Published
5 months agoon
By
Vanitha Jainಬೆಳಗಾವಿ, ಡಿಸೆಂಬರ್ 14(ಯು.ಎನ್.ಐ.) ಸುಮಾರು 14 ಕ್ಷೇತ್ರಗಳಲ್ಲಿ ಗೆಲುವಿನ ಸನಿಹದಲ್ಲಿದ್ದೇವೆ ವಿಧಾನ ಪರಿಷತ್ ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತದೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಅವರಿಂದು ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಸಿಎಂ ಬಸವರಾಜ್ ಬೊಮ್ಮಾಯಿ ಉತ್ತಮ ಆಡಳಿತ ಕೊಡುತ್ತಿದ್ದಾರೆ ಇದೆಲ್ಲವನ್ನು ನೋಡಿ ಜನ ಉತ್ತಮ ಫಲಿತಾಂಶ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಿಷತ್ ಅಭ್ಯರ್ಥಿಗಳು ಹಣವನ್ನು ಖರ್ಚು ಮಾಡಿದ್ದಾರೆ ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಬಿಜೆಪಿಯಲ್ಲಿ ಆ ಸಂಸ್ಕøತಿ ಇಲ್ಲ. ದುಡ್ಡು ಕೊಟ್ಟವರೆಲ್ಲಾ ದೊಡ್ಡ ರಾಜಕಾರಣಿ ಆಗ್ತಾರೆ ಅನ್ನೋ ಕಾಲ ಹೋಯ್ತು. ಹಣದಿಂದ ಗೆಲ್ಲುತ್ತಾರೆ ಅನ್ನೋದು ಆಗಲ್ಲ. ನಮ್ಮ ಸರ್ಕಾರ ಕೊಟ್ಟ ಅಭಿವೃದ್ಧಿ ಕೆಲಸಗಳನ್ನು ಜನ ಮೆಚ್ಚಿದ್ದಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. 2023 ರಲ್ಲೂ ಕಾಂಗ್ರೆಸ್ ಅನ್ನು ಜನ ತಿರಸ್ಕಾರ ಮಾಡ್ತಾರೆ ಎಂದು ಭವಿಷ್ಯ ನುಡಿದರು.