Connect with us


      




ಕರ್ನಾಟಕ

ಸಚಿವ ಸಂಪುಟದಿಂದ ಭೈರತಿ ಬಸವರಾಜ್ ಕೈಬಿಡಿ:  ಕಾಂಗ್ರೆಸ್‌ ಆಗ್ರಹ

Kumara Raitha

Published

on

ಬೆಳಗಾವಿ (ಸುವರ್ಣ ವಿಧಾನಸೌಧ ) ಡಿಸೆಂಬರ್‌ ೧೫ (ಯು.ಎನ್.ಐ.) ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಅಕ್ರಮವಾಗಿ ಭೂ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕರು ಅವರನ್ನು ಸಚಿವ ಸಂಪುಟದಿಂದ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

 ಸುವರ್ಣ ವಿಧಾನಸೌಧದಲ್ಲಿಂದು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ನಾರಾಯಣಸ್ವಾಮಿ ಹಾಗೂ ಪಿ.ಆರ್ ರಮೇಶ್  ಜಂಟಿ ಸುದ್ದಿಗೋಷ್ಠಿ ನಡೆಸಿದರು.  ಐದು ಮಂದಿ ಸೇರಿ ಭೂಕಬಳಿಕೆ ಮಾಡಿದ್ದಾರೆ. ಫೋರ್ಜರಿ ಮಾಡಿಸಿ ಕಬಳಿಕೆ ಮಾಡಿದ್ದಾರೆ ಅಣ್ಣಯ್ಯಪ್ಪ ಎಂಬುವರ ಭೂಕಬಳಿಸಿ ಬಡವಾಣೆ ನಿರ್ಮಾಣ ಮಾಡಲಾಗಿದೆ.ಎನ್ ಆರ್‌ ಐ ಬಡಾವಣೆ ಎಂದು ಮಾಡಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದರು.

ಅಕ್ರಮ ಎಸಗಿದವರ ವಿರುದ್ಧ ಕೋರ್ಟ್ ಮೊಕದ್ದಮೆ ದಾಖಲಿಸುವಂತೆ ಆದೇಶ ಹೊರಡಿಸಿದೆ. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಆರ್.ಶಂಕರ್ ವಿರುದ್ಧ ಆದೇಶ ಹೊರಡಿಸಿದೆ ಒಟ್ಟು ೩೫ ಎಕರೆ ಜಾಗವನ್ನ ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಹಾಗಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ ಎಂದು ಅವರು ವಿವರಿಸಿದರು.

ನೂರಾರು ಕೋಟಿ ಬೆಲೆ ಬಾಳುವ  ತಮ್ಮ ಜಮೀನು ಕಬಳಿಕೆ ಆಗಿರುವ ಬಗ್ಗೆ ಭೂ ಮಾಲೀಕ ಅಣ್ಣಯ್ಯಪ್ಪ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಅಕ್ರಮವಾಗಿ ಭೂ ಕಬಳಿಕೆಗೆ  ಕೆ.ಆರ್ ಪುರಂನಲ್ಲಿ ಇದೊಂದು ಸಾಕ್ಷಿ ಅಷ್ಟೇ. ಬಸವರಾಜ್ ಹಾಗೂ ಶಂಕರ್ ಒಟ್ಟಿಗೆ ಹಲವು ಬಡವಾಣೆ ಮಾಡಿದ್ದಾರೆ. ಇಂತಹ ಎಷ್ಟೋ ಅಕ್ರಮ  ನಡೆಸಿದ್ದಾರೆ. ಕೂಡಲೇ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು. ದೂರು ಕೊಟ್ಟಿರುವವರು ಜೀವದ ಭಯದಲ್ಲಿದ್ದಾರೆ. ಸಚಿವ ಭೈರತಿ ಬಸವರಾಜರನ್ನು  ಕೂಡಲೇ ಬಂಧಿಸಬೇಕು ಇಂತಹ ಎಷ್ಟೋ ಅಕ್ರಮ  ನಡೆಸಿದ್ದಾರೆ. ಕೂಡಲೇ ಅವರನ್ನುಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಭೈರತಿ ಬಸವರಾಜ್ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಬೇಡ ಅಂದವರು ಯಾರು ? ನಾವು ಅವರ ವರ್ಚಸ್ಸಿಗೆ ಧಕ್ಕೆ ತಂದಿಲ್ಲ. ನ್ಯಾಯಾಲಯವೇ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದೆ. ಹಾಗಾದರೆ ನ್ಯಾಯಾಲಯದ ವಿರುದ್ಧ ಇವರು ಮಾನನಷ್ಟ ಮೊಕದ್ದಮೆ ಹೂಡುತ್ತಾರಾ ? ಕೆ.ಆರ್ ಪುರಂನಲ್ಲಿ ಸಿಕ್ಕ ಸಿಕ್ಕ ಜಮೀನಿಗೆ ಬೇಲಿ ಹಾಕಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ನಾರಾಯಣಸ್ವಾಮಿ ಆಪಾದಿಸಿದರು.

Share