Connect with us


      




ಕರ್ನಾಟಕ

ಆಸಿಡ್ ಎರಚಿ ನಾಪತ್ತೆಯಾಗಿದ್ದ ನಾಗೇಶ್ ಸ್ವಾಮೀಜಿ ವೇಷದಲ್ಲಿ ತಮಿಳುನಾಡಲ್ಲಿ ಪತ್ತೆ

Lakshmi Vijaya

Published

on

ಬೆಂಗಳೂರು: ಮೇ 13 (ಯು.ಎನ್.ಐ.) ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಕಳೆದ ತಿಂಗಳು ಬೆಂಗಳೂರಿನಲ್ಲಿ ಯುವತಿಯ ಮೇಲೆ ಆಸಿಡ್ ಎರಚಿದ್ದ ಆರೋಪಿಯನ್ನ ತಮಿಳುನಾಡಿನ ಆಶ್ರಮದಲ್ಲಿ ಬಂಧಿಸಲಾಗಿದೆ.

ಆರೋಪಿ ನಾಗೇಶ್ ತಮಿಳುನಾಡಿನ ಆಶ್ರಯಮದಲ್ಲಿ ಕೇಸರಿ ಬಟ್ಟೆ ಧರಿಸಿ ಸ್ವಾಮೀಜಿಯ ವೇಷ ಧರಿಸಿ ತಲೆಮರೆಸಿಕೊಂಡಿದ್ದ. ವೆಲ್ಲೂರಿಗೆ ಸಮೀಪದಲ್ಲಿರುವ ತಿರುವಣ್ಣಾಮಲೈನಲ್ಲಿ ಅಲ್ಲಿ ಸ್ವಾಮೀಜಿಯ ವೇಷದಲ್ಲಿ ದರ್ಶನ ನೀಡ್ತಿದ್ದವನಿಗೆ ಬೆಂಗಳೂರಿನ ಪೊಲೀಸರು ಕೋಳ ಹಾಕಿ ಕರೆತಂದಿದ್ದಾರೆ. ಆರೋಪಿ ನಾಗೇಶ್ ಯುವತಿಯ ಮೇಲೆ ಆಸಿಡ್ ಎರಚಿ ಏಪ್ರಿಲ್ 28 ರಂದು ಬೆಂಗಳೂರಿನಿಂದ ಪರಾರಿಯಾಗಿದ್ದ.

ಆಸಿಡ್ ದಾಳಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದ ಯುವತಿ ಶುಕ್ರವಾರ ಪೋಷಕರೊಂದಿಗೆ ಮಾತನಾಡಿದ್ದಾಳೆ ಎಂದು ಗೊತ್ತಾಗಿದೆ. ನಾಗೇಶ್ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ಆತನನ್ನು ಬಂಧಿಸಲು ಏಳು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.

Share