Connect with us


      
ಸಿನೆಮಾ

ಹೊಸ ವರ್ಷಾಚರಣೆ ನಂತರ ಪತಿಯನ್ನು ಬೀಳ್ಕೊಟ್ಟ ಕತ್ರಿನಾ

Kumara Raitha

Published

on

ನವದೆಹಲಿ: ಜನೆವರಿ 02 (ಯು.ಎನ್.ಐ.)  ನವದಂಪತಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಬಹು ಸಂಭ್ರಮದಿಂದ ನೂತನ ವರ್ಷಾಚರಣೆ ಆಚರಿಸಿದ್ದಾರೆ.

ಈ ಸೆಲಿಬ್ರಟಿಗಳು ವಿವಾಹವಾದ ನಂತರದ ಮೊದಲನೇ ಹೊಸ ವರ್ಷಾಚರಣೆಯೂ ಆಗಿರುವುದು ಅವರ ಸಂಭ್ರಮವನ್ನು ಮತ್ತಷ್ಟೂ ಹೆಚ್ಚಿಸಿದೆ. ಈ ಬಳಿಕ ಖ್ಯಾತ ತಾರೆ ಕತ್ರಿನಾ ತಮ್ಮ ಪತಿಯೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದು ಅವರನ್ನು ಬೀಳ್ಕೊಟ್ಟರು. ಬಳಿಕ ಮೊದಲೇ ನಿಗದಿಯಾದ ಸಿನೆಮಾ ಚಿತ್ರೀಕರಣಕ್ಕಾಗಿ ತೆರಳಿದರು.ಈ ಸಂದರ್ಭದಲ್ಲಿ ನಿಕ್ಕಿ ಅವರನ್ನು ಆತ್ಮೀಯವಾಗಿ ಬೀಳ್ಕೊಡುತ್ತಿರುವ ವಿಡಿಯೋವನ್ನು ಕತ್ರಿನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಬಂಧುಮಿತ್ರರೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿರುವುದನ್ನೂ ಹಂಚಿಕೊಂಡಿದ್ದಾರೆ.

ಕಾರಿನಿಂದ ಹೊರಬಂದು ಕತ್ರೀನಾ ಅವರತ್ತ ಕೈಬೀಸಿದ ನಿಕ್ಕಿ ಅಭಿಮಾನಿಗಳಿಗೂ ಕೈ ಬೀಸಿ ವಿಮಾನ ನಿಲ್ದಾಣದೊಳಗೆ ತೆರಳಿದ್ದಾರೆ.

ರಾಜಸ್ಥಾನದ ಸವಾಯಿ ಮಾಧೋಪುರದ ಐಷಾರಾಮಿ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದ ಈ ಇಬ್ಬರು ಸೆಲಿಬ್ರಿಟಿಗಳು ಮಾಲ್ಡೀವ್ಸ್‌ನಲ್ಲಿ ಮಧುರ ಮಧುಚಂದ್ರ ಆನಂದಿಸಿ ಕಳೆದ ವಾರ ಮುಂಬೈಗೆ ಮರಳಿದ್ದಾರೆ.

ಇತ್ತೀಚೆಗೆ ತಮ್ಮ ಹೊಸ ಮನೆಗೆ  ಸ್ಥಳಾಂತರಗೊಂಡ ಕತ್ರಿನಾ, ನಿಕ್ಕಿ ಗೃಹಪ್ರವೇಶದ ಆಚರಣೆಗಳನ್ನು ಸಾಂಪ್ರದಾಯಿಕವಾಗಿಯೇ ಮಾಡಿದ್ದಾರೆ. ಇವರ ನೆರೆಹೊರೆಯವರಾಗಿ  ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಇದ್ದಾರೆ. ಹೊಸಮನೆಗೆ ತೆರಳಿದ ನಂತರ ಇವರಿಬ್ಬರೂ  ಕ್ರಿಸ್ಮಸ್ ಆಚರಣೆ ಪೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/reel/CYMx2zxAJJW/?utm_source=ig_embed&ig_rid=0fc4b1ab-16b3-44a5-91aa-14b89c7f03dc 

 

Share