Published
2 weeks agoon
ಮುಂಬೈ/ಸೂರತ್: ಜೂನ್ 22 (ಯು.ಎನ್.ಐ.) ರಾಜಕೀಯ ಬಿಕ್ಕಟ್ಟಿನ ಕುರಿತು ಕರೆದಿದ್ದ ಮಹಾರಾಷ್ಟ್ರ ಸಚಿವ ಸಂಪುಟದ ಮಹತ್ವದ ಸಭೆ ಮುಕ್ತಾಯವಾಗಿದೆ. ಇದರಲ್ಲಿ ಉದ್ಧವ್ ಅವರು ಕರೋನಾ ಪಾಸಿಟಿವ್ ಆಗಿರುವುದರಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದರು. ಮೀಟಿಂಗ್ ನಲ್ಲಿ ಏನು ತೀರ್ಮಾನವಾಯಿತು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಸಭೆಗೆ 8 ಸಚಿವರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಭೆಗೂ ಮುನ್ನ ಸಂಜಯ್ ರಾವತ್ ಅವರು ವಿಧಾನಸಭೆ ವಿಸರ್ಜನೆಯ ದಿಕ್ಕಿನತ್ತ ಸಾಗುತ್ತಿದೆ ಎಂದು ಸೂಚಿಸಿದ್ದರು.
ಈ ಎಲ್ಲ ರಾಜಕೀಯ ಮೇಲಾಟದ ನಡುವೆಯೇ ಮುಖ್ಯಮಂತ್ರಿ ಉದ್ಧವ್ ಅವರ ಮೊದಲ ಹೇಳಿಕೆ ಮುನ್ನೆಲೆಗೆ ಬಂದಿದ್ದು, ಮುಂದೆ ಏನಾಗುತ್ತದೆ ಎಂದು ನೋಡೋಣ? ಎಂದು ಹೇಳಿದ್ದಾರೆ. ಸೂರತ್ನಿಂದ ಗುವಾಹಟಿಗೆ ಆಗಮಿಸಿರುವ ಏಕನಾಥ್ ಶಿಂಧೆ, ಈಗ ತಮ್ಮೊಂದಿಗೆ 46 ಶಾಸಕರಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಶಿವಸೇನೆಯಿಂದ ಬೇರ್ಪಡುವುದಿಲ್ಲ ಎಂದು ಏಕನಾಥ್ ಶಿಂಧೆ ನೀಡುತ್ತಿರುವ ಹೇಳಿಕೆ ಕೌತುಕಕ್ಕೆ ಕಾರಣವಾಗಿದೆ. ಇನ್ನೂ ಹಲವು ಹೈಡ್ರಾಮಾಗಳಿಗೆ ಮಹಾರಾಷ್ಟ್ರ ರಾಜಕೀಯ ಸಾಕ್ಷಿಯಾಗುತ್ತಿದೆ.
ಈ ಮಧ್ಯೆ ಕಮಲ್ ನಾಥ್ ಅವರು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದರು. ಬಳಿಕ ಉದ್ಧವ್ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಆದರೆ ಭೇಟಿಯಾಗಿಲ್ಲ. ಶರದ್ ಪವಾರ್ ಎನ್ಸಿಪಿ ಕೋಟಾದ ಸಚಿವರೊಂದಿಗೆ ಪರಿಸ್ಥಿತಿಯನ್ನು ಚರ್ಚಿಸಿದರು. ಬಿಜೆಪಿ ಕೂಡ ತನ್ನ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ.
4 ಪ್ರಮುಖ ಬೆಳವಣಿಗೆಗಳು
1. ಉದ್ಧವ್ ಅವರ ಸಂಪುಟ ಸಭೆ ಮುಗಿದಿದೆ. 8 ಸಚಿವರು ನಾಪತ್ತೆಯಾಗಿರುವ ಸುದ್ದಿ. ಎಲ್ಲ ಶಾಸಕರಿಗೂ ಸಿಎಂ ಕಚೇರಿ ತಲುಪುವಂತೆ ಆದೇಶ ನೀಡಲಾಗಿದೆ.
2. ನಿತಿನ್ ದೇಶಮುಖ್ ಸೂರತ್ನಿಂದ ನಾಗ್ಪುರ ತಲುಪಿದ್ದಾರೆ. ಪೊಲೀಸರು ಮತ್ತು ಆಸ್ಪತ್ರೆಯ ಸಿಬ್ಬಂದಿ ಬಲವಂತಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
3. ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಮತ್ತು ಎನ್ಸಿಪಿ ಸಂಪೂರ್ಣ ಬೆಂಬಲವಿದೆ ಎಂದು ಕಮಲ್ ನಾಥ್ ಹೇಳಿದ್ದಾರೆ. ಪವಾರ್ ಕೂಡ ತಮ್ಮ ಬೆಂಬಲವನ್ನು ಮುಂದುವರಿಸಲಿದ್ದಾರೆ. ಬಂಡಾಯ ಶಾಸಕರು ಮಹಾರಾಷ್ಟ್ರ ಸರಕಾರಕ್ಕೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
4. ಆದಿತ್ಯ ಠಾಕ್ರೆ ಅವರು ತಮ್ಮ ಟ್ವಿಟರ್ ನಿಂದ ಸಚಿವರ ಪ್ರೊಫೈಲ್ ಅನ್ನು ತೆಗೆದುಹಾಕಿದ್ದಾರೆ.
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ಬಂಧನ; ಜರ್ಮನಿ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಕೇಂದ್ರ
ಚೀನಾದ ಕಂಪನಿಗಳು ಭಾರತದ ಕಾನೂನು ಪಾಲಿಸಬೇಕು: ವಿದೇಶಾಂಗ ಸಚಿವಾಲಯ
ಶೀಘ್ರದಲ್ಲೇ ವಾಣಿಜ್ಯ ಹಾರಾಟ ನಡೆಸಲಿದೆ ‘ಆಕಾಶ ಏರ್’
ಫೋನ್ ಹಿಂತಿರುಗಿಸಲು ನಿರಾಕರಿಸಿದ್ದಕ್ಕೆ ಸ್ನೇಹಿತನ ಕೊಂದ ಪಾಪಿ
ಮಹಾರಾಷ್ಟ್ರ ಸರ್ಕಾರ; ಬಿಜೆಪಿಯ 25, ಶಿಂಧೆ ಟೀಂನ 13 ಮಂತ್ರಿಗಳನ್ನು ಹೊಂದುವ ಸಚಿವ ಸಂಪುಟ
ಹಿಂದೂ ವ್ಯಕ್ತಿಯ ಅಂತಿಮ ವಿಧಿವಿಧಾನ ನೆರವೇರಿಸಿದ ಮುಸ್ಲಿಂ ಕುಟುಂಬ