Connect with us


      
ಸಿನೆಮಾ

ಕೆಜಿಎಫ್-2 ಕಲೆಕ್ಷನ್: ಪಾನ್ ಇಂಡಿಯಾ 400 ಕೋಟಿ ವ್ಯವಹಾರ!

Iranna Anchatageri

Published

on

ಮುಂಬೈ: ಏಪ್ರಿಲ್ 17 (ಯು.ಎನ್.ಐ.) ಯಶ್ ಅಭಿನಯದ ಕೆಜಿಎಫ್-2 ಚಿತ್ರಕ್ಕೆ ಭಾರತದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಹಿಂದಿ ಬೆಲ್ಟ್‌ನಲ್ಲಿ ಚಿತ್ರ ಮೂರನೇ ದಿನಕ್ಕೆ 42.90 ಕೋಟಿ ಗಳಿಸಿದೆ. ಇದರೊಂದಿಗೆ ಹಿಂದಿ ಬೆಲ್ಟ್ ನಲ್ಲಿ ಮಾತ್ರ ಚಿತ್ರ 143.64 ಕೋಟಿ ಬ್ಯುಸಿನೆಸ್ ಮಾಡಿದೆ. ಮೂರು ದಿನದಲ್ಲಿ ಹಿಂದಿ ಅವತರಣಿಕೆಯಲ್ಲಿ ಇಷ್ಟು ಗಳಿಸಿದ ಮೊದಲ ಚಿತ್ರ ಇದಾಗಿದ್ದು, ಅದಕ್ಕೂ ಮುನ್ನ ಬಾಹುಬಲಿ-2 ಸುಮಾರು 128 ಕೋಟಿ ಗಳಿಸಿತ್ತು.

ಇದೇ ವೇಳೆ ಕೆಜಿಎಫ್-2 ಚಿತ್ರ 3 ದಿನಗಳಲ್ಲಿ ಪ್ಯಾನ್ ಇಂಡಿಯಾದಲ್ಲಿ 400 ಕೋಟಿ ಕಲೆಕ್ಷನ್ ಮಾಡಿದೆ. ಟ್ರೇಡ್ ಪಂಡಿತರ ಪ್ರಕಾರ, ಭಾನುವಾರ ಚಿತ್ರ 500 ಕೋಟಿ ಗಡಿ ದಾಟಲಿದೆ ಎಂದು ಅಂದಾಜಿಸಿದ್ದಾರೆ. ಎರಡನೇ ದಿನದಂದು ವಿಶ್ವದಾದ್ಯಂತ 139.25 ಕೋಟಿ ಕಲೆಕ್ಷನ್ ಆಗಿದೆ. ಸುಮಾರು 100 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದಲ್ಲಿ ಕನ್ನಡದ ನಟ ಯಶ್ ಜೊತೆಗೆ ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ಇದ್ದಾರೆ. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ.

ಚಿತ್ರ ವಿಮರ್ಶಕ ತರಣ್ ಆದರ್ಶ್, “ಕೆಜಿಎಫ್-2 ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿಯಂತೆ ಉಳಿದಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮೂರನೇ ದಿನ ಅಂದರೆ ಶನಿವಾರ 42.92 ಕೋಟಿ, ಎರಡನೇ ದಿನ 46.79 ಕೋಟಿ ಹಾಗೂ ಮೊದಲ ದಿನವೇ 53.95 ಕೋಟಿ ಕಲೆಕ್ಷನ್ ಮಾಡಿದೆ. ಈ ಹಿಂದೆ ವಿಮರ್ಶಕ ಮನೋಬಾಲಾ ಈ ಚಿತ್ರವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದರು.

ತಮಿಳುನಾಡು ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರವು ಮೊದಲ ದಿನ ರೂ 8.24 ಕೋಟಿ, ಎರಡನೇ ದಿನ ರೂ 10.61 ಕೋಟಿ ಮತ್ತು ಮೂರನೇ ದಿನ ರೂ 11.50 ಕೋಟಿ ಗಳಿಸಿದೆ ಎಂದು ಮನೋಬಾಲಾ ವಿಜಯಬಾಲನ್ ಹೇಳಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಚಿತ್ರವು ಕೇರಳ ರಾಜ್ಯದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ.

Share