Connect with us


      




ಕರ್ನಾಟಕ

ಸ್ವಾತಂತ್ರ್ಯೋತ್ಸವದಲ್ಲಿ ಸಾವರ್ಕರ್ ಫೋಟೋ ವಿವಾದ; ಓರ್ವನಿಗೆ ಚಾಕು ಇರಿತ

Lakshmi Vijaya

Published

on

ಶಿವಮೊಗ್ಗ: ಆಗಸ್ಟ್ 15 (ಯು.ಎನ್.ಐ.) 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಫೋಟೋ ಬ್ಯಾನರ್‌ ವಿಚಾರದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಿಂದ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಒಂದು ಗುಂಪು ಸಾವರ್ಕರ್ ಪೋಸ್ಟರ್ ಅನ್ನು ಹಾಕಿತ್ತು. ಇನ್ನೊಂದು ಗುಂಪು ಅದನ್ನು ತೆಗೆದುಹಾಕಲು ಟಿಪ್ಪು ಸುಲ್ತಾನ್ ಒಳಗೊಂಡ ಪೋಸ್ಟರ್ ಅನ್ನು ಹಾಕಲು ಪ್ರಯತ್ನಿಸಿದೆ. ಕೂಡಲೇ ಪೊಲೀಸರು ಬಂದು ಪೋಸ್ಟರ್ ವಶಪಡಿಸಿಕೊಂಡರು. ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಠಿ ಪ್ರಹಾರವನ್ನೂ ಮಾಡಬೇಕಾಯಿತು. ಪೋಸ್ಟರ್ ಅಂಟಿಸಿದ ಸ್ಥಳದಲ್ಲಿ ಅಧಿಕಾರಿಗಳು ರಾಷ್ಟ್ರಧ್ವಜವನ್ನು ಅಳವಡಿಸಿದರು.

ಈ ಪ್ರದೇಶದಲ್ಲಿ ಹೆಚ್ಚು ಜನರು ಸೇರದಂತೆ ನಿಷೇಧಾಜ್ಞೆ ವಿಧಿಸಲಾಗಿದೆ ಮತ್ತು ಹೆಚ್ಚುವರಿ ಪೊಲೀಸ್ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಘರ್ಷಣೆಯಲ್ಲಿ ಇರಿತಕ್ಕೊಳಗಾದ ವ್ಯಕ್ತಿ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತ ಸ್ಥಿರವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share