Published
6 months agoon
By
Vanitha Jainಗಾಂಧಿನಗರ: ಜನೆವರಿ 08 (ಯು.ಎನ್.ಐ.) ಏಳು ಲಕ್ಷ ಖರ್ಚು ಮಾಡಿ ನಾಯಿಯ ಹುಟ್ಟುಹಬ್ಬ ಆಚರಿಸಿದ ಮಾಲೀಕ ಸೇರಿದಂತೆ ಮೂವರನ್ನು ಗುಜರಾತ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಪೊಲೀಸರು ಬಂಧಿಸಿದ್ದು, ಹುಟ್ಟುಹಬ್ಬದ ವೇಳೆಯಲ್ಲಿ ಮಾಸ್ಕ್ ಧರಿಸಿದೆ ಪಾರ್ಟಿಯಲ್ಲಿ ಪಾಲ್ಗೊಂಡಿರುವ ವಿಡಿಯೋ ವೈರಲ್ ಆಗಿದೆ.
ನವ ನರೋಡಾ ಅಹಮದಾಬಾದ್ನ ನಿವಾಸಿ ಚಿರಾಗ್ ಅಲಿಯಾಸ್ ದಾಗೋ ಮಿನೇಶ್ಭಾಯ್ ಪಟೇಲ್ ಪ್ಲಾಟ್ನಲ್ಲಿರುವ ನಿಕೋಲ್ನಲ್ಲಿ ಆಯೋಜಿಸಿದ್ದ ತಮ್ಮ ನೆಚ್ಚಿನ ನಾಯಿ ಪೊಮೆರೇನಿಯನ್ ಅಬ್ಬಿಯ ಹುಟ್ಟುಹಬ್ಬಕ್ಕೆ ಸಂಬಂಧಿಕರನ್ನು ಆಹ್ವಾನಿಸಿದ್ದರು. ಸುಮಾರು 7 ಲಕ್ಷ ಖರ್ಚು ಮಾಡಿ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು.
ಅಹಮದಾಬಾದ್ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಜನರು ಮಾಸ್ಕ್ ಧರಿಸದೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಖ್ಯಾತ ಜಾನಪದ ಗಾಯಕಿ ಕಾಜಲ್ ಮೆಹ್ರಿಯಾ ಪಾರ್ಟಿಯಲ್ಲಿ ಹಾಡುಗಳನ್ನು ಹಾಡಿದರು.
ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿರಾಗ್ ಅಲಿಯಾಸ್ ಡಾಗೋ ಪಟೇಲ್ ಮತ್ತು ಉರ್ವೀಶ್ ಪಟೇಲ್ ಎಂಬ ಹೆಸರಿನ ಇತರ ಇಬ್ಬರು, ಮತ್ತು ದಿವ್ಯೇಶ್ ಮೆಹ್ರಿಯಾ ಮತ್ತು ಇತರ ಹಲವರು ಮಾಸ್ಕ್ ಧರಿಸಿರಲಿಲ್ಲ ಮತ್ತು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸದಿರುವುದು ವಿಡಿಯೋದಿಂದ ಪೊಲೀಸರಿಗೆ ತಿಳಿದಿದೆ. ವಿಡಿಯೋ ನೋಡಿದ ಪೊಲೀಸರು, ಪಾರ್ಟಿ ನಡೆಸಿದವರ ವಿರುದ್ಧ ಸಾಂಕ್ರಾಮಿಕ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.
ಇದಕ್ಕೂ ಮೊದಲು, ತಮಿಳುನಾಡಿನ ಕೊಯಮತ್ತೂರಿನ ನಿವಾಸಿಯೊಬ್ಬರು ಜನವರಿ 2 ರಂದು ನಗರದ ಪೆಟ್ ಕ್ಲಿನಿಕ್ನಲ್ಲಿ ತನ್ನ ಎರಡು ಪರ್ಷಿಯನ್ ಬೆಕ್ಕುಗಳಿಗೆ ವಲೈಕಪ್ಪು (ಬೇಬಿ ಶವರ್) ನಡೆಸಿದ್ದರು. ತಮಿಳುನಾಡಿನ ಮತ್ತೊಂದು ಪ್ರಮುಖ ನಗರವಾದ ಮಧುರೈನಲ್ಲಿ ಪೆÇಲೀಸ್ ಸಬ್ ಇನ್ಸ್ಪೆಕ್ಟರ್ ತನ್ನ ಸಾಕು ನಾಯಿಗೆ ಬೇಬಿ ಶವರ್ ಕೂಡ ನಡೆಸಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!