Connect with us


      
ಕರ್ನಾಟಕ

“ಡಿಕೆಶಿ ಮಾತಾಡಲು ಅವಕಾಶ ಕೊಟ್ಟಿಲ್ಲ” – ಶಿಸ್ತು ಸಮಿತಿ ನೋಟಿಸ್‌ಗೆ ಲಕ್ಷ್ಮೀನಾರಾಯಣ ಟೀಕಾಪ್ರಹಾರ

Iranna Anchatageri

Published

on

ಬೆಂಗಳೂರು: ಜುಲೈ 07 (ಯು.ಎನ್.ಐ.) ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕರ ನಡುವಿನ ಜಟಾಪಟಿ ಮುಂದುವರಿದಿದೆ. ಮಾಧ್ಯಮದ ಮುಂದೆ ಮಾಜಿ ಎಂಎಲ್ಸಿ ಎಂ.ಡಿ.ಲಕ್ಷ್ಮೀನಾರಾಯಣ, ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಹೇಳಿಕೆಗಳನ್ನು ನೀಡಿದ್ದಕ್ಕೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿತ್ತು. ಶಿಸ್ತು ಸಮಿತಿ ನೊಟೀಸ್ ಗೆ ಮಾಜಿ ಎಂಎಲ್ಸಿ  ಉತ್ತರ ನೀಡಿದ್ದು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಕಾಂಗ್ರೆಸ್ ಶಿಸ್ತು ಸಮಿತಿಗೆ ಉತ್ತರ ಕಳುಹಿಸಿದ ಮಾಜಿ ಎಂಎಲ್ ಸಿ ಎಂ.ಡಿ.ಲಕ್ಷ್ಮೀನಾರಾಯಣ, ಕೆಪಿಸಿಸಿ ಅಧ್ಯಕ್ಷರ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಪರಿಷತ್ ಅಭ್ಯರ್ಥಿ ಆಯ್ಕೆ ಮಾನದಂಡದ ಬಗ್ಗೆ ಪ್ರಶ್ನೆ ಮಾಡಿದ್ದ ತನಗೆ ಡಿಕೆಶಿ ಅವರು, ಕೆಪಿಸಿಸಿ ಸಭೆಯಲ್ಲಿ ಉತ್ತರ ನೀಡಿಲಿಲ್ಲ ಎಂದು ಟೀಕಿಸಿದ್ದಾರೆ.

ಪಕ್ಷದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಲು ಅವಕಾಶ ನಿರಾಕರಿಸಿದ್ದರಿಂದ ಮಾಧ್ಯಮದ ಮುಂದೆ ಹೋದೆ. ತಮಗೆ ಬೇಕಾದ ಹೆಸರುಗಳನ್ನು ದೆಹಲಿಗೆ ತೆಗೆದುಕೊಂಡು ಹೋಗಿದ್ದು ಸರಿಯೇ..? ಕೆಪಿಸಿಸಿ ಅಧ್ಯಕ್ಷರು ಮೇ 23 ರಂದು ಸಿದ್ಧರಾಮಯ್ಯರನ್ನು ಬಿಟ್ಟು ದೆಹಲಿಗೆ ಹೋಗಿದ್ದೇಕೆ..? ಏಕಪಕ್ಷೀಯವಾಗಿ ಒತ್ತಡದಿಂದ ಹೊಸ ಹೆಸರುಗಳನ್ನು ಎಐಸಿಸಿಗೆ ನೀಡಿದ್ದು ಯಾಕೆ..? ಪಕ್ಷದಲ್ಲಿ ದುಡಿದ ಕಾರ್ಯಕರ್ತರಿಗೆ ಮಾನಸಿಕ ಹಿಂಸೆ ಆಗ್ತಿರುವುರಿಂದ ಮಾಧ್ಯಮಕ್ಕೆ ಹೇಳಿಕೆ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ನೋಟಿಸ್ ಗೆ ನೀಡಿರುವ ಉತ್ತರದಲ್ಲಿ ಎಂ.ಡಿ.ಲಕ್ಷ್ಮೀ ನಾರಾಯಣ ಟೀಕಾ ಪ್ರಹಾರ ಮಾಡಿದ್ದಾರೆ.

 

Share