Published
6 months agoon
By
UNI Kannadaಮಹಾರಾಷ್ಟ್ರ, ಜನವರಿ 01 (ಯು.ಎನ್.ಐ.) ಮಹಾರಾಷ್ಟ್ರಕ್ಕೆ ಸೇರಿದ 10 ಮಂತ್ರಿಗಳಿಗೆ ಮತ್ತು 20 ಶಾಸಕರಿಗೆ ಕೂಡ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.
ಶಾಸಕಾಂಗ ಸಭೆಯ ವೇಳೆಯಲ್ಲಿ ರಾಜ್ಯದ ಶಾಸಕರು ಮತ್ತು ಮಂತ್ರಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಇದರ ಫಲಿತಾಂಶ ಬಂದಿದ್ದು 10 ಮಂತ್ರಿಗಳು ಮತ್ತು 20 ಶಾಸಕರಿಗೆ ಸೋಂಕು ಧೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ ಮತ್ತೇ ಕರೋನ ಆರ್ಭಟ ಮುಂದುವರೆದಿದೆ ಎಂದು ಹೇಳಿದ್ದಾರೆ.
ಇದೇ ರೀತಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೇ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳಿಗೆ ಮುಂದಾಗಬೇಕಾಗುತ್ತದೆ. ಇಂದು ಒಂದು ದಿನಕ್ಕೆ 454 ಒಮೈಕ್ರಾನ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದರು.
ಪ್ರತಿವರ್ಷ ಚಳಿಗಾಲದ ಅಧಿವೇಶನವನ್ನು ನಾಗಪುರದಲ್ಲಿ ನಡೆಸಲಾಗುತ್ತಿತ್ತು. ಆದರೇ ಕೋವಿಡ್ ನ ಕಾರಣದಿಂದಾಗಿ ಈ ಬಾರಿ ಆ ಸಮಾವೇಶಗಳನ್ನ ಮುಂಬೈನಲ್ಲಿ ನಿರ್ವಹಿಸಬೇಕಾಯಿತು. ವಿಧಾನಸಭೆ ಸಮಾವೇಶದ ವೇಳೆಯಲ್ಲೆ ಸುಮಾರು 50 ಕೋವಿಡ್ ಪ್ರಕರಣಗಳು ವರದಿಯಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!