Connect with us


      




ಸಿನೆಮಾ

ರೋಮಾಂಚನಗೊಳಿಸುವ ಕೆಜಿಎಫ್ 2 ಟ್ರೇಲರ್

Kumara Raitha

Published

on

ಬೆಂಗಳೂರು: ಮಾ.27 ( ಯು.ಎನ್.ಐ) ಇಡೀ ಭಾರತ ಚಿತ್ರರಂಗ ಎದುರು ನೋಡ್ತಿದ್ದ ಕೆಜಿಎಫ್ 2 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಟ್ರೇಲರ್ ನ ರಿಲೀಸ್ ಮಾಡಲಾಗಿದೆ. ಗರುಡನ ಸಾವಿನ ನಂತ್ರ ಏನಾಗುತ್ತೆ ಎಂಬ ಕುತೂಹಲ ಉಳಿಸಿರುವ ಕೆಜಿಎಫ್ ಪಾರ್ಟ್ 1 ಸಕ್ಸಸ್ ಕೆಜಿಎಫ್ 2 ನಲ್ಲೂ ಮರುಕಳಿಸೋ ಸಾಧ್ಯತೆಯಿದೆ. ಯಾಕಂದ್ರೆ ರಕ್ತಸಿಕ್ತ ಲೋಕದಲ್ಲಿ ಅಧೀರನ ಅಬ್ಬರ , ರಾಕಿಭಾಯ್ ಸಮರ ಜೋರಾಗಿರಲಿದೆ ಎಂಬುದಕ್ಕೆ ಟ್ರೇಲರ್ ಕನ್ನಡಿ ಹಿಡಿದಿದೆ.

ಚಿತ್ರದ ಮೇಕಿಂಗ್ ನ ವೈಭವ ಟ್ರೇಲರ್ ನಲ್ಲಿ ಹೈಲೈಟ್ ಆಗಿದೆ. ಪಾರ್ಟ್ 1 ನಲ್ಲಿನಂತೆಯೇ ರವಿ ಬಸ್ರೂರು ಅವರ ಸಂಗೀತ ಗಮನ ಸೆಳೆಯುತ್ತಿದೆ.‌ಈಗಾಗ್ಲೇ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ತೂಫಾನ್ ಹಾಡು ಭಾರೀ ಹಿಟ್ ಆಗಿದ್ದು ಹಿಂದಿನ ದಾಖಲೆಗಳನ್ನೆಲ್ಲ ಹಿಂದಿಕ್ಕಿದೆ. ಸದ್ಯ ಟ್ರೇಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಭಾರೀ ವೀಕ್ಷಣೆ ಕಂಡಿದೆ. ನಟ ಯಶ್, ಸಂಜಯ್ ದತ್, ರವೀನ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‌

ಚಿತ್ರ ಏಪ್ರಿಲ್ 14 ರಂದು ಬಿಡುಗಡೆಯಾಗ್ತಿದ್ದು ರಾಕಿಭಾಯಿ ಅಭಿಮಾನಿಗಳು ಸೇರಿದಂತೆ ಭಾರತ ಚಿತ್ರರಂಗವೇ ಕೆಜಿಎಫ್ 2 ಚಿತ್ರವನ್ನ ಎದುರು ನೋಡ್ತಿದೆ.

Share