Connect with us


      
ಸಿನೆಮಾ

ಕತ್ರಿನಾ, ವಿಕ್ಕಿ ಕೌಶಲ್ ಹೊಸ ಮನೆ ಬಾಡಿಗೆ ತಿಂಗಳಿಗೆ 8 ಲಕ್ಷವಂತೆ!

Published

on

ಮುಂಬೈ: ಜನವರಿ 04(ಯು.ಎನ್.ಐ) ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ ಬಾಲಿವುಡ್ ಸ್ಟಾರ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜುಹುದಲ್ಲಿನ ತಮ್ಮ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ.

ಜುಹುವಿನಲ್ಲಿರುವ ತಮ್ಮ ಹೊಸ ಮನೆಯ ಫೋಟೋವನ್ನು ಕತ್ರಿನಾ ಕೈಫ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ವಿಕ್ಕಿ ಕೌಶಲ್ ಪ್ರಸ್ತುತ ಇಂದೋರ್‍ನಲ್ಲಿದ್ದಾರೆ, ಅವರ ಮುಂಬರುವ ಚಿತ್ರ ಲುಕಾ ಚುಪಿ 2 ಚಿತ್ರೀಕರಣದಲ್ಲಿ ಕತ್ರಿನಾ ಮುಂಬೈನಲ್ಲಿದ್ದಾರೆ. ನಟಿ ತನ್ನ ಹೊಸ ಮನೆಯ ಸುಂದರವಾದ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಒಂದು ಚಿತ್ರದಲ್ಲಿ ಕತ್ರಿನಾ ಅವರ ತಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಇವರಿಬ್ಬರೂ ತಮ್ಮ ಮದುವೆಯ ನಂತರ ಜುಹುದಲ್ಲಿ ಸಮುದ್ರಕ್ಕೆ ಎದುರಾಗಿರುವ ಫ್ಲಾಟ್‍ಗೆ ತೆರಳಿದ್ದಾರೆ. ಜನವರಿ 4 ರಂದು, ಕತ್ರಿನಾ ತನ್ನ ಹೊಸ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಡಿಸೆಂಬರ್ 19 ರಂದು ಪೂಜೆ ನಂತರ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಹೊಸ ಮನೆಗೆ ತೆರಳಿದ್ದಾರೆ

ವಿಕ್ಕಿ ಮನೆ ಬಾಡಿಗೆಗೆ ಭಾರಿ ಮೊತ್ತವನ್ನು ಪಾವತಿಸಿದ್ದಾರೆ. ಜುಹುವಿನ ರಾಜಮಹಲ್‍ನಲ್ಲಿರುವ ಅತಿ ಐಷಾರಾಮಿ ಕಟ್ಟಡವನ್ನು 60 ತಿಂಗಳ ಅವಧಿಗೆ ಅಂದರೆ 5 ವರ್ಷಗಳ ಅವಧಿಗೆ ವಿಕ್ಕಿ ಬಾಡಿಗೆಗೆ ಪಡೆದಿದ್ದಾರೆ. 8ನೇ ಮಹಡಿಯ ಅಪಾರ್ಟ್‍ಮೆಂಟ್ ಅನ್ನು ಜುಲೈ 2021ರಲ್ಲಿ ಬಾಡಿಗೆಗೆ ಪಡೆದಿದ್ದಾರೆ. ವಿಕ್ಕಿ ಕೌಶಲ್ ಪಾವತಿಸಿದ ಭದ್ರತಾ ಠೇವಣಿ ಸುಮಾರು 1.75 ಕೋಟಿ ರೂ. ಮತ್ತು ಆರಂಭಿಕ 36 ತಿಂಗಳ ಬಾಡಿಗೆ ತಿಂಗಳಿಗೆ ರೂ. 8 ಲಕ್ಷ. ಮುಂದಿನ 12 ತಿಂಗಳಿಗೆ ರೂ. 8.40 ಲಕ್ಷ ಮತ್ತು ಉಳಿದ 12 ತಿಂಗಳುಗಳಿಗೆ ರೂ. 8.82 ಬಾಡಿಗೆಯನ್ನು ವಿಕ್ಕಿ ಕೌಶಲ್ ಪಾವತಿಸಲಿದ್ದಾರೆ.

ಇನ್ನು ಕತ್ರಿನಾ ಇದೇ ಮನೆಯಲ್ಲಿ ಡೆನಿಸ್ ಶಾರ್ಟ್ ಧರಿಸಿ ಸವ್ಯ ಸಾಚಿ ಮಂಗಳ ಸೂತ್ರ ಹಾಕಿಕೊಂಡು ಫೋಸ್ ಕೊಟ್ಟಿದ್ದು ನೆಟ್ಟಿಗರ ಮನಗೆದ್ದಿದ್ದಾರೆ.

ಸಿನೆಮಾ

ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ನಟ ನಾಗಾರ್ಜುನ ಕೊಟ್ಟ ಕಾರಣ ಏನು?

Published

on

ಹೈದರಾಬಾದ್: ಜನೆವರಿ 27 (ಯು.ಎನ್.ಐ.) ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಮದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ ಕಾರಣ ಏನು ಎಂಬುದು ಇಬ್ಬರು ಮಾತನಾಡಿಲ್ಲ. ನಾಗಚೈತನ್ಯ ಬಂಗಾರರಾಜು ಸಿನಿಮಾ ಬಿಡುಗಡೆಯಾದ ಸಂತಸದಲ್ಲಿದ್ದರೆ, ಸಮಂತಾ ಪುಷ್ಪ ಸಿನಿಮಾದ ಯಶಸ್ಸಿನಲ್ಲಿ ಬೀಗುತ್ತಾ ಇಬ್ಬರು ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ನಾಗಚೈತನ್ಯ ಅವರ ತಂದೆ, ಸಮಂತಾ ಅವರ ಮಾವ, ನಾಗಾರ್ಜುನ ಇವರಿಬ್ಬರ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ೨೦೨೧ರ ನಂತರ ಅವರ ವಿವಾಹ ಜೀವನದಲ್ಲಿ ಮೊದಲು ಇದ್ಧಷ್ಟು ಸಾಮರಸ್ಯ ಇರಲಿಲ್ಲ. ೨೦೨೧ ರ ನಂತರ ಅವರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಪ್ರಾರಂಭವಾದವು. ಮೊದಲು ಸಮಂತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಇದನ್ನು ನಾಗ ಚೈತನ್ಯ ಒಪ್ಪಿಕೊಂಡರು ಎಂದು ಹೇಳಿದ್ದಾರೆ.

ಆದರೆ ನಾಗಚೈತನ್ಯ ನನ್ನ ಬಗ್ಗೆ ತುಂಬಾ ಚಿಂತಾಕ್ರಾಂತರಾಗಿದ್ದರು. ನಾನು ಏನು ಯೊಚಿಸುತ್ತೇನೆ, ಕುಟುಂಬದ ಖ್ಯಾತಿಗೆ ತೊಂದರೆಯಾಗುತ್ತಿದೆಯೇ ಎಂದು ಆಲೋಚಿಸಿದ್ದರು. ನಾನು ತುಂಬಾ ಚಿಂತೆ ಮಾಡುತ್ತೇನೆ ಎಂಬ ಕಾರಣಕ್ಕೆ ನನಗೆ ಸಾಂತ್ವಾನವನ್ನು ಹೇಳಿದ್ದರು. ದಾಂಪತ್ಯ ಜೀವನದಲ್ಲಿ ಅವರಿಬ್ಬರೂ 4 ವರ್ಷಗಳಿಂದ ಒಟ್ಟಿಗೆ ಇದ್ದಾರೆ ಆದರೆ ಅಂತಹ ಯಾವುದೇ ಸಮಸ್ಯೆ ಅವರ ನಡುವೆ ಬಂದಿಲ್ಲ. ಇಬ್ಬರೂ ತುಂಬಾ ಆತ್ಮೀಯರಾಗಿದ್ದರು ಮತ್ತು ಅದು ಹೇಗೆ ಇವರಿಬ್ಬರು ಈ ನಿರ್ಧಾರಕ್ಕೆ ಬಂದರು ಎಂದು ನನಗೆ ತಿಳಿದಿಲ್ಲ. 2021ರ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದರು, ಅದರ ನಂತರ ಸಮಸ್ಯೆಗಳು ಉದ್ಭವಿಸಿವೆ ಎಂದು ತೋರುತ್ತದೆ ನಾಗಾರ್ಜುನ ಹೇಳಿದರು.

Continue Reading

ಸಿನೆಮಾ

‘ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾರೆ’ – ನಟಿ ಶ್ವೇತಾ ತಿವಾರಿ

Published

on

ಭೋಪಾಲ್: ಜನೆವರಿ 27 (ಯು.ಎನ್.ಐ.) ಕಿರುತೆರೆ ಹಾಗೂ ಹಿಂದಿ ಫಿಲಂ ನಟಿ ಶ್ವೇತಾ ತಿವಾರಿ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫ್ಯಾಶನ್ ಸಂಬಂಧಿತ ವೆಬ್ ಸರಣಿಯ ಪ್ರಕಟಣೆಗಾಗಿ ಅವರು ಸ್ಟಾರ್‌ ಕಾಸ್ಟ್ ಮತ್ತು ನಿರ್ಮಾಣ ತಂಡದೊಂದಿಗೆ ಭೋಪಾಲ್ ನಲ್ಲಿರುವ ಅವರು, ಧಾರಾವಾಹಿಯ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಚಾರದ ವೇಳೆ ಶ್ವೇತಾ ತಿವಾರಿ ವೇದಿಕೆಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ತಮಾಷೆ ಮಾಡುತ್ತಾ, ‘ದೇವರು ನನ್ನ ಬ್ರಾ ಗಾತ್ರವನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ. ಶ್ವೇತಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಮನೀಶ್ ಹರಿಶಂಕರ್ ನಿರ್ದೇಶನದ ಈ ಧಾರಾವಾಹಿಯ ಪ್ರಚಾರದ ವೇಳೆ ಈ ವಿವಾದ ಸೃಷ್ಟಿಯಾಗಿದೆ. ವೀಡಿಯೋ ವೈರಲ್ ಆದ ಬಳಿಕ ಕೆಲವರು ನಟಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ವೇತಾ ತಿವಾರಿ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಮಧ್ಯಪ್ರದೇಶದ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ನರೋತ್ತಮ್ ಮಿಶ್ರಾ, ‘ನಾನು ಶ್ವೇತಾ ತಿವಾರಿ ಹೇಳಿಕೆಯನ್ನು ಖಂಡಿಸುತ್ತೇನೆ. ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಆ ಬಳಿಕ ನಟಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Continue Reading

ಸಿನೆಮಾ

ವಿವಾಹ ಜೀವನಕ್ಕೆ ಕಾಲಿರಿಸಿದ ಮೌನಿರಾಯ್, ಸೂರಜ್ ನಂಬಿಯಾರ್

Published

on

ಪಣಜಿ: ಜನೆವರಿ 27 (ಯು.ಎನ್.ಐ.) ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ಇಂದು ಗೋವಾದಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮೌನಿರಾಯ್ ಹಾಗೂ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಅವರು ಮಲಯಾಳಿ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ಇದಾದ ನಂತರ ಸಂಜೆ ಬೆಂಗಾಲಿ ಮದುವೆ ನಡೆಯಲಿದೆ.

ಮೌನಿ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮೂಲದವರು. ಮತ್ತೊಂದೆಡೆ, ಸೂರಜ್ ದುಬೈನಲ್ಲಿ ಬ್ಯಾಂಕರ್ ಮತ್ತು ಉದ್ಯಮಿ, ಅವರು ಬೆಂಗಳೂರಿನ ಜೈನ ಕುಟುಂಬಕ್ಕೆ ಸೇರಿದವರು.

ಮೌನಿ ಬಿಳಿ ಹಾಗೂ ಕೆಮಪು ಬಾರ್ಡರ್ ಸೀರೆ, ಒಡವೆ ತೊಟ್ಟು ಕಂಗೊಳಿಸಿದರೆ, ಸೂರಜ್ ಕ್ರಿಮ್ ಬಣ್ಣದ ಕುರ್ತಾ ಮತ್ತು ಬಿಳಿ ಪಂಚೆಯಲ್ಲಿ ಮಿಂಚಿದರು. ಮೌನಿ ಈಗಾಗಲೇ ತಮ್ಮ ವಿವಾಹದ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

Continue Reading
Advertisement
ಕರ್ನಾಟಕ11 mins ago

ಉ.ಪ್ರ.‌ಚುನಾವಣೆ ನಂತರ ರಾಜ್ಯದಲ್ಲಿ‌ಮಹತ್ವದ ಬದಲಾವಣೆ: ಸಿ.ಎಂ ಇಬ್ರಾಹಿಮ್

ಬೆಂಗಳೂರು: ಜನೆವರಿ 27 (ಯು.ಎನ್.ಐ.)‌ ನಾನು ಹೇಳಿದಂತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಘಟಿಸುತ್ತಾ ಬಂದಿವೆ.‌ ಉತ್ತರ ಪ್ರದೇಶ ಚುನಾವಣಾ ಬಳಿಕ ಸಾರ್ವತ್ರಿಕ ಚುನಾವಣೆ, ಇಲ್ಲವೇ ರಾಷ್ಟ್ರ ಪತಿ...

ದೇಶ26 mins ago

ವೈಯಕ್ತಿಕ ದ್ವೇಷ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ದುಷ್ಟರು

ನವದೆಹಲಿ: ಜನೆವರಿ 27 (ಯು.ಎನ್.ಐ.) ವೈಯಕ್ತಿಕ ದ್ವೇಷದ ಕಾರಣ ಮಹಿಳೆಯನ್ನು ಅಪಹರಿಸಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಟರು ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು...

ಕರ್ನಾಟಕ2 hours ago

ಸಿಎಂ ಭೇಟಿ ಮಾಡಿದ ಚಿಕ್ಕಮಗಳೂರು ಶಾಸಕರ ನಿಯೋಗ

ಬೆಂಗಳೂರು: ಜನೆವರಿ 27 (ಯು.ಎನ್.ಐ.) ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯಯದರ್ಶಿ ಸಿ ಟಿ ರವಿ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆ ಶಾಸಕರು ಮುಖ್ಯಮಂತ್ರಿ‌ ಬಸವರಾಜ ಎಸ್ ಬೊಮ್ಮಾಯಿ...

ಕರ್ನಾಟಕ2 hours ago

ಸಿಎಂ‌ ಇಬ್ರಾಹಿಂ ಬಂದರೆ ಸ್ವಾಗತ: ಎಚ್‌‌‌ಡಿಕೆ

ಬೆಂಗಳೂರು:ಜನೆವರಿ 27 (ಯು.ಎನ್.ಐ.) ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿಎಂ‌ ಇಬ್ರಾಹಿಂ‌ ಅವರು ಜಾತ್ಯತೀತ ಜನತಾ ದಳಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.‌ಕುಮಾರಸ್ವಾಮಿ ಹೇಳಿದ್ದಾರೆ....

ದೇಶ2 hours ago

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ; ಶಾಲಾ-ಕಾಲೇಜುಗಳು ಬಂದ್

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ  ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು...

ಕ್ರೀಡೆ3 hours ago

ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

ಮುಂಬೈ: ಜನೆವರಿ ೨೭ (ಯು.ಎನ್.ಐ.) ಇತ್ತೀಚೆಗೆ ಬಿಟ್‌ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್...

ಸಿನೆಮಾ3 hours ago

ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ನಟ ನಾಗಾರ್ಜುನ ಕೊಟ್ಟ ಕಾರಣ ಏನು?

ಹೈದರಾಬಾದ್: ಜನೆವರಿ 27 (ಯು.ಎನ್.ಐ.) ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಮದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ...

ದೇಶ3 hours ago

ಅನ್ಯ ಜಾತಿ ಹುಡುಗಿ ಮದುವೆಯಾದ ಮಗ: ತಾಯಿ ಮೇಲೆ ಹಲ್ಲೆ

ಚೆನ್ನೈ: ಜನೆವರಿ 27 (ಯು.ಎನ್.ಐ.) ಅನ್ಯ ಜಾತಿಯ ಹುಡುಗಿಯನ್ನು ಮಗ ವಿವಾಹವಾದ ಕಾರಣ ತಾಯಿಯನ್ನು ದೀಪದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುಚುಲಿ...

ಸಿನೆಮಾ4 hours ago

‘ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾರೆ’ – ನಟಿ ಶ್ವೇತಾ ತಿವಾರಿ

ಭೋಪಾಲ್: ಜನೆವರಿ 27 (ಯು.ಎನ್.ಐ.) ಕಿರುತೆರೆ ಹಾಗೂ ಹಿಂದಿ ಫಿಲಂ ನಟಿ ಶ್ವೇತಾ ತಿವಾರಿ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫ್ಯಾಶನ್ ಸಂಬಂಧಿತ ವೆಬ್ ಸರಣಿಯ...

ಸಿನೆಮಾ4 hours ago

ವಿವಾಹ ಜೀವನಕ್ಕೆ ಕಾಲಿರಿಸಿದ ಮೌನಿರಾಯ್, ಸೂರಜ್ ನಂಬಿಯಾರ್

ಪಣಜಿ: ಜನೆವರಿ 27 (ಯು.ಎನ್.ಐ.) ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ಇಂದು ಗೋವಾದಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಇವರ ವಿವಾಹದ ಫೋಟೋಗಳು...

ಟ್ರೆಂಡಿಂಗ್

Share