Connect with us


      
ಕರ್ನಾಟಕ

ಕೊಮ್ಮಘಟ್ಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮ ಹೀಗಿದೆ!

Vanitha Jain

Published

on

ಬೆಂಗಳೂರು: ಜೂನ್ 20 (ಯು.ಎನ್.ಐ.) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ರಾಜ್ಯಪ್ರವಾಸ ಕೈಗೊಳ್ಳುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಐಎಎಫ್ ನ ವಿಶೇಷ ವಿಮಾನ ಮೂಲಕ ಯಲಹಂಕ ಏರ್ ವಾಯುನೆಲೆಗೆ ಆಗಮಿಸಿದ್ದಾರೆ.

ಯಲಹಂಕ ವಾಯುನೆಲೆಗೆ ಆಗಮಿಸಿದ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಮತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಇದೀಗ ಬೆಂಗಳೂರಿನ ಐಐಎಸ್ ಸಿ ಆಗಮಿಸಿದ ನರೇಂದ್ರ ಮೋದಿ ಅವರು, ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ್ದಾರೆ. ಘೋಷಣೆಗಳ ಮೋದಿಯನ್ನು ಕಾರ್ಯಕರ್ತರು ಸ್ವಾಗತಿಸಿದ್ದು, ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದರು. ಕೊಮ್ಮಘಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಾಗುತ್ತಿದೆ.

ಕೊಮ್ಮಘಟ್ಟ ಕಾರ್ಯಕ್ರಮಕ್ಕೆ ಭರ್ಜರಿ ವೇದಿಕೆ ಸಜ್ಜಾಗಿದ್ದು, ವೇದಿಕೆ ಮೇಲೆ ಬೃಹತ್ ಎಲ್ಇಡಿ ಪರದೆ ಅಳವಡಿಸಲಾಗಿದೆ. ಆ ಪರದೇ ಮೂಲಕ ಉದ್ಘಾಟನೆ ಗೊಳ್ಳಲಿರುವ ಯೋಜನೆಗಳ ಪರಿಚಯ ನೀಡಲಾಗುತ್ತದೆ. ವೇದಿಕೆ ಮೇಲೆ ೯ ಜನರಿಗಷ್ಡೇ ಕುಳಿತು ಕೊಳ್ಳಲು ಅವಕಾಶ ನೀಡಲಾಗಿದ್ದು, ಉಳಿದವರಿಗೆ ವೇದಿಕೆ ಮುಂಭಾಗದಲ್ಲಿ ಅವಕಾಶ ನೀಡಲಾಗಿದೆ.

ಬೃಹತ್ ವೇದಿಕೆ ಮುಂದೆ ಯಾರು ಕೂಡ ಓಡಾಡುವಂತಿಲ್ಲ. ಅದಾದ ನಂತರ ಉಳಿದ ಗಣ್ಯರಿಗೆ ಅವಕಾಶ ನೀಡಲಾಗುತ್ತದೆ. 40 ಸಾವಿರ ಜನರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಕೊಮ್ಮಘಟ್ಟದ ಪ್ರಧಾನಿ ಗಳ ಕಾರ್ಯಕ್ರಮದ ವಿವರ

ಮಧ್ಯಾಹ್ನ 2.45ಕ್ಕೇ ಕಾರ್ಯಕ್ರಮದ ಸ್ಥಳಕ್ಕೆ ಆಗಮನ

2.45 ರಿಂದ‌ 2.55ರ ವರೆಗೆ ಉದ್ಘಾಟನೆಗೊಳ್ಳುವ ಯೋಜನೆ ಗಳ ವೀಕ್ಷಣೆ

2.56ಕ್ಕೆ ವೇಧಿಕೆ ಮೇಲೆ ಆಗಮನ

2.56ರಿಂದ 2.59ರ ವರೆಗೆ ನಾಡಗೀತೆ

2.59 ರಿಂದ 3.1ರ ವರೆಗೆ ಸ್ವಾಗತ ಭಾಷಣ

ಸ್ವಾಗತ ಭಾಷಣ ಮಾಡಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

3.6 ರಿಂದ 3.13ಕ್ಕೆ ಬಸವರಾಜ್ ಬೊಮ್ಮಾಯಿ ಭಾಷಣ

3.13ರಿಂದ 3.30ರ ವರೆಗೆ ವಿವಿಧ ಯೋಜನೆಗಳ ಬಗ್ಗೆ ಪರಿಚಯ

ಎಲ್ಇಡಿ ಪರದೆಗಳ ಮೂಲಕ ಯೋಜನೆಗಳ ಬಗ್ಗೆ ಮಾಹಿತಿ

3.30ರಿಂದ 4 ಗಂಟೆಗೆ ವರೆಗೆ ಪ್ರಧಾನಿ ಗಳ ಭಾಷಣ

4 ಗಂಟೆಗೆ ವೇಧಿಕೆಯಿಂದ ನಿರ್ಗಮನ

Share