ಧಾರವಾಡ, ಜ ೧(ಯು ಎನ್ ಐ) ಖ್ಯಾತ ಹಿಂದೂಸ್ಥಾನಿ ಸಂಗೀತಗಾರ ಪಂಡಿತ ಮಲ್ಲಿಕಾರ್ಜುನ ಮನಸೂರ ಅವರ ೧೧೧ ನೇ ಜನ್ಮ ದಿನದ ಅಂಗವಾಗಿ, ಧಾರವಾಡದ ಡಾಕ್ಟರ್ ಅಣ್ಣಾಜಿರಾವ್ ಸಿರೂರ ರಂಗಮಂದಿರದಲ್ಲಿ, ಇಂದು ಸಂಜೆ ೬ ಗಂಟೆಗೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಜರುಗಲಿದೆ. ಮುಂಬೈನ ಖ್ಯಾತ ಬಾನ್ಸೂರಿ ವಾದಕ ಪಂಡಿತ ನಿತ್ಯಾನಂದ ಹಳದೀಪುರ ಅವರಿಗೆ ೨೦೨೧ನೇ ಸಾಲಿನ ಡಾಕ್ಟರ್ ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಹಾಗೂ ಧಾರವಾಡದ ಉದಯೋನ್ಮುಖ ಸಂಗೀತ ಪ್ರತಿಭೆ ಕುಮಾರಿ ಶಿವಾನಿ ಮಿರಜಕರ್ ಅವರಿಗೆ ೨೦೨೧ನೇ ಸಾಲಿನ ಡಾಕ್ಟರ್ ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.