖಾಸಗಿ ವ್ಯವಹಾರವಾಗಿಡಲು ಎಲ್ಲವನ್ನೂ ಮಾಡಿದರು. ವರದಿಗಳ ಪ್ರಕಾರ, ದಂಪತಿಗಳು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ ಎಂದು ತಿಳಿದುಬಂದಿದೆ.