Connect with us


      




ಗ್ಯಾಜೆಟ್‌

ಹೈದರಾಬಾದ್‌ನಲ್ಲಿ ಅಭಿವೃದ್ಧಿ ಕೇಂದ್ರ ತೆರೆಯಲು ತೆಲಂಗಾಣ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ‘ಕೂ’

Vanitha Jain

Published

on

ಹೈದರಾಬಾದ್: ಜುಲೈ 20 (ಯು.ಎನ್.ಐ.) ಭಾರತದ ಬಹು-ಭಾಷಾ ಸಾಮಾಜಿಕ ಮಾಧ್ಯಮ ವೇದಿಕೆ, ಕೂ – ಹೈದರಾಬಾದ್‌ನಲ್ಲಿ ಅಭಿವೃದ್ಧಿ ಕೇಂದ್ರವನ್ನು ತೆರೆಯಲು ತೆಲಂಗಾಣ ಸರ್ಕಾರದೊಂದಿಗೆ ತಿಳುವಳಿ ಪತ್ರಕ್ಕೆ (MOU) ಬುಧವಾರ ಸಹಿ ಹಾಕಿದೆ.

ಹೈದರಾಬಾದ್ ಐಟಿ ಹಬ್ ಆಗಿರುವುದರಿಂದ ತಂತ್ರಜ್ಞಾನ ಅಭಿವೃದ್ಧಿಗೆ ಉತ್ತಮ ಅವಕಾಶವನ್ನು ನೀಡುತ್ತದೆ ಜೊತೆಗೆ ಇದು ಐಟಿ ಪ್ರತಿಭೆಗಳ ದೊಡ್ಡ ಗುಂಪನ್ನೇ ಹೊಂದಿದೆ. ಹೀಗಾಗಿ ಇಲ್ಲಿ ಗಮನಾರ್ಹವಾಗಿ ಬೆಳವಣಿಗೆ ಸಾಧಿಸುವ ಆಲೋಚನೆಯನ್ನು ಕೂ ಹೊಂದಿದೆ. ಕೂ ಸ್ಥಳೀಯ ಬಳಕೆದಾರರ ಸಮುದಾಯವನ್ನು ಹೊಂದಿದ್ದು, 10 ಭಾಷೆಗಳಲ್ಲಿ ಅಭಿವ್ಯಕ್ತಿಸಲು ಬಳಕೆದಾರರಿಗೆ ಅವಕಾಶ ನೀಡಿದೆ.

ಈ ತಿಳುವಳಿ ಒಡಂಬಡಿಕೆಯ ಭಾಗವಾಗಿ, ತೆಲಂಗಾಣ ಸರ್ಕಾರವು ರಾಜ್ಯದಲ್ಲಿ ಇಂಗ್ಲಿಷೇತರವಾಗಿ ತೆಲುಗು ಭಾಷೆ ಬಳಕೆ ವ್ಯಾಪ್ತಿಯನ್ನು ಹೆಚ್ಚಿಸಲು ಕೂ ಜೊತೆ ಕೆಲಸ ಮಾಡಲಿದೆ. ಸಹಯೋಗವು ತೆಲಂಗಾಣದ ವಿಶಿಷ್ಟ ಸಂಸ್ಕೃತಿಯ ಜೊತೆಗೆ ತೆಲುಗಿನ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಒಂದು ಭಾಷೆಯಾಗಿ ಉತ್ತೇಜಿಸುತ್ತದೆ.

ಈ ವೇಳೆ ಮಾತನಾಡಿದ ಐಟಿ ಸಚಿವ ಕೆಟಿ ರಾಮರಾವ್, ‘ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಸಾಮಾಜಿಕ ಮಾಧ್ಯಮ ಒಂದೊಳ್ಳೆ ಕಾರ್ಯತಂತ್ರ ಎನ್ನುವುದನ್ನು ನಾವು ಬಲವಾಗಿ ನಂಬುತ್ತೇವೆ. ಕೂ ಜೊತೆ ಸಹಯೋಗ ಸ್ಥಾಪನೆ ಮಾಡುವ ಮೂಲಕ, ತೆಲಂಗಾಣ ಸರ್ಕಾರದ ಮಾಹಿತಿ ಮತ್ತು ಸೇವೆಗಳನ್ನು ಪ್ರಸಾರ ಮಾಡಲು, ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ತೊಡಗಿಸಿಕೊಳ್ಳಲು ಮತ್ತಷ್ಟು ನೆರವಾಗಲಿದೆ’ ಎಂದರು.

ಈ ತಿಳುವಳಿಕಾ ಒಡಂಬಡಿಕೆಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಕೂ ಸಹ-ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ, “ಭಾಷಾ ಆಧಾರಿತ ಸಾಮಾಜಿಕ ಮಾಧ್ಯಮವು ಪ್ರಸ್ತುತ ಅಗತ್ಯತೆಗಳಲ್ಲೊಂದು, ವಿಶೇಷವಾಗಿ ಭಾರತದಂತಹ ಬಹುಭಾಷಾ ದೇಶದಲ್ಲಿ. ತಟಸ್ಥ ಮತ್ತು ಸ್ವತಂತ್ರವಾಗಿರುವ ಕಾರಣದಿಂದಲೇ, ಕೂ ಭಾರತೀಯರಿಗೆ ಆಯ್ಕೆಯ ವೇದಿಕೆಯಾಗಿದೆ. ಡಿಜಿಟಲ್ ಅಭಿವ್ಯಕ್ತಿ ಸ್ವಾತಂತ್ರ್ಯದೊಂದಿಗೆ ಧ್ವನಿಗಳನ್ನು ಸಶಕ್ತಗೊಳಿಸುವ ನಮ್ಮ ಉದ್ದೇಶವನ್ನು ಹೆಚ್ಚಿಸಲು ತೆಲಂಗಾಣ ಸರ್ಕಾರ ಒದಗಿಸುತ್ತಿರುವ ಅನುಕೂಲತೆಗಳೊಂದಿಗೆ ಸಹಕರಿಸಲು ನಿಜಕ್ಕೂ ಹೆಮ್ಮೆಯಿದೆ. ಹೈದರಾಬಾದ್‌ನಲ್ಲಿರುವ ಡೆವಲಪ್‌ಮೆಂಟ್ ಸೆಂಟರ್ ಈ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುವಲ್ಲಿ ಸಹಕಾರಿಯಾಗಿದೆ’ ಎಂದು ಹೇಳಿದರು.

Continue Reading
Share