Connect with us


      
ಕರ್ನಾಟಕ

ಕೊರಗ ಸಮುದಾಯದ ಮೇಲೆ ದೌರ್ಜನ್ಯ; ಸಿಐಡಿ ತನಿಖೆ

Kumara Raitha

Published

on

ಉಡುಪಿ:  ಜನೆವರಿ 01 (ಯು.ಎನ್.ಐ.) ಇತ್ತೀಚೆಗೆ ಉಡುಪಿ ಜಿಲ್ಲೆ ಕೋಟತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದ ಮೇಲೆ ಪೊಲೀಸ್ ದೌರ್ಜನ್ಯವಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸಚಿವರು, ಇಂದು,  ಕೋಟತಟ್ಟು ಗ್ರಾಮಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಎರಡು ಲಕ್ಷ ರೂಪಾಯಿಗಳ ಪರಿಹಾರ  ಘೋಷಿಸಿದ್ದಾರೆ.  ಪೊಲೀಸ್ ಲಾಠಿಚಾರ್ಜ್ ನಲ್ಲಿ ಗಾಯಗೊಂಡ ಪ್ರತಿ ಕುಟುಂಬಕ್ಕೆ ೫೦೦೦೦ ಸಾವಿರ ರೂಪಾಯಿಗಳ ಚೆಕ್ ಅನ್ನು ಸ್ಥಳದಲ್ಲಿಯೇ ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು ಕೊರಗ ಕುಟುಂಬದ ವೈವಾಹಿಕ ಸಮಾರಂಭದಲ್ಲಿ ಲಾಠಿಛಾರ್ಜ್ ಮಾಡಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಕರಣದ ಸಂಬಂಧ ಕೊರಗ ಕುಟುಂಬದ ಸದಸ್ಯರ ವಿರುದ್ಧ ದಾಖಲಾದ ಪೊಲೀಸ್ ಮೊಕದ್ದಮೆಯನ್ನೂ  ಹಿಂಪಡೆಯುವ ಬಗ್ಗೆ, ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ  ಭರವಸೆಯನ್ನೂ  ನೀಡಿದ್ದಾರೆ. ಈ ಸಂದರ್ಭದಲ್ಲಿ  ಸಮಾಜ ಕಲ್ಯಾಣ ಸಚಿವ ಶ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಇತರ ಅಧಿಕಾರಿಗಳು ಹಾಜರಿದ್ದರು.

Share