Connect with us


      




ಸಿನೆಮಾ

ಇಬ್ಬರು ಬಾಲಕಿಯರಿಗೆ ಥಳಿಸಿದ ನಟ, ಬಂಧನ

Vanitha Jain

Published

on

ಪಲಕ್ಕಡ್: ಜುಲೈ 07 (ಯು.ಎನ್.ಐ.) ಕೇರಳದ ಪಾಲಕ್ಕಾಡ್ ನಲ್ಲಿ ಇಬ್ಬರು ಶಾಲಾ ಬಾಲಕಿಯರನ್ನು ಥಳಿಸಿದ ಆರೋಪದ ಮೇಲೆ ನಟ ಶ್ರೀಜಿತ್ ರವಿ ಅವರನ್ನು ಕೇರಳದಲ್ಲಿ ಬಂಧಿಸಲಾಗಿದೆ.

ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಶ್ರೀಜಿತ್ ರವಿ ವಿರುದ್ಧ ಪೋಕ್ಸೊ ಕಾನೂನು ಅಥವಾ ಲೈಂಗಿಕ ಅಪರಾಧಗಳ ಅಡಿ ಪ್ರಕರಣ ದಾಖಲಿಸಲಾಗಿದೆ.

ಕೇರಳದ ಪಾಲಕ್ಕಾಡ್ ನಲ್ಲಿ ಕಾರಿನಿಂದ ಕೆಳಗಿಳಿದ ಶ್ರೀಜಿತ್ ರವಿ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಥಳಿಸಿದ್ದಾನೆ ಮತ್ತು ಬೀಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶ್ರೀಜಿತ್ ರವಿ ವಿರುದ್ಧ ಪ್ರಕರಣ ದಾಖಲಾಗಿರುವುದು ಇದೇ ಮೊದಲಲ್ಲ. 2016 ರಲ್ಲಿ, ಪಾಲಕ್ಕಾಡ್‌ನ 14 ಶಾಲಾ ವಿದ್ಯಾರ್ಥಿನಿಯರ ಗುಂಪಿನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಬಂಧಿಸಲಾಗಿತ್ತು. ತದನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು.

Share