Published
5 months agoon
By
UNI Kannadaಜಪಾನ್ : ಡಿಸೆಂಬರ್ ೧೪ (ಯು.ಎನ್.ಐ)ಕೊರೊನಾವೈರಸ್ ಅನ್ನು ನಿಭಾಯಿಸುವುದು ಅತ್ಯಂತ ಕಷ್ಟಕರವೆಂಬುದು ಸಾಬೀತಾಗಿದ್ದು, ವೈರಸ್ ಸೋಂಕು ತುಂಬಾ ವೇಗ ಹೆಚ್ಚು. ಕೊರೊನಾ ನ್ಯೂ ವೆರಿಯಂಟ್ ಓಮೈಕ್ರಾನ್ನಿಂದ ತಡೆಗಟ್ಟುವಲ್ಲಿ ಸ್ಯಾನಿಟೈಸರ್ಗಳು ಮತ್ತು ಫೇಸ್ ಮಾಸ್ಕ್ಗಳ (ಸೈಂಟಿಸ್ಟ್ಸ್ ಡೆವಲಪ್ಡ್ ಅಡ್ವಾನ್ಸ್ಡ್ ಫೇಸ್ ಮಾಸ್ಕ್) ಬಳಕೆ ಬಹಳ ಮುಖ್ಯವಾಗಲು ಇದೇ ಕಾರಣ. ಈ ಸುರಕ್ಷತೆಯನ್ನು ಇನ್ನಷ್ಟು ಸುಧಾರಿಸಲು, ಈಗ ಜಪಾನ್ನ ವಿಜ್ಞಾನಿಗಳು ಆವಿಷ್ಕಾರ ಮಾಡಿ ವಿಶೇಷ ಮುಖಗವಸು (ಮಾಸ್ಕ್)ಅನ್ನು ತಯಾರಿಸಿದ್ದಾರೆ. ಕೊರೊನಾದೊಂದಿಗೆ ಸಂಪರ್ಕಕ್ಕೆ ಬಂದಾಗ ಹೊಳೆಯುತ್ತೆ.
ಈ ಆವಿಷ್ಕಾರ (ಫೇಸ್ ಮಾಸ್ಕ್ ಗ್ಲೋಸ್ ವೆನ್ ಇಟ್ ಡಿಟೆಕ್ಟ್ಸ್ ಕೋವಿಡ್) ಕರೋನಾ ತಡೆಗಟ್ಟುವಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸಬಹುದಾಗಿದ್ದು,ಮಮಿರರ್ ವರದಿಯ ಪ್ರಕಾರ, ವಿಜ್ಞಾನಿಗಳು (ಜಪಾನೀಸ್ ವಿಜ್ಞಾನಿಗಳು) ಆಸ್ಟ್ರಿಚ್ ಕೋಶಗಳ ಫಿಲ್ಟರ್ ಅನ್ನು ಮುಖಗವಸಿನಲ್ಲಿ ಅಳವಡಿಸಿದ್ದಾರೆ. ಈ ಫಿಲ್ಟರ್ಗಳ ಮೂಲಕ, ಕೊರೊನಮವೈರಸ್ ತಡೆಯಲು ಇದು ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ. ಕೋವಿಡ್ -19 ಅದರ ಸಂಪರ್ಕಕ್ಕೆ ಬಂದ ತಕ್ಷಣ, ಈ ಮುಖಗವಸು ಕತ್ತಲೆಯ ಸ್ಥಳದಲ್ಲಿ ಹೊಳೆಯೋಕೆ ಪ್ರಾರಂಭಿಸುತ್ತೆ.
ಹೇಗೆ ತಯಾರಾಯ್ತು ಗೊತ್ತಾ ಈ ಹೊಳೆಯೋ ಮಾಸ್ಕ್: ಜಪಾನ್ನ ಕ್ಯೋಟೋ ಪ್ರಿಫೆಕ್ಚರಲ್ ವಿಶ್ವವಿದ್ಯಾಲಯದ ಅಧ್ಯಕ್ಷ ಯಸುಹಿರೊ ತ್ಸುಕಾಮೊಟೊ ತಮ್ಮ ಸಂಶೋಧನಾ ಗುಂಪಿನ ಸಹಯೋಗದೊಂದಿಗೆ ಈ ಮಾಸ್ಕ್ ಅನ್ನು ಕಂಡುಹಿಡಿದಿದ್ದು, ಈ ಮಾಸ್ಕ್ ಮೇಲೆ ಎಲ್ಇಡಿ ಬೆಳಕನ್ನು ಸಹ ಬೆಳಕಿನ ಮೂಲವಾಗಿಯೂ ಬಳಸಬಹುದು ಎನ್ನುತ್ತಾರೆ. ಆಸ್ಟ್ರಿಚ್ ಮೊಟ್ಟೆಗಳಿಂದ ಪ್ರತಿಕಾಯಗಳನ್ನು ಮಾಸ್ಕ್ಗಳಲ್ಲಿ ಬಳಸಲಾಗಿದೆ. ಕೊರೊನಾದಿಂದ ರಕ್ಷಿಸಲು ಈ ಪಕ್ಷಿಗಳಿಗೆ ಮೊದಲು ಚುಚ್ಚುಮದ್ದು ನೀಡಿ ಬಾಹ್ಯ ಸೋಂಕನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸುವಲ್ಲಿ ಆಸ್ಟ್ರಿಚ್ ಪರಿಣತಿ ಹೊಂದುವಂತೆ ಮಾಡಲಾಯಿತು.ಮಾಸ್ಕ್ ಮೇಲೆ ಈ ಪ್ರತಿಕಾಯವನ್ನು ಸಿಂಪಡಿಸಿ ಅದು ಕೊರೊನಾ ವೈರಸ್ನೊಂದಿಗೆ ಸಂಪರ್ಕಕ್ಕೆ ಬಂದಾಗ ಏನಾಗುತ್ತದೆ ಎಂದು ಪರಿಶೀಲಿಸಲಾಯಿತು. 32 ಕೋವಿಡ್ ರೋಗಿಗಳಿಗೆ ಸತತ 3 ದಿನಗಳ ಕಾಲ ಇದನ್ನು ಬಳಸಿದ ನಂತರ, ಮಾಸ್ಕ್ಗಳು ಯುವಿ ಬೆಳಕಿನಲ್ಲಿ ಹೊಳೆಯುತ್ತಿರುವುದು ಕಂಡುಬಂದಿದೆ.
ಮಾಸ್ಕ್ ಮೇಲೆ ಆಸ್ಟ್ರಿಚ್ನ ಪ್ರತಿಕಾಯವನ್ನು ಅನ್ವಯಿಸಿ ಅದನ್ನು ಧರಿಸಿದಾಗ, ತಿನ್ನುವಾಗ, ಸೀನುವಾಗ ಮಾಸ್ಕ್ ವೈರಸ್ ಅನ್ನು ತಡೆಯುತ್ತದೆ. ಮಾಸ್ಕ್ ಅನ್ನು ಯುವಿ ಬೆಳಕಿನಲ್ಲಿ ಇರಿಸಿದಾಗ, ಅದು ಹೊಳೆಯಲು ಪ್ರಾರಂಭಿಸಿತು. ಕುತೂಹಲಕಾರಿ ಸಂಗತಿಯೆಂದರೆ ಸ್ಮಾರ್ಟ್ಫೋನ್ನ ಎಲ್ಇಡಿ ಲೈಟ್ನಲ್ಲಿಯೂ ಮಾಸ್ಕ್ ಕೆಲಸ ಮಾಡುತ್ತಿತ್ತು. ಈಗ ಈ ತಪಾಸಣೆ ಕಿಟ್ ಅನ್ನು ಈ ವರ್ಷದ ಅಂತ್ಯದ ವೇಳೆಗೆ ಜಪಾನ್ನಲ್ಲಿರುವ ಜನರಿಗೆ ನೀಡುವ ನಿರೀಕ್ಷೆಯಿದೆ. ಇದು ಯಾವುದೇ ವ್ಯಕ್ತಿಯೂ ಕರೋನಾ ಸೋಂಕಿಗೆ ಒಳಗಾಗಿರುವ ಸೂಚನೆಯನ್ನು ನೀಡಿ ಜನರನ್ನು ರಕ್ಷಿಸುತ್ತದೆ ಎನ್ನಲಾಗಿದೆ.
ಲಂಡನ್: ಕರ್ನಾಟಕದ ಸಾವಿರ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆ
ಶ್ರೀಲಂಕಾದಲ್ಲಿ ಇಂಧನ ಕಳ್ಳ ದಂಧೆಕೋರರ ಮೇಲೆ ದಾಳಿ!
“ಲಡಾಖ್ನಲ್ಲಿ ಉಕ್ರೇನ್ನಂಥ ಪರಿಸ್ಥಿತಿ” – ರಾಹುಲ್ ಗಾಂಧಿ ಲಂಡನ್ನಲ್ಲಿ ಹೇಳಿಕೆ
ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ತೆರವುಗೊಳಿಸಿದ ಸರ್ಕಾರ
ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್
ಕಾನ್ ಚಲನಚಿತ್ರೋತ್ಸವ 2022; ರೆಡ್ ಕಾರ್ಪೆಟ್ ಮೇಲೆ ‘ಅತ್ಯಾಚಾರ’ದ ಪ್ರತಿಭಟನೆ!