Published
6 months agoon
ಬೆಂಗಳೂರು: ಜನೆವರಿ 04 (ಯು.ಎನ್.ಐ.) ಕಾಂಗ್ರೆಸ್ ಸರಕಾರ ಮಾಡಿದ ಮೇಕೆದಾಟು ಯೋಜನೆಗೆ ಅಡ್ಡಿಪಡಿಸುವ ಹಾಗೂ ಜ.9ರ ಪಾದಯಾತ್ರೆಯನ್ನು ತಡೆಯುವ ಉದ್ದೇಶದಿಂದ ಸಚಿವ ಅಶ್ವತ್ಥನಾರಾಯಣ ಅವರು ಪ್ಲಾನ್ ಮಾಡಿಯೇ ರಾಮನಗರದಲ್ಲಿ ಹೊಡಿ-ಬಡಿ ಎಂದು ಹೀನಾಯ ಸಂಸ್ಕøತಿಯನ್ನು ಪ್ರದರ್ಶಿಸಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ ರೇಣು ಆರೋಪಿಸಿದರು.
ಡಾ. ಸಿ.ಎನ್. ಅಶ್ವತ್ಥನಾರಾಯಣರವರು ತಾವು ಸಚಿವರು ಎಂಬುದನ್ನು ಮರೆತು ರಾಮನಗರದ ಸರಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಏಕವಚನದಲ್ಲಿ ಮಾತನಾಡಿ, ಸಂಸದ ಡಿ.ಕೆ. ಸುರೇಶ್ ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ ಕ್ರಮವನ್ನು ಖಂಡಿಸಿ ಮಲ್ಲೇಶ್ವರಂನ ಕುವೆಂಪು ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಂಗಳವಾರ ಅವರು ಮಾತನಾಡಿದರು.
`ಹದಗೆಟ್ಟ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ತಮ್ಮ ಕ್ಷೇತ್ರ ಮಲ್ಲೇಶ್ವರಂ ಸಮಸ್ಯೆಗಳ ಆಗರವಾಗಿದೆ. ಭ್ರಷ್ಟಾಚಾರವನ್ನು ಕಡಿಮೆ ಮಾಡಿಕೊಂಡು ತಮ್ಮ ಕ್ಷೇತ್ರದ ಅಭವೃದ್ಧಿಯತ್ತ ಗಮನ ಹರಿಸದ ಮಲ್ಲೇಶ್ವರ ಕ್ಷೇತ್ರದ ಶಾಸಕರೂ, ಉನ್ನತ ಶಿಕ್ಷಣ ಸಚಿವರೂ ಆದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ರಾಮನಗರವನ್ನು ಅಭಿವೃದ್ಧಿ ಮಾಡುತ್ತಾರಂತೆ. ಇದು ಯಾವ ನ್ಯಾಯ ಸ್ವಾಮಿ ಎಂದು ಶ್ರೀಪಾದ ರೇಣು ಪ್ರಶ್ನಿಸಿದರು.
ಸಿದ್ದರಾಮಯ್ಯನವರ ಕಾಲದಲ್ಲಿ ಮೇಕೆದಾಟು ಯೋಜನೆಯನ್ನು ಮಾಡಿಸಿ, ಡಿಪಿಆರ್ ಕೂಡ ತಯಾರಿಸಲಾಗಿದೆ. ಈ ಯೋಜನೆಯ ಬಗ್ಗೆ ಜನರಿಗೆ ತಿಳಿಸಲು ಜ.9ರಂದು ನಾವು ಪಾದಯಾತ್ರೆಯನ್ನು ಮಾಡಲು ಹೊರಟಿದ್ದೇವೆ. ಇದನ್ನು ಸಹಿಸದೆ ಅಶ್ವತ್ಥನಾರಾಯಣ ಅವರು ರಾಮನಗರದಲ್ಲಿ ಪ್ಲಾನ್ ಮಾಡಿಯೇ ದಾಂಧಲೆ ಮಾಡಿದ್ದಾರೆ. ಕಾಂಗ್ರೆಸ್ಗೆ ಹೆಸರು ಬಂದುಬಿಡುತ್ತದೆ ಎಂಬ ದುರಾಲೋಚನೆಯಿಂದ ಅಶ್ವತ್ಥನಾರಾಯಣ ಅವರು ಈ ರೀತಿ ಕುತಂತ್ರ ಬುದ್ಧಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೆ ಇದಕ್ಕೆ ಬಿಜೆಪಿ ಸರಕಾರ ಅಡ್ಡಿಪಡಿಸುತ್ತಿದೆ. ಕರ್ನಾಟಕದಲ್ಲಿ ಸಾಕಷ್ಟು ಜನ ಮುಖ್ಯಮಂತ್ರಿಗಳಾಗಿದ್ದಾರೆ. ರಾಜ್ಯದಿಂದ ಪ್ರಧಾನ ಮಂತ್ರಿಗಳನ್ನು ಮಾಡಿದ್ದೇವೆ. ಆದರೆ ಯಾವ ಸರಕಾರವೂ ಈಗಿನ ಬಿಜೆಪಿಯಂತೆ ಶೇ.40 `ಕಮಿಷನ್ ಸರಕಾರ’ ಎಂದು ಕರೆಸಿಕೊಂಡಿರಲಿಲ್ಲ. ಇನ್ನು ಮುಂದಾದರೂ ಭ್ರಷ್ಟಾಚಾರವನ್ನು ನಿಯಂತ್ರಿಸಿ, ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಮಧ್ಯೆ ಕುಳಿತು ‘ಮೇಕೆ ದಾಟು ಯೋಜನೆ ವಿರೋಧಿ ಅಶ್ವತ್ಥನಾರಾಯಣ ಅವರಿಗೆ ಧಿಕ್ಕಾರ, ಧಿಕ್ಕಾರ’ ಎಂಬ ಫಲಕಗಳನ್ನು ಹಿಡಿದು ಕೂಗಿದರು.
ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು; ಶಿಂಧೆ ಬಣ ಸೇರಿದ ಮತ್ತೊಬ್ಬ ಮಿನಿಸ್ಟರ್
ಮಹಾರಾಷ್ಟ್ರ ಸರ್ಕಾರದಲ್ಲಿ ಬಿಕ್ಕಟ್ಟು; ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿಂಧೆ ಟೀಂ
ಲೋಕಸಭೆ ಉಪಚುನಾವಣೆ; ಅಖಿಲೇಶ್ ಯಾದವ್ ಗೆ ಮುಖಭಂಗ, ಅರಳಿದ ‘ಕಮಲ’
ಶಿವಸೇನೆ ಬಂಡಾಯ ನಾಯಕರಿಗೆ ಭದ್ರತೆ ಒದಗಿಸಿ: ಮಹಾರಾಷ್ಟ್ರ ರಾಜ್ಯಪಾಲರು
ನೀವು ಎಷ್ಟು ದಿನ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಿ? …ಉಪಸ್ಪೀಕರ್ ಫೋಟೋ ಜೊತೆ ರೆಬೆಲ್ಸ್ ಗೆ ಶಿವಸೇನೆ ಸಂದೇಶ
ನಿಮಗೆ ಧೈರ್ಯವಿದ್ದರೆ ಶಿವಸೇನೆ ಪಕ್ಷ ತೊರೆದು ಚುನಾವಣೆ ಎದುರಿಸಿ: ರೆಬೆಲ್ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು