Connect with us


      
ರಾಜಕೀಯ

ಕೃಷ್ಣ ಪ್ರತಿದಿನ ಕನಸಿನಲ್ಲಿ ಬರುತ್ತಾನೆ ಎಂಬ ಅಖಿಲೇಶ್ ಮಾತಿಗೆ ಟಾಂಗ್ ಕೊಟ್ಟ ಯೋಗಿ ಆದಿತ್ಯನಾಥ್

Vanitha Jain

Published

on

ಲಕ್ನೋ: ಜನವರಿ 04(ಯು.ಎನ್.ಐ) ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸುವ ಮೊದಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಮುಖಂಡ ಅಖಿಲೇಶ್ ಯಾದವ್ ಅವರ ನಡುವೆ ನಿರಂತರವಾಗಿ ವಾಕ್ಸಮರ ಮುಂದುವರೆದಿದೆ.

ಶ್ರೀ ಕೃಷ್ಣ ನನ್ನ ಕನಸಿನಲ್ಲಿ ಬಂದು ಯುಪಿಯಲ್ಲಿ ನಿನ್ನ ಪಕ್ಷ ಸರ್ಕಾರ ರಚಿಸಲಿದೆ. ರಾಮ ರಾಜ್ಯ ಬರಲಿದೆ ಎಂದು ಹೇಳಿದ್ದಾನೆ. ಶ್ರೀ ಕೃಷ್ಣ ಒಂದು ದಿನ ಮಾತ್ರವಲ್ಲ ಪ್ರತಿದಿನ ನನ್ನ ಕನಸಿನಲ್ಲಿ ಬರುತ್ತಾನೆ ಎಂಬ ಮಾತಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಟಾಂಗ್ ನೀಡಿದ್ದಾರೆ.

ಅಧಿಕಾರದಲ್ಲಿದ್ದು ಮಥುರಾ ಮತ್ತು ವೃಂದಾವನಕ್ಕೆ ಏನನ್ನೂ ಮಾಡದವರನ್ನು ಶ್ರೀಕೃಷ್ಣನು “ಶಪಿಸುತ್ತಿರಬೇಕು” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಅಲಿಘರ್‍ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ಕೆಲವರ ಕನಸಿನಲ್ಲಿ ಶ್ರೀಕೃಷ್ಣನನ್ನು ಬಂದಿದ್ದಾರೆ. ಅವರಿಗೆ ಶ್ರೀ ಕೃಷ್ಣನು ನಿಮ್ಮ ವೈಫಲ್ಯಗಳ ಬಗ್ಗೆ ಈಗಲಾದರೂ ಅಳಲು ಹೇಳುತ್ತಿರಬೇಕು. ನೀವು ಮಾಡಲಾಗದ್ದನ್ನು ಬಿಜೆಪಿ ಸರ್ಕಾರ ಮಾಡಿದೆ. ನೀವು ಅಧಿಕಾರದಲ್ಲಿದ್ದಾಗ ನೀವು ಮಥುರಾ ಮತ್ತು ವೃಂದಾವನದಂತಹ ಸ್ಥಳಗಳಿಗೆ ಏನನ್ನೂ ಮಾಡಿಲ್ಲ ಎಂದು ಶ್ರೀಕೃಷ್ಣ ಅವರನ್ನು ಶಪಿಸುತ್ತಿರಬೇಕು ಎಂದು ಅವರು ಹಿಂದೂ ದೇವರು ಕೃಷ್ಣನಿಗೆ ಸಂಬಂಧಿಸಿರುವ ಯುಪಿಯ ಎರಡು ಪವಿತ್ರ ನಗರಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.

ಹಿಂದೂ ಧರ್ಮಿಯರ ಮತ ಓಲೈಕೆಗಾಗಿ ಫೆಬ್ರವರಿಯಲ್ಲಿ ನಡೆಯಲಿರುವ 2022ರ ರಾಜ್ಯ ಚುನಾವಣೆಗೆ ಅಯೋಧ್ಯೆ ಅಥವಾ ಮಥುರಾದಿಂದ ಸ್ಪರ್ಧಿಸಲು ಮುಖ್ಯಮಂತ್ರಿಯ ಮೇಲೆ ಒತ್ತಡವಿದೆ ಎಂದು ಮೂಲಗಳು ಹೇಳುತ್ತಿವೆ.

ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಪ್ರತಿಯೊಂದು ಪಕ್ಷಗಳು ಪ್ರಚಾರದಲ್ಲಿ ತೊಡಗಿವೆ. ತಮ್ಮ ಸಾಧನೆಗಳ ಮೂಲಕ ಮತದಾರರನ್ನು ಓಲೈಸುವ ತಂತ್ರವೂ ಕೂಡ ಮುಂದುವರೆದಿದೆ. ಇದರಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ವಾಕ್ಸಾಮರ, ಪ್ರಚಾರಗಳು ತುಸು ಜೋರಾಗಿಯೇ ಇದೆ. ಪ್ರತಿ ಪಕ್ಷಗಳು ತಮ್ಮ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ, ಟೀಕೆ ಮಾಡುವ ಮೂಲಕ ತಮ್ಮ ತಮ್ಮ ಪಕ್ಷದ ವರ್ಚಸ್ಸನ್ನು ಜನರ ಮುಂದೆ ಇಡುತ್ತಿದ್ದಾರೆ.

Share