Connect with us


      
ದೇಶ

ಮಹಿಳೆಯರ ರಕ್ಷಣೆಗಾಗಿ ಕಾರ್ಯಪ್ರವೃತ್ತವಾಗುತ್ತಿವೆ 91 ನಿರ್ಭಯಾ ಸ್ಕ್ವಾಡ್ ಗಳು

Vanitha Jain

Published

on

ಮಹಿಳೆಯರ ರಕ್ಷಣೆಗಾಗಿ ಕಾರ್ಯಪ್ರವೃತ್ತವಾಗುತ್ತಿವೆ 91 ನಿರ್ಭಯಾ ಸ್ಕ್ವಾಡ್ ಗಳು

ಮುಂಬೈ: ಜನೆವರಿ 26 (ಯು.ಎನ್.ಐ.) ಮಹಿಳೆಯರು, ಯುವತಿಯರ ರಕ್ಷಣೆಯ ಸಲುವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮುಂಬೈನಲ್ಲಿ 91 ನಿರ್ಭಯಾ ಸ್ಕ್ವಾಡ್ ಗಳಿಗೆ ಚಾಲನೆ ನೀಡಿದರು.

91 ನಿರ್ಭಯಾ ತಂಡಗಳಲ್ಲಿ ವಿಶೇಷ ತರಬೇತಿ ಪಡೆದ ಮಹಿಳಾ ಮತ್ತು ಪುರುಷ ಅಧಿಕಾರಿಗಳು ಮುಂಬೈನಾದ್ಯಂತ 24/7 ಕಾಲ ಕಾರ್ಯ ನಿರ್ವಹಿಸುತ್ತಾರೆ. ಮಹಿಳೆಯರು, ಯುವತಿಯರು ತಕ್ಷಣದ ಸಹಾಯಕ್ಕಾಗಿ 103 ನಂಬರಿಗೆ ಕರೆ ಮಾಡಿದರೆ ಸಹಾಯಕ್ಕೆ ಧಾವಿಸುತ್ತಾರೆ ಎಂದು ಸಚಿವ ಆದಿತ್ಯ ಠಾಕ್ರೆ ಹೇಳಿದರು.

ನಿರ್ಭಯಾ ಸ್ಕ್ವಾಡ್ ಉದ್ಘಾಟನೆಯ ನಂತರ ಮಾತನಾಡಿ, ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಘಟನೆಗಳು ಸಂಭವಿಸಿದಾಗ, ನಾವು ಮಹಿಳೆಯನ್ನು ಪ್ರಶ್ನಿಸುತ್ತೇವೆ. ಅವಳು ಹೊರಗೆ ಏಕೆ ತಿರುಗುತ್ತಿದ್ದಳು, ಅವಳು ಯಾವ ಬಟ್ಟೆ ಧರಿಸಿದ್ದಳು? ಮಹಿಳೆಯರು, ಯುವತಿಯರು ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು. ಭಯಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

Share