Published
5 months agoon
By
Vanitha Jainಭೋಪಾಲ್, ಡಿಸೆಂಬರ್ 14 (ಯು.ಎನ್.ಐ) ಮದುವೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಗುಂಪಿಗೆ ಸೇರಿದ ಮೂವರನ್ನು ಪೊಲೀಸರು ಬಂಧಿಸಿದ್ದು, 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೃತರನ್ನು ದೇವಿಲಾಲ್ ಮೀನಾ ಎಂದು ಗುರುತಿಸಲಾಗಿದ್ದು, ಶಮ್ಗಢ ಪ್ರದೇಶದ ನಿವಾಸಿಯಾಗಿದ್ದಾರೆ. ಎರಡು ಬಾರಿ ಸರಪಂಚ್ ಆಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ, ಜೈಲಿನಲ್ಲಿರುವ ಸ್ವಯಂ ಘೋಷಿತ ‘ದೇವಮಾನವ’ ರಾಂಪಾಲ್ ಅನುಯಾಯಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ವರ್ಮಾ, ಇಂತಹ ವಿವಾಹಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿವೆ ಎಂದು ಆರೋಪಿಸಿ ಶಸ್ತ್ರಸಜ್ಜಿತ ದಾಳಿಕೋರರು ಮದುವೆಯನ್ನು ಧ್ವಂಸಗೊಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ದಾಳಿಯ ವೀಡಿಯೊಗಳು ದಾಳಿಕೋರನು ಕೆಂಪು ಸ್ವೆಟ್ಶರ್ಟ್ ಮತ್ತು ಸನ್ಗ್ಲಾಸ್ಗಳನ್ನು ಧರಿಸಿ, ಅತಿಥಿಗಳ ಕಡೆಗೆ ಗನ್ ಹಿಡಿದಿರುವುದು ಗೋಚರವಾಗುತ್ತಿದೆ. ಇದರಿಂದ ಭಯಭೀರದ ಜನರು ಮದುವೆ ಮನೆಯಿಂದ ಓಡಿಹೋಗುವುದನ್ನು ಕಾಣಬಹುದು. ಇನ್ನು ದಾಳಿಕೋರರರು ಶ್ರೀರಾಮ್ ಎಂದು ಕೂಗುವುದನ್ನು ಸಹ ವಿಡಿಯೋದಲ್ಲಿ ಕೇಳಿ ಬರುತ್ತದೆ.
ರಾಂಪಾಲ್ ಅನುಯಾಯಿಗಳ ವಿವಾಹ ವಿಭಿನ್ನವಾಗಿರುತ್ತದೆ. ಇದನ್ನು ರಾಮಿನಿ ಎಂದು ಕರೆಯಲಾಗುತ್ತದೆ, ಇದು ಕೇವಲ 17 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇಂತಹ ಮದುವೆ ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ದಾಳಿಕೋರರು ಆರೋಪಿಸಿದ್ದಾರೆ.
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಸ್ಥಳವನ್ನು ಬಂದ್ ಮಾಡಿ: ಕೋರ್ಟ್ ಆದೇಶ
ಜ್ಞಾನವಾಪಿ ಮಸೀದಿಯ ಕೊಠಡಿಯಲ್ಲಿ ಶಿವಲಿಂಗ ಪತ್ತೆ: ವಿಎಚ್ಪಿ ಸಂತಸ
ಜೆಡಿಯು ಶಾಸಕ ನೃತ್ಯ ; ಪಕ್ಷದ ಎಚ್ಚರಿಕೆ
1402 ವರ್ಷಗಳ ನಂತರ ವೈಶಾಖ ಪೂರ್ಣಿಮೆಯಂದು ಪೂರ್ಣ ಚಂದ್ರಗ್ರಹಣ
ಕೇರಳದಲ್ಲಿ ಟ್ವೆಂಟಿ-20 ಜೊತೆ ಎಎಪಿ ರಾಜಕೀಯ ಮೈತ್ರಿ!
ಕೇರಳ ಮಳೆ ಎಚ್ಚರ: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ