Connect with us


      




ದೇಶ

2018ರ ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಮುಲಕ್ಕಲ್ ನಿರ್ದೋಷಿ

Published

on

2018ರ ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಮುಲಕ್ಕಲ್ ನಿರ್ದೋಷಿ

ಕೊಟ್ಟಾಯಂ: ಜನೆವರಿ 14 (ಯು.ಎನ್.ಐ.) 2018ರ ಸನ್ಯಾಸಿನಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜಲಂಧರ್‍ನ ಲ್ಯಾಟಿನ್ ಕ್ಯಾಥೋಲಿಕ್ ಡಯಾಸಿಸ್‍ನ ಮಾಜಿ ಮುಖ್ಯಸ್ಥ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು “ನಿರ್ದೋಷಿ” ಎಂದು ಘೋಷಿಸಿದ ಕೊಟ್ಟಾಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಫ್ರಾಂಕೋ ಮುಲಕ್ಕಲ್ ಸನ್ಯಾಸಿನಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸಲ್ಪಟ್ಟ ಭಾರತದ ಮೊದಲ ಕ್ಯಾಥೋಲಿಕ್ ಬಿಷಪ್ ಆಗಿದ್ದು, 2018ರಲ್ಲಿ ಬಂಧನಕ್ಕೊಳಗಾಗಿದ್ದರು.

ಏನಿದು ಪ್ರಕರಣ?
ಮೇ 5, 2014 ರಂದು ಬಿಷಪ್ ಕುರವಿಲಂಗಾಡ್ ಕಾನ್ವೆಂಟ್‍ಗೆ ಭೇಟಿ ನೀಡಿದ್ದರು ಮತ್ತು ರಾತ್ರಿಯಲ್ಲಿ ತನ್ನ ಕೋಣೆಗೆ ಕರೆದು ತನ್ನೊಂದಿಗೆ ಅಸಹಜ ಲೈಂಗಿಕತೆ ನಡೆಸುವಂತೆ ಒತ್ತಾಯಿಸಿದರು ಎಂದು 45 ವರ್ಷದ ಸನ್ಯಾಸಿನಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. 2014ರಿಂದ 2016ರ ಅವಧಿಯಲ್ಲಿ ಬಿಷಪ್ ತನ್ನ ಮೇಲೆ 13 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಸನ್ಯಾಸಿನಿ ಆರೋಪಿಸಿದ್ದರು.

ದೂರಿನ ಬೆನ್ನಲ್ಲೇ ಹಲವು ಸನ್ಯಾಸಿನಿಯರು, ಕಾರ್ಯಕರ್ತರು, ರಾಜಕೀಯ ಮುಖಂಡರು ಮುಳಕ್ಕಲ್ ಬಂಧನಕ್ಕೆ ಆಗ್ರಹಿಸಿದ ಕಾರಣ 2018 ರಲ್ಲಿ ಬಂಧಿಸಲಾಯಿತು.

ಮೇ 5, 2014ರಂದು ಸನ್ಯಾಸಿನಿ ತನ್ನ ಮೇಲೆ ಮೊದಲ ಬಾರಿಗೆ ಅತ್ಯಾಚಾರವೆಸಗಿರುವುದಾಗಿ ಹೇಳಿಕೊಂಡ ದಿನವೇ ತಾನು ಕುರವಿಲಂಗಾಡ್‍ನಲ್ಲಿರುವ ಕಾನ್ವೆಂಟ್‍ನಲ್ಲಿ ಉಳಿದುಕೊಂಡಿಲ್ಲ ಎಂದು ಮುಲಕ್ಕಲ್ ಹೇಳಿಕೊಂಡಿದ್ದರು. ತಾನು ಕಾನ್ವೆಂಟ್‍ಗೆ ಮಾತ್ರ ಭೇಟಿ ನೀಡಿದ್ದೇನೆ ಮತ್ತು ಮುತ್ತಲಕೋಡಂನಲ್ಲಿರುವ ಮತ್ತೊಂದು ಕಾನ್ವೆಂಟ್‍ನಲ್ಲಿ ಉಳಿದುಕೊಂಡಿದ್ದೇನೆ ಎಂದು ಅವರು ಸಮರ್ಥಿಸಿಕೊಂಡರು.

ಆರೋಪಗಳನ್ನು ನಿರಾಕರಿಸುವ ಸಂದರ್ಭದಲ್ಲಿ, ಮುಲಕ್ಕಲ್ ಸನ್ಯಾಸಿನಿಯು ತನ್ನ ಪತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆಯೊಬ್ಬರು ದೂರಿದ ನಂತರ ಅವರ ವಿರುದ್ಧ ಆಂತರಿಕ ತನಿಖೆಗೆ ಆದೇಶಿಸಲಾಗಿದೆ.

ಫ್ರಾಂಕೋ ಮುಲಕ್ಕಲ್ ಯಾರು?
ಬಿಷಪ್ ಫ್ರಾಂಕೋ ಮುಲಕ್ಕಲ್ ಕೇರಳದ ತ್ರಿಶೂರ್ ಜಿಲ್ಲೆಯ ಮತ್ತೋಮ್ ಗ್ರಾಮದವರು. ಅವರು 1990ರಲ್ಲಿ ಪಾದ್ರಿಯಾಗಿ ದೀಕ್ಷೆ ಪಡೆದರು ಮತ್ತು 2009ರಲ್ಲಿ ಸಹಾಯಕ ಬಿಷಪ್ ಆದ ಅವರು 2013ರಲ್ಲಿ ಜಲಂಧರ್ ಬಿಷಪ್ ಆಗಿ ನೇಮಕಗೊಂಡರು. ಜಲಂಧರ್‍ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಎದುರಿಸಿದರು.

ದೇಶ

ರಾಷ್ಟ್ರೀಯ ಬಾಲ ಪುರಸ್ಕಾರ್ ಪುರಸ್ಕೃತರೊಂದಿಗೆ ಪ್ರಧಾನಿ ನಾಳೆ ಸಂವಾದ

Published

on

By

ನವದೆಹಲಿ, ಜ ೨೩(ಯುಎನ್ ಐ) ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪುರಸ್ಕೃತರೊಂದಿಗೆ ನಾಳೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಸಚಿವರಾದ ಡಾ. ಮುಂಜಪರಾ ಮಹೇಂದ್ರಭಾಯಿ ಉಪಸ್ಥಿತರಿರುವರು.
೨೦೨೧ ಹಾಗೂ ೨೦೨೨ನೇ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ, ಡಿಜಿಟಲ್ ಪ್ರಶಸ್ತಿ ಪತ್ರಗಳನ್ನು ಪ್ರದಾನ ಮಾಡಲಿದ್ದಾರೆ. ಇದೇ ಮೊದಲ ಈ ತಂತ್ರಜ್ಞಾನವನ್ನು ಬಳಸಿ, ಪುರಸ್ಕೃತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ವರ್ಷ ದೇಶಾದ್ಯಂತ ೨೯ ಮಕ್ಕಳಿಗೆ ಬಾಲಶಕ್ತಿ ಪುರಸ್ಕಾರ್ ವಿವಿಧ ವರ್ಗಗಳಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಭಾರತದಲ್ಲಿ ವಾಸಿಸುವ, ೫ ವರ್ಷಕ್ಕಿಂತ ಮೇಲ್ಪಟ್ಟ ಮತ್ತು ೧೮ ವರ್ಷ ಮೀರಿರದ ಅಸಾಧಾರಣ ಸಾಮರ್ಥ್ಯಗಳು ಹಾಗೂ ೬ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯೊಂದಿಗೆ ಗುರುತಿಸಲಾಗುತ್ತದೆ, ವಿದ್ವತ್ಪೂರ್ಣ ಸಾಧನೆಗಳು, ಮನ್ನಣೆಗೆ ಅರ್ಹವಾದ ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಮಾಜ ಸೇವೆ ಮತ್ತು ಶೌರ್ಯವನ್ನು ಒಳಗೊಂಡಿರುತ್ತದೆ. ಪ್ರತಿ ಪ್ರಶಸ್ತಿಯು ಪದಕ,೧,೦೦,೦೦೦ ರೂ. ನಗದು ಬಹುಮಾನ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.ಪ್ರಶಸ್ತಿ ಪುರಸ್ಕೃತ ಮಕ್ಕಳು ಪ್ರತಿ ವರ್ಷ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.

Continue Reading

ದೇಶ

ಟ್ರೈನ್ ಡ್ರೈವರ್‌ಗೆ ನಿದ್ದೆ ಎಂಬ ಚಿಂತೆ; ಪ್ರಯಾಣಿಕರಿಗೆ ಸುಸ್ತೋ ಸುಸ್ತು..!!

Published

on

ಶಹಜಹಾನ್ಪುರ್/ಉತ್ತರಪ್ರದೇಶ: ಜನೆವರಿ 23 (ಯು.ಎನ್.ಐ.) “ನನ್ನ ನಿದ್ದೆ ಸಂಪೂರ್ಣವಾಗಿಲ್ಲ. ನಾನು ಸದ್ಯ ರೈಲು ಚಲಾಯಿಸುವುದಿಲ್ಲ.” ಉತ್ತರ ಪ್ರದೇಶದ ಶಹಜಹಾನ್‌ಪುರ ರೈಲು ನಿಲ್ದಾಣದಲ್ಲಿ ಶುಕ್ರವಾರ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಬಲಮೌ ಪ್ಯಾಸೆಂಜರ್ ರೈಲಿನ ಚಾಲಕ ನಿದ್ರೆಯ ಕೊರತೆಯಿಂದಾಗಿ ರೈಲನ್ನು ಓಡಿಸಲು ನಿರಾಕರಿಸಿದ್ದಾನೆ. ಇದರಿಂದಾಗಿ ರೈಲು ಸುಮಾರು ಎರಡೂವರೆ ಗಂಟೆಗಳ ಕಾಲ ನಿಲ್ದಾಣದಿಂದ ಕದಲಿಲ್ಲ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.

ಆಗಿದ್ದೇನೆಂದರೆ? ಬಾಲಾಮೌ ಪ್ಯಾಸೆಂಜರ್ ಗುರುವಾರ ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಮೂರೂವರೆ ಗಂಟೆ ತಡವಾಗಿ ಶಹಜಹಾನ್‌ಪುರ ರೈಲು ನಿಲ್ದಾಣವನ್ನು ತಲುಪಿತು. ಬಲಮೌವಿಗೆ ರೈಲು ತಂದಿದ್ದ ಚಾಲಕ ಬೆಳಗ್ಗೆ ಅದೇ ರೈಲನ್ನು ವಾಪಸ್ ಬಲಮೌವಿಗೆ ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ, ರಾತ್ರಿ ತಡವಾಗಿ ಬಂದ ಕಾರಣ ಚಾಲಕನಿಗೆ ನಿದ್ರೆ ಸಂಪೂರ್ಣ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಹೊರಡಬೇಕಿದ್ದ ರೈಲನ್ನು ಚಲಾಯಿಸಲು ನಿರಾಕರಿಸಿದ್ದಾನೆ.

ಶಹಜಹಾನ್‌ಪುರ ರೈಲ್ವೆ ಸೂಪರಿಂಟೆಂಡೆಂಟ್ ಅಮರೇಂದ್ರ ಗೌತಮ್ ಮಾತನಾಡಿ, ರೋಜಾ ಜಂಕ್ಷನ್‌ನಲ್ಲಿ ರಾತ್ರಿ ವಿಶ್ರಾಂತಿ ಪಡೆದ ನಂತರ ಅದೇ ಡ್ರೈವರ್ ಬೆಳಗ್ಗೆ ರೈಲನ್ನು ವಾಪಸ್ ತೆಗೆದುಕೊಂಡು ಹೋಗುತ್ತಾನೆ. ರೈಲು ಚಾಲಕನಿಗೆ ರಾತ್ರಿ ಸಂಪೂರ್ಣ ನಿದ್ದೆಯಾಗದ ಕಾರಣ ನಿರಾಕರಿಸಿದ್ದಾನೆ. ಅವರ ನಿದ್ರೆ ಪೂರ್ಣಗೊಂಡ ಬಳಿಕ ರೈಲು ಚಾಲಕ ಟ್ರೈನ್ ಹತ್ತಿದ್ದಾನೆ ಎಂದು ಗೌತಮ್ ತಿಳಿಸಿದ್ದಾರೆ.

Continue Reading

ದೇಶ

ಬಂಗಾಳ: ನೇತಾಜಿ ಜನ್ಮದಿನದಂದು ಲಾಠಿ ಚಾರ್ಜ್

Published

on

ಕೋಲ್ಕತ್ತಾ: ಜನೆವರಿ 23 (ಯು.ಎನ್.ಐ.) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ರಾಜಕೀಯ ನಿಂತಿಲ್ಲ. ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್‌ನಲ್ಲಿ ನೇತಾಜಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ಮಧ್ಯೆ ಜಟಾಪಟಿ ನಡೆದಿದೆ.

ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್‌ನಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿತು ಎಂದರೆ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ನೇತಾಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಎರಡೂ ಕಡೆಯವರು ಸೇರಿದ್ದಾಗ ವಿವಾದ ಹುಟ್ಟಿಕೊಂಡಿತು. ಅರ್ಜುನ್ ಸಿಂಗ್ ಸ್ಥಳಕ್ಕಾಗಮಿಸುತ್ತಿದ್ದಂತೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡಿತು. ಅರ್ಜುನ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಾದ ನಂತರ ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಅರ್ಜುನ್ ಸಿಂಗ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಈ ವೇಳೆ ಪೊಲೀಸರು ಕೂಡ ಸ್ಥಳದಲ್ಲಿಯೇ ಇದ್ದರು.
ಪೊಲೀಸರಿಂದ ಲಾಠಿಚಾರ್ಜ್
ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರವನ್ನೂ ನಡೆಸಬೇಕಾಯಿತು. ಅರ್ಜುನ್ ಸಿಂಗ್ ಅವರ ಕಾರನ್ನು ಕೂಡ ಧ್ವಂಸಗೊಳಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ 7 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ
ಟಿಎಂಸಿ ಜನರ ಮೇಲೆ ಹಲ್ಲೆ: ಬಿಜೆಪಿ ಸಂಸದ
“ಇಂದು ಬೆಳಗ್ಗೆ 10:30ಕ್ಕೆ ನೇತಾಜಿಯವರಿಗೆ ನಮನ ಸಲ್ಲಿಸಲು ನಮ್ಮ ಶಾಸಕ ಪವನ್ ಸಿಂಗ್ ತೆರಳಿದ್ದರು. ಟಿಎಂಸಿ ಗೂಂಡಾಗಳು ಅವರ ಮೇಲೆ ದಾಳಿ ನಡೆಸಿ, ಗುಂಡು ಹಾರಿಸಿ ಇಟ್ಟಿಗೆ ಎಸೆದಿದ್ದಾರೆ. ನಾನು ಬಂದ ಮೇಲೆ ಅವರು ನನ್ನ ಮೇಲೆಯೂ ಹಲ್ಲೆ ನಡೆಸಿದರು ಎಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಹೇಳಿದ್ದಾರೆ. . ಪೋಲೀಸರ ಮುಂದೆಯೇ ಎಲ್ಲವೂ ನಡೆಯುತ್ತಿತ್ತು…ನನ್ನ ಕಾರನ್ನು ಸಹ ಒಡೆದು ಹಾಕಲಾಯಿತು ಎಂದರು.”
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ಬಡಿದಾಟ, ಆರೋಪ-ಪ್ರತ್ಯಾರೋಪ, ಹಿಂಸಾಚಾರ ಸಾಮಾನ್ಯವಾಗಿಬಿಟ್ಟಿದೆ. ಇಂದು ಬ್ಯಾರಕ್‌ಪೋರ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದಂದು ಇದು ಮುಂದುವರಿದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

Continue Reading
Advertisement
ಆರೋಗ್ಯ4 mins ago

ಲಸಿಕೆ ನೀಡಿಕೆ.. ರಾಜ್ಯ ಅಪೂರ್ವ ಸಾಧನೆ

ಬೆಂಗಳೂರು, ಜ ೨೩(ಯುಎನ್ ಐ) ಕೊರೋನಾ ಲಸಿಕೆ ವಿಚಾರದಲ್ಲಿ ರಾಜ್ಯ ಅಪೂರ್ವ ಸಾಧನೆ ಮಾಡಿದ್ದು, ೧೮ ವರ್ಷ ಮೀರಿದ ಎಲ್ಲರಿಗೂ ಮೊದಲ ಡೋಸ್ ಲಸಿಕೆ ನೀಡುವ ಮೂಲಕ...

ದೇಶ14 mins ago

ರಾಷ್ಟ್ರೀಯ ಬಾಲ ಪುರಸ್ಕಾರ್ ಪುರಸ್ಕೃತರೊಂದಿಗೆ ಪ್ರಧಾನಿ ನಾಳೆ ಸಂವಾದ

ನವದೆಹಲಿ, ಜ ೨೩(ಯುಎನ್ ಐ) ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪುರಸ್ಕೃತರೊಂದಿಗೆ ನಾಳೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ....

ಅಂಕಣ16 mins ago

ಮಾಯಾಜಾಲದ ಬೆನ್ನು ಹತ್ತಿ

ಅಂಕಣ: ಮುಖಗಳು -೩ ಒಂಬತ್ತನೆ ತರಗತಿ ವಿದ್ಯಾರ್ಥಿ ತಂದೆಯೊಬ್ಬರು ಫೋನ್ ಮಾಡಿದ್ದರು. ‘ಮಗ ಮೊಬೈಲ್ ಕೊಡಿಸು ಎಂದು ಹಠ ಮಾಡುತ್ತಿದ್ದಾನೆ ಏನು ಮಾಡಲಿ?’ ಎಂದು ಕೇಳಿದ್ದರು. ‘ಅವನಿಗೇಕೆ...

ದೇಶ19 mins ago

ಟ್ರೈನ್ ಡ್ರೈವರ್‌ಗೆ ನಿದ್ದೆ ಎಂಬ ಚಿಂತೆ; ಪ್ರಯಾಣಿಕರಿಗೆ ಸುಸ್ತೋ ಸುಸ್ತು..!!

ಶಹಜಹಾನ್ಪುರ್/ಉತ್ತರಪ್ರದೇಶ: ಜನೆವರಿ 23 (ಯು.ಎನ್.ಐ.) “ನನ್ನ ನಿದ್ದೆ ಸಂಪೂರ್ಣವಾಗಿಲ್ಲ. ನಾನು ಸದ್ಯ ರೈಲು ಚಲಾಯಿಸುವುದಿಲ್ಲ.” ಉತ್ತರ ಪ್ರದೇಶದ ಶಹಜಹಾನ್‌ಪುರ ರೈಲು ನಿಲ್ದಾಣದಲ್ಲಿ ಶುಕ್ರವಾರ ಇಂಥದ್ದೊಂದು ವಿಚಿತ್ರ ಘಟನೆ...

ದೇಶ48 mins ago

ಬಂಗಾಳ: ನೇತಾಜಿ ಜನ್ಮದಿನದಂದು ಲಾಠಿ ಚಾರ್ಜ್

ಕೋಲ್ಕತ್ತಾ: ಜನೆವರಿ 23 (ಯು.ಎನ್.ಐ.) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ರಾಜಕೀಯ ನಿಂತಿಲ್ಲ. ಪಶ್ಚಿಮ ಬಂಗಾಳದ...

ಅಂಕಣ2 hours ago

ದಟ್ಟ ಕಾಡಿನಲ್ಲಿ ʻಸಪ್ನೋಂ ಕೀ ರಾಣೀʼ

ಅಂಕಣ: ಒಂದೂರಲ್ಲಿ ಒಂದಿನ- 3 ಈ ಒಂದೂರು ಅನ್ನುವ ಮಾಯೆ ಇದೆಯಲ್ಲ, ಅದು ವಿಚಿತ್ರವಾದದ್ದು. ಅಪ್ಪ ಕಥೆ ಹೇಳುವಾಗ ಪ್ರತಿ ಸಲವೂ ಆ ಕಥೆ ಒಂದೂರಿನಲ್ಲಿ ಅಂತಲೇ...

ಕ್ರೀಡೆ2 hours ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ3 hours ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ3 hours ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು4 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ಟ್ರೆಂಡಿಂಗ್

Share