Connect with us


      
ಸಾಮಾನ್ಯ

‘ಮಹಾಭಾರತ’ದ ಭೀಮ ಪಾತ್ರಧಾರಿ ನಿಧನ

Vanitha Jain

Published

on

ನವದೆಹಲಿ: ಫೆಬ್ರವರಿ 08 (ಯು.ಎನ್.ಐ.) ‘ಮಹಾಭಾರತ’ ಧಾರವಾಹಿಯಲ್ಲಿ ಭೀಮನ ಪಾತ್ರದಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ನಟ, ಕ್ರೀಡಾಪಟು ಪ್ರವೀಣ್ ಕುಮಾರ್‌ ಸೊಬ್ತಿ ಸೋಮವಾರ ತಡರಾತ್ರಿ ಅಶೋಕ್ ವಿಹಾರ್ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

74 ವರ್ಷದ ಪ್ರವೀಣ್ ಕುಮಾರ್‌ ಸೊಬ್ತಿ ಏಷ್ಯನ್‌ ಗೇಮ್ಸ್ ಚಿನ್ನದ ಪದಕ ಗೆದ್ದಿದ್ದರು.

ಪ್ರವೀಣ್ ಕುಮಾರ್‌ ಸೊಬ್ತಿ ದೀರ್ಘಕಾಲದ ಎದೆಯ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದರು. ರಾತ್ರಿ ಆರೋಗ್ಯದಲ್ಲಿ ಕೊಂಚ ಏರುಪೇರಾಯಿತು. ನಾವು ವೈದ್ಯರನ್ನು ಮನೆಗೆ ಕರೆಸಿದೆವು. ಆದರೆ ಹೃದಯ ಸ್ತಂಭನದಿಂದಾಗಿ ರಾತ್ರಿ 10-10.30 ರ ನಡುವೆ ನಿಧನರಾದರು ಎಂದು ಪ್ರವೀಣ್ ಸಂಬಂಧಿಯೊಬ್ಬರು ತಿಳಿಸಿದರು.

ಪ್ರವೀಣ್ ಹ್ಯಾಮರ್ ಮತ್ತು ಡಿಸ್ಕಸ್ ಥ್ರೋನಲ್ಲಿ ವಿವಿಧ ಅಥ್ಲೆಟಿಕ್ ನಲ್ಲಿ ದೇಶವನ್ನು ಪ್ರತಿನಿಧಿಸಿದರು ಮತ್ತು 1966 ಮತ್ತು 1970ರಲ್ಲಿ ಎರಡು ಚಿನ್ನದ ಪದಕಗಳನ್ನು ಒಳಗೊಂಡಂತೆ ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಪದಕಗಳನ್ನು ಗೆದ್ದರು.

Continue Reading
Share