Connect with us


      




ದೇಶ

ಎರಡು ದಿನಗಳ ಕಾಲ ಬೆಟ್ಟದಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಿದ ಭಾರತೀಯ ಸೇನೆ

Vanitha Jain

Published

on

ಪಾಲಕ್ಕಾಡ್: ಫೆಬ್ರವರಿ 09 (ಯು.ಎನ್.ಐ.) ಎರಡು ದಿನಗಳ ಕಾಲ ಆಹಾರ ಮತ್ತು ನೀರಿಲ್ಲದೆ, ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಬೆಟ್ಟದ ಸೀಳಿನಲ್ಲಿ ಸಿಲುಕಿದ್ದ 23 ವರ್ಷದ ವ್ಯಕ್ತಿಯನ್ನು ಭಾರತೀಯ ಸೇನೆ ಬುಧವಾರ ಬೆಳಿಗ್ಗೆ ರಕ್ಷಿಸಿದೆ.

ಆರ್ ಬಾಬು ಎಂಬಾತ ಬೆಟ್ಟದ ಸೀಳಿನಲ್ಲಿ ಸಿಲುಕಿದ್ದ ಯುವಕ. ಕೇರಳದ ಮಲಂಪುಳದವರು. ಈತನನ್ನು ಜೀವಂತವಾಗಿ ರಕ್ಷಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಬೆಟ್ಟದ ಸೀಳಿನಲ್ಲಿ ಟ್ರೆಕ್ಕಿಂಗ್ ವೇಳೆ ಆಯತಪ್ಪಿದ ಕಾರಣ ಬಾಬು ಸಿಲುಕಿಕೊಂಡಿದ್ದರು. ಬುಧವಾರ ಮುಂಜಾನೆ, ಎರಡು ಭಾರತೀಯ ಸೇನೆಯ ತಂಡಗಳು ಕೇರಳದ ಪಾಲಕ್ಕಾಡ್ ಜಿಲ್ಲೆಗೆ ತಲುಪಿತ್ತು. ವೆಲ್ಲಿಂಗ್ಟನ್‌ನ ಮದ್ರಾಸ್ ರೆಜಿಮೆಂಟ್ ಸೆಂಟರ್‌ನಿಂದ ಹನ್ನೆರಡು ಸಿಬ್ಬಂದಿಗಳ ಒಂದು ತಂಡವು 1.30 ಗಂಟೆಗೆ ರಸ್ತೆಯ ಮೂಲಕ ರಕ್ಷಣಾ ಸ್ಥಳಕ್ಕೆ ತಲುಪಿತು. ಈ ತಂಡವು ವಿಶೇಷ ಉಪಕರಣಗಳೊಂದಿಗೆ ಪರ್ವತ ಅರ್ಹ ಸಿಬ್ಬಂದಿಯನ್ನು ಒಳಗೊಂಡಿತ್ತು. ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಕೇಂದ್ರದಿಂದ 22 ಸಿಬ್ಬಂದಿಯ ಎರಡನೇ ತಂಡವನ್ನು ಮೊದಲು ವಿಮಾನದ ಮೂಲಕ ಸೂಲೂರಿಗೆ ಸ್ಥಳಾಂತರಿಸಲಾಯಿತು. ಬುಧವಾರ ಮುಂಜಾನೆ 4 ಗಂಟೆ ವೇಳೆಗೆ ರಕ್ಷಣಾ ಸ್ಥಳಕ್ಕೆ ತಂಡ ತಲುಪಿತ್ತು.

ಏನಿದು ಘಟನೆ?

ಸೋಮವಾರ ಬಾಬು ತನ್ನ ಸ್ನೇಹಿತರೊಂದಿಗೆ ಪಾಲಕ್ಕಾಡ್ ನ ಚೆರಾಡುವಿನ ಕುರುಂಬಾಚಿ ಬೆಟ್ಟಕ್ಕೆ ಹೋದಾಗ ಈ ಘಟನೆ ನಡೆದಿದೆ. ಅವರು ಟ್ರೆಕ್ಕಿಂಗ್ ಮುಗಿಸಿ ಕೆಳಗಿಳಿಯುವಾಗ ಬಾಬು ದಣಿದಿದ್ದರು ಮತ್ತು ಬಂಡೆಗಳ ಮೇಲೆ ಜಾರಿಬಿದ್ದು, ಬೆಟ್ಟದ ಸೀಳಿನಲ್ಲಿ ಸಿಲುಕಿಕೊಂಡರು. ಆತನ ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ನಮತರ ಸ್ನೇಹಿತರ ಗುಂಪು ಕೆಳಗಿಳಿದು ಪೊಲೀಸರಿಗೆ ಮಾಹಿತಿ ನೀಡಿತು. ಶೀಘ್ರದಲ್ಲೇ, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಆದರೆ ಕೋಸ್ಟ್‌ಗಾರ್ಡ್‌ನಿಂದ ಹೆಲಿಕಾಪ್ಟರ್ ಬಳಸಿ ಅವರನ್ನು ರಕ್ಷಿಸುವ ಪ್ರಯತ್ನಗಳು ಆರಂಭದಲ್ಲಿ ವಿಫಲವಾದವು. ತದ ನಂತರ ಎನ್ ಡಿಆರ್ ಎಫ್ ಪಡೆಯು ಯುವಕನ್ನು ಯಶಸ್ವಿಯಾಗಿ ಮೇಲಕ್ಕೆ ಕರೆತರುವಲ್ಲಿ ಯಶಸ್ವಿಯಾದವು.

Share