Connect with us


      
ಸಿನೆಮಾ

ನಟ ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ

Vanitha Jain

Published

on

ನಟ ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ

ತಿರುವನಂತಪುರಂ: ಜನೆವರಿ 14 (ಯು.ಎನ್.ಐ.) ಮಲಯಾಳಂ ನಟ ದಿಲೀಪ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

2017 ರಲ್ಲಿ ಮಲಯಾಳಂ ನಟಿ ಭಾವನಾ ಮೆನನ್ ಮೇಲೆ ಹಲ್ಲೆ ಮತ್ತು ಅಪಹರಣ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರದವರೆಗೆ (ಜನೆವರಿ 18) ದಿಲೀಪ್‍ನನ್ನು ಬಂಧಿಸುವುದಿಲ್ಲ ಎಂದು ಪೆÇಲೀಸರು ತಿಳಿಸಿದ್ದಾರೆ.

ನಿರ್ದೇಶಕ ಬಾಲಚಂದ್ರಕುಮಾರ್ ನೀಡಿರುವ ಹೇಳಿಕೆಯನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಏನಿದು ಪ್ರಕರಣ?
ಫೆಬ್ರವರಿ 19, 2017ರಂದು ಕೊಚ್ಚಿ ಬಳಿ ಚಲಿಸುವ ಕಾರಿನಲ್ಲಿ ದಕ್ಷಿಣ ಭಾರತದ ಜನಪ್ರಿಯ ಮಲಯಾಳಂ ನಟಿ ಭಾವನಾ ಮೆನನ್ ನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ನಂತರ ದಿಲೀಪ್ ಮತ್ತು ಆತನ ಸಹಚರರ ವಿರುದ್ಧ ಭಾವನಾ ದೂರು ದಾಖಲಿಸಿದ್ದರು.

Share