Published
6 months agoon
ಪಿಯಾಂಗ್ಯಾಂಗ್ : ಜನೆವರಿ 06 (ಯು.ಎನ್.ಐ) ಉತ್ತರ ಕೊರಿಯಾ ಹೈಪರ್ಸಾನಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ ಮಾಡೋದ್ರೊಂದಿಗೆ ಹೊಸ ವರ್ಷವನ್ನು ಕಿಮ್ ಜಾಂಗ್ ಉನ್ ಪ್ರಾರಂಭ ಮಾಡಿದ್ದಾರೆ. ಈ ಅಪಾಯಕಾರಿ ಆಯುಧದಿಂದ ದಕ್ಷಿಣ ಕೊರಿಯಾ, ಅಮೆರಿಕ ಸೇರಿದಂತೆ ವಿಶ್ವದ ರಾಷ್ಟ್ರಗಳು ಆಘಾತಕ್ಕೊಳಗಾಗಿದ್ದು, ಹೆಚ್ಚಿನ ಭೀತಿ ಉಂಟಾಗಿದೆ.ಉತ್ತರ ಕೊರಿಯಾದ ಜನ್ರು ಹಸಿವಿನಿಂದ ಸಾಯುತ್ತಿದ್ದಾರೆ. ಆದ್ರೆ, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದಕ್ಕೆ ಯಾವುದೇ ರೀತಿಯ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಹೊಸ ವರ್ಷ ಆರಂಭಕ್ಕೂ ಮುನ್ನ ಭಾಷಣ ಮಾಡಿದ್ದ ಕಿಮ್ ಜಾಂಗ್ ಉನ್, ಶಸ್ತ್ರಾಸ್ತ್ರಗಳ ಉತ್ಪಾದನೆ ಹಾಗೂ ಅಮೆರಿಕದತ್ತ ಗಮನ ಕೊಡುವುದಿಲ್ಲ. ದೇಶದ ಅಭಿವೃದ್ಧಿಯತ್ತ ಹೆಚ್ಚಿನ ಲಕ್ಷ್ಯ ಕೊಡುತ್ತೇವೆ ಎಂದು ಹೇಳಿದ್ದ. ಆದರೆ ಹೈಪರ್ಸಾನಿಕ್ ಮಿಸೈಲ್ ಹಾರಿಸುವ ಮೂಲಕ ತನ್ನ ನಿಜಬಣ್ಣ ಜಗತ್ತಿಗೆ ತೋರಿಸಿದ್ದಾನೆ.
ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದ ಬಳಿಕ ಹೇಳಿಕೆ ನೀಡಿದ್ದು, ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಬುಧವಾರ ನಡೆಸಿದ್ದೇವೆ. ಇದು ತನ್ನ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದೆ. ವಿಶ್ವಸಂಸ್ಥೆಯ ನಿರ್ಬಂಧಗಳ ಹೊರತಾಗಿಯೂ ಸರ್ವಾಧಿಕಾರಿ ಕಿಮ್ ನ ಶಸ್ತ್ರಾಸ್ತ್ರಗಳ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗುತ್ತಿಲ್ಲ. ಕಿಮ್ ಜಾಂಗ್ ಉನ್ ನ ಕಪಿಚೇಷ್ಟೆಯಿಂದ ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳಲ್ಲಿ ತಳಮಳ ಹೆಚ್ಚಾಗ ತೊಡಗಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿಗಳು ಭೂಮಿಗೆ ಹಿಂದಿರುಗುವ ಮೊದಲು ಬಾಹ್ಯಾಕಾಶದ ಹೊರ ಭಾಗದ ವರೆಗೆ ಹಾರುತ್ತವೆ. ಆದರೆ ಹೈಪರ್ಸಾನಿಕ್ ಮಿಸೈಲ್ ಗಳು ಕಡಿಮೆ ಎತ್ತರದವರೆಗೆ ಹಾರಿ ಗುರಿ ತಲುಪುತ್ತವೆ. ಅಲ್ಲದೆ, ಶಬ್ದಕ್ಕಿಂತ 5 ಪಟ್ಟು ವೇಗವನ್ನು ಈ ಕ್ಷಿಪಣಿಗಳು ಹೊಂದಿರುತ್ತವೆ. ಈ ವೇಗ ಗಂಟೆಗೆ 6,200 ಕಿಲೋಮೀಟರ್ (3,850-mph)ತಲುಪಬಹುದಾಗಿದೆ.
ಉತ್ತರ ಕೊರಿಯಾ ಸರ್ಕಾರಿ ಸುದ್ದಿ ಏಜೆನ್ಸಿ ಕೆಸಿಎನ್ಎ, “ಕ್ಷಿಪಣಿ ಕ್ಷೇತ್ರದಲ್ಲಿ ಉತ್ತರ ಕೊರಿಯಾ ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳ ಉಡಾವಣೆ ಯಶಸ್ವಿ ಕಾರ್ಯತಂತ್ರವಾಗಿದೆ. ಈ ಪರೀಕ್ಷೆ ಉತ್ತರ ಕೊರಿಯಾದ ಸಶಸ್ತ್ರ ಪಡೆಗಳ ಆಧುನೀಕರಣದ ವೇಗವನ್ನು ಪ್ರದರ್ಶಿಸುತ್ತದೆ” ಎಂದು ಹೇಳಿದೆ.
ಬುಧವಾರ ನಡೆದ ಕ್ಷಿಪಣಿ ಪರೀಕ್ಷೆಯಲ್ಲಿ, ‘ಹೈಪರ್ಸಾನಿಕ್ ಗ್ಲೈಡಿಂಗ್ ವಾರ್ಹೆಡ್’ ತನ್ನ ರಾಕೆಟ್ ಬೂಸ್ಟರ್ನಿಂದ ಮೊದಲು ಬೇರ್ಪಟ್ಟಿತು. ಬಳಿಕ, 700 ಕಿಮೀ ದೂರದಲ್ಲಿರುವ ಗುರಿಯನ್ನು ಮುಟ್ಟುವ ಮೊದಲು 120 ಕಿಮೀ ವೇಗದಲ್ಲಿ ಸಾಗಿತು. ಈ ಪರೀಕ್ಷೆಯಲ್ಲಿ ಮಿಸೈಲ್ ನ ಹಾರಾಟವನ್ನು ನಿಯಂತ್ರಿಸಬಹುದಾಗಿದೆ ಹಾಗೂ ಚಳಿಗಾಲದಲ್ಲಿ ಈ ಕ್ಷಿಪಣಿಯನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ ಎಂದು ಉತ್ತರ ಕೊರಿಯಾದ ಸರ್ಕಾರಿ ಸುದ್ದಿ ಏಜೆನ್ಸಿ ತಿಳಿಸಿದೆ.
ಕ್ಷಿಪಣಿಯು ಮಲ್ಟಿ-ಸ್ಟೆಪ್ ಗ್ಲೈಡ್ ಜಂಪ್ ಫ್ಲೈಟ್ ಮತ್ತು ದೃಢವಾದ ತಂತ್ರಜ್ಞಾನದ ಸಾಮರ್ಥ್ಯ ಹೊಂದಿದೆ. ಆದರೆ, ಈ ಪರೀಕ್ಷೆಯಲ್ಲಿ ಪರಮಾಣ ಅಸ್ತ್ರಗಳನ್ನು ಹೊತ್ತೊಯ್ಯುವ ಹಾಗೂ ಅತ್ಯಂತ ದೂರದವರೆಗೆ ಗುರಿ ತಲುಪುವ ಬಗ್ಗೆ ಯಾವುದೇ ರೀತಿಯ ಪರೀಕ್ಷೆ ನಡೆದಿಲ್ಲ ಎಂಬುದು ತಿಳಿದುಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ಖಂಡಾಂತರ ಕ್ಷಿಪಣಿಗಳ ಮೂಲಕ (ICBMs) ದಕ್ಷಿಣ ಕೊರಿಯಾ ಮತ್ತು ಯುಎಸ್ನಂತಹ ಕ್ಷಿಪಣಿ ರಕ್ಷಕಗಳನ್ನು ಕಂಡುಹಿಡಿಯುವ ಬಗ್ಗೆ ಉತ್ತರ ಕೊರಿಯಾ ಹೆಚ್ಚಿನ ಪ್ರಯೋಗವನ್ನು ಮಾಡುತ್ತಿದೆ. 2017ರ ಬಳಿಕ ಈ ರಕ್ಷಣಾ ತಂತ್ರವನ್ನು ಸಿದ್ಧ ಹಸ್ತ ಮಾಡಿಕೊಳ್ಳಲು ಕ್ಷಿಪಣಿಗಳು ಮತ್ತು ಸಿಡಿತಲೆಗಳನ್ನು ಅಭಿವೃದ್ಧಿಪಡಿಸುವತ್ತ ಕಿಮ್ ಜಾಂಗ್ ಉನ್ ಗಮನ ಹರಿಸಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳನ್ನು ಮುಂದಿನ ಪೀಳಿಗೆಯ ಆಯುಧಗಳೆಂದು ವಿಶ್ವದ ರಾಷ್ಟ್ರಗಳು ಪರಿಗಣನೆ ಮಾಡುತ್ತವೆ. ಅದ್ಭುತ ತಂತ್ರಜ್ಞಾನ ಹೊಂದಿರುವ ಈ ಶಸ್ತ್ರಾಸ್ತ್ರಗಳು, ಬಾಹ್ಯಾಕಾಶದಲ್ಲಿರುವ ವಸ್ತುಗಳನ್ನು ಹೊಡೆದುರುಳಿಸುವ ಸಾಮಾರ್ಥ್ಯ ಹೊಂದಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಕ್ವಾಡ್ ಸಭೆ ಬಳಿಕ ಉತ್ತರ ಕೊರಿಯಾದಿಂದ ಮತ್ತೆ ಕ್ಷಿಪಣಿ ಪರೀಕ್ಷೆ!
ಉತ್ತರ ಕೊರಿಯಾ ಮಣಿಸಲು ಅಮೆರಿಕದ ಕರಡು! ಇಂದು ಮತದಾನ
ಉತ್ತರ ಕೊರಿಯಾದಲ್ಲಿ ಹೊಸ ಸೋಂಕು: 3,50,000 ಮಂದಿಯಲ್ಲಿ ಕಾಣಿಸಿಕೊಂಡ ಲಕ್ಷಣ
ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್ ಕೇಸ್: ಲಾಕ್ಡೌನ್ ಘೋಷಣೆ
ಕೊರೊನಾ ಕಂಟ್ರೋಲ್ ಗೆ ನಿರಂತರವಾಗಿ ಸ್ವಿಮ್ಮಿಂಗ್ ಪೂಲ್ ಗೆ ನೀರು ತುಂಬಿಸುವ ಐಡಿಯಾ; ನೀರಿನ ಬಿಲ್ ನೋಡಿ ಶಾಕ್!
ಶ್ರೀಮಂತ ರಾಷ್ಟ್ರಗಳ ತುರ್ತು ಸಭೆ: ಒಗ್ಗಟ್ಟು ಪ್ರದರ್ಶನ