Published
4 weeks agoon
ಬೆಂಗಳೂರು: ಜೂನ್ ೦೮ (ಯು.ಎನ್.ಐ. ಪಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ e-KYC ಮಾಡಿಸಲು 31.07.2022 ಕೊನೆಯ ದಿನಾಂಕವಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ದಿನಾಂಕ. 01.02.2019 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಡಿ ವಾರ್ಷಿಕ ರೂ. 6000/-ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ಮೂಲಕ ವರ್ಗಾವಣೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ನೆರವು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಬೇಕಾದರೆ e-KYC ಮಾಡಿಸುವುದು ಕಡ್ಡಾಯವಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೆ ಶೇ. 16 ರಷ್ಟು ರೈತರು ಮಾತ್ರ e-KYC_ಮಾಡಿಸಿದ್ದು ಶೇ. 84 ರಷ್ಟು ರೈತರು ಬಾಕಿ ಇರುತ್ತಾರೆ. ದಿನಾಂಕ 31.07.2022 e-KYC ಮಾಡಿಸಲು ಕೊನೆಯ ದಿನಾಂಕವಾಗಿರುವುದರಿಂದ ರೈತರು ಓಟಿಪಿ ಆಧಾರಿತ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತ e-KYC ಮಾಡಿಸಲು ರಾಜ್ಯ ಕೃಷಿ ಆಯುಕ್ತರು ತಿಳಿಸಿದ್ದಾರೆ.
‘ನಕಲಿ ಜಾಲದ ಬುಡವನ್ನೇ ಕತ್ತರಿಸಿ’: ಬಿ.ಸಿ.ಪಾಟೀಲ್ ಎಚ್ಚರಿಕೆ
ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆ ಡಿಪ್ಲೊಮಾ ಶಿಕ್ಷಣ ಉದ್ಘಾಟನೆ
“ರಸಗೊಬ್ಬರ, ಕೀಟನಾಶಕಗಳ ಬಳಕೆ ಕಡಿಮೆ ಮಾಡಿ” – ಕೇಂದ್ರ ಕೃಷಿ ಸಚಿವ ತೋಮರ್
ಫುಡ್ ಪಾರ್ಕ್ಗಳ ಪ್ರಸ್ತುತ ಸ್ಥಿತಿ ಬಗ್ಗೆ ವರದಿ ನೀಡಲು ಸರಕಾರದ ಸೂಚನೆ
ಬೆಂಗಳೂರು ಜಿಕೆವಿಕೆ ; ಜೂನ್ ೧೮ರಿಂದ ೨೪ ಸಸ್ಯಸಂತೆ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ವಿವರ