Connect with us


      




ಸಿನೆಮಾ

ಕೊರೊನಾ ಸೋಂಕಿಗೊಳಗಾದ “ಕಟ್ಟಪ್ಪ”, ಆರೋಗ್ಯ ಸ್ಥಿತಿ  ಗಂಭೀರ

UNI Kannada

Published

on

ಚನ್ನೈ : ಜನೆವರಿ 08 (ಯು.ಎನ್.ಐ.) ಕೊರೊನಾ ಚಿತ್ರರಂಗವನ್ನು ಕಂಟಕವಾಗಿ ಕಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಸಿನೆಮಾ ತಾರೆಯರು ಸಾಲು ಸಾಲಾಗಿ ಕೋವಿಡ್‌ನಿಂದ ಬಳಲುತ್ತಿರುವ ವರದಿಯಾಗುತ್ತಿದೆ. ಟಾಲಿವುಡ್‌ನಲ್ಲಿ ಹೀರೋ ಮಹೇಶ್ ಬಾಬು ಮತ್ತು ಸಂಗೀತ ನಿರ್ದೇಶಕ ತಮನ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇತ್ತೀಚೆಗಷ್ಟೇ ಬಾಹುಬಲಿ ಚಿತ್ರದಲ್ಲಿ ನಟಿಸಿದ್ದ ಹಿರಿಯ ನಟ ಸತ್ಯರಾಜ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಸದ್ಯ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥತಿ ಸ್ವಲ್ಪ ಗಂಭೀರವಾಗಿದೆ ಎನ್ನಲಾಗುತ್ತಿದೆ.

ಕಳೆದ ವಾರ ಸಣ್ಣಪುಟ್ಟ ರೋಗಲಕ್ಷಣಗಳು ಕಾಣಿಸಿಕೊಂಡಿತ್ತು ನಂತರ ಸತ್ಯರಾಜ್ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ದೃಢಪಟ್ಟಿದೆ. ಅಂದಿನಿಂದ ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸತ್ಯರಾಜ್ ಅವರು ಶೀಘ್ರ ಗುಣಮುಖರಾಗಲಿ ಎಂದು ಚಿತ್ರಪ್ರೇಮಿಗಳು ಹಾಗೂ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Share