Connect with us


      




ಕರ್ನಾಟಕ

ಲಂಬಾಣಿ ತಾಂಡಗಳನ್ನ ಕಂದಾಯ ಗ್ರಾಮಗಳಾಗಿ ಮಾಡಲು ಕ್ರಮ : ಸಚಿವ ಅಶೋಕ್

UNI Kannada

Published

on

R Ashok

ಬೆಳಗಾವಿ: (ಸುವರ್ಣ ಸೌಧ) ಡಿಸೆಂಬರ್ ೧೪ (ಯು.ಎನ್.ಐ.) ರಾಜ್ಯದ ಎಲ್ಲ ಲಂಬಾಣಿ ತಾಂಡಗಳನ್ನ ಕಂದಾಯ ಗ್ರಾಮಗಳಾಗಿ ಮಾಡಲಾಗುವುದು ಸಚಿವ ಆರ್ ಅಶೋಕ್ ಹೇಳಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಇಂದು ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಕೆ.ರಾಠೋಡ್ ಅವರು ಲಂಬಾಣಿ ತಾಂಡಗಳಲ್ಲಿ ಸುಸಜ್ಜಿತ ಸರ್ಕಾರಿ ಶಾಲೆಗಳನ್ನು ತೆರೆಯಬೇಕು, ಮೂಲಭೂತ ಸೌಕರ್ಯ ಒದಗಿಸಬೇಕು.  ಕಂದಾಯ ಸಚಿವರು ಉತ್ತರ ನೀಡಬೇಕೆಂದು ಆಗ್ರಹಿಸಿದರು.

ಲಂಬಾಣಿ ಜನಾಂಗದವರು ಅಲೆಮಾರಿ ಜೀವನ ನಡೆಸುವವರು ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಿರುತ್ತಾರೆ. ಈಗೀಗ ಅವರು ಒಂದು ಕಡೆ ಭದ್ರವಾಗಿ ಜೀವನ ನಡೆಸಲು ಪ್ರಾರಂಭಿಸಿದ್ದಾರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಂಬಾಣಿ ತಾಂಡಗಳನ್ನ ಕಂದಾಯ ಗ್ರಾಮಗಳಾಗಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್‌ ಉತ್ತರ ನೀಡಿದರು.

Share