Connect with us


      
ಕ್ರೀಡೆ

ಶ್ರೀಲಂಕಾ ತಂಡದಲ್ಲಿ ಮಹತ್ವದ ಬೆಳವಣಿಗೆ.. ಕೋಚ್ ಆಗಿ ಲಸಿತ್ ಮಾಲಿಂಗ!

UNI Kannada

Published

on

ಶ್ರೀಲಂಕ: ಜನೆವರಿ 26 (ಯು.ಎನ್.ಐ.) ಶ್ರೀಲಂಕಾ ತಂಡದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯುತ್ತಿದೆ. ಶ್ರೀಲಂಕಾದ ವೇಗದ ಬೌಲಿಂಗ್ ಕೋಚ್ ಆಗಿ ತಂಡದ ದಿಗ್ಗಜ ಲಸಿತ್ ಮಾಲಿಂಗ ಆಯ್ಕೆಯಾಗುವ ಸಾಧ್ಯತೆ ಇದೆ. ಮುಂಬರುವ ಆಸ್ಟ್ರೇಲಿಯ ಸರಣಿಗೆ ಮಾಲಿಂಗ ಅವರನ್ನು ಕನ್ಸಲ್ಟೆಂಟ್ ಕೋಚ್ ಆಗಿ ನೇಮಿಸುವಂತೆ ಉನ್ನತ ಮಟ್ಟದ ಕ್ರಿಕೆಟ್ ಸಲಹಾ ಸಮಿತಿಯು ಶ್ರೀಲಂಕಾ ಕ್ರಿಕೆಟ್ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡಿದೆ. ಆಸ್ಟ್ರೇಲಿಯಾ ಪ್ರವಾಸದ ಅಂಗವಾಗಿ ಐದು ಟಿ20 ಪಂದ್ಯಗಳು ನಡೆಯಲಿವೆ.

ಕಳೆದ ವರ್ಷ ಮಲಿಂಗ ಕ್ರಿಕೇಟ್ ನ ಎಲ್ಲಾ ಫಾರ್ಮ್ಯಾಟ್‌ಗಳಿಗೂ ನಿವೃತ್ತಿ ಘೋಷಿಸಿದ್ದರು. ಅವರು ತಮ್ಮ ಟಿ20 ವೃತ್ತಿಜೀವನದಲ್ಲಿ 390 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೇ ಒಂಬತ್ತು ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ತಂಡದ ನಾಯಕತ್ವ ವಹಿಸಿದ್ದ ಮಾಲಿಂಗ ಒಮ್ಮೆಯೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದರು. ಅದೇ ರೀತಿ 24 ಟಿ20ಗಳಲ್ಲಿ ನಾಯಕರಾಗಿದ್ದ ಮಾಲಿಂಗ 15 ಬಾರಿ ಸೋತಿದ್ದಾರೆ. ಇವರೊಂದಿಗೆ ಮಹೇಲಾ ಜಯವರ್ಧನೆ ಕೂಡ ಸಲಹೆಗಾರ ಕೋಚ್ ಆಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.

 

Share