Published
6 months agoon
ಬೆಂಗಳೂರು: ಜನೆವರಿ 09 (ಯು.ಎನ್.ಐ.) ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಯಾಕೆ ಮಾಡ್ತಿದ್ದಾರೆ ಅನ್ನೊದು ಜನರಿಗೆ ಕಾಡುತ್ತಿರುವ ಪ್ರಶ್ನೆ. ಕಾಂಗ್ರೆಸ್ ಮುಖಂಡರಿಗೆ ಯಾವುದೇ ಬದ್ದತೆ ಇಲ್ಲ. ಅವರ ಸರ್ಕಾರ ಐದು ವರ್ಷ ಇತ್ತು ಸರಿಯಾಗಿ ಡಿಪಿಆರ್ ಕೂಡ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಅವರಿಂದು ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದರು. ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಂದಾಗ ಡಿಪಿಆರ್ ಆಗಿದೆ.ಇದೆಲ್ಲ ಈಗ ಬಯಲಾಗಿದೆ. ಅವರಿಗೆ ಬದ್ಧತೆ ಇಲ್ಲ ಎಂದು ಪುನರಚ್ಚರಿಸಿದ ಅವರು ಸಮ್ಮಿಶ್ರ ಸರ್ಕಾರದಲ್ಲಿ ಡಿಕೆಶಿ ನೀರಾವರಿ ಸಚಿವರು ಆಗಿದ್ದರು. ಆಗಲು ಏನು ಮಾಡಿಲ್ಲ. ಕಳೆದ ಎರಡು ವರ್ಷದಲ್ಲಿ ಇದರ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಈಗ ಚುನಾವಣೆ ಹತ್ತಿರ ಬಂದಿದೆ ಅಂತ ರಾಜಕೀಯ ಪಾದಾಯಾತ್ರೆ ಮಾಡ್ತಿದ್ದಾರೆ ಕೆಲಸ ಮಾಡಿಲ್ಲ ಎಂಬ ಅಪರಾಧ ಮನೋಭಾವನೆ ಅವರನ್ನ ಕಾಡ್ತಿದೆ ಅದಕ್ಕೆ ಜನರನ್ನು ಮರಳು ಮಾಡುವ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.
ಇದು ರಾಜಕೀಯ ಪ್ರೇರಿತ ಕಾಂಗ್ರೆಸ್ ಪಾದಯಾತ್ರೆ. ಅವರು ಎಂದಿಗೂ ನೀರಾವರಿ ಬಗ್ಗೆ ಕಾಳಜಿ ತೋರಿಸಿಲ್ಲ. ಕೃಷ್ಣೆಯ ಬಗ್ಗೆ ಪಾದಾಯಾತ್ರೆ ಮಾಡಿದ್ರು . ಏನಾಯ್ರು ಪ್ರತಿ ವರ್ಷ 10 ಸಾವಿರ ಕೋಟಿ ಕೊಡ್ತೀವಿ ಅಂತ ಕೂಡಲಸಂಗದಲ್ಲಿ ಪ್ರಮಾಣ ಮಾಡಿದ್ರು ಏನಾಯ್ತು. ? ಎಂದು ಪ್ರಶ್ನೆಗಳನ್ನು ಕೇಳಿದ ಅವರು ಜನ ಪದೇ ಪದೇ ಮರುಳಾಗಲ್ಲ, ಎಲ್ಲ ಸಮಯದಲ್ಲೂ ಮೋಸ ಮಾಡೋಕೆ ಆಗಲ್ಲ ಎಂದರು.
ನಾನು ಮುಖ್ಯಮಂತ್ರಿ ಆದ ನಂತರ ಡಿಪಿಆರ್ ಮಾಡಿ ಸಿಡಬ್ಲುಸಿಗೆ ಹೋಗಿದೆ. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಲೀಗಲ್ ಟೀಂ ಜತೆ ಕೂಡ ಮಾತನಾಡಿದ್ದೇನೆ. ಪರಿಸರ ಇಲಾಖೆಯ ಅನುಮೋದನೆ ತೆಗದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಹಿಂದೆ ರೈತರು ಮೇಕೆದಾಟು ವೀಕ್ಷಣೆ ಮಾಡಿದ್ದಕ್ಕೆ ಎನ್ಜಿಟಿ ಯಲ್ಲಿ ಕೇಸ್ ಹಾಕಿ ಸ್ಟೇ ತಂದು ದೊಡ್ಡದಾಗಿ ಮಾಡಿದ್ರು. ಈಗ ಕಾಂಗ್ರೆಸ್ ಇಷ್ಟು ದೊಡ್ಡ ಕಾರ್ಯಕ್ರಮ ಮಾಡಿದರೆ ಏನಾಗುತ್ತೆ ಅಂತ ಅವ್ರಿಗೂ ಗೊತ್ತಿದೆ. ಆದರೆ ಅವರಿಗೆ ನೀರಿನ ಬಗ್ಗೆ ಕಾಳಜಿಗಿಂತ ರಾಜಕೀಯವೇ ಮುಖ್ಯವಾಗಿದೆ ಎಂದು ಕಟುವಾಗಿ ಟೀಕಿಸಿದರು.
‘ಕೈ’ ಹಿಡಿದ ಕೊತ್ತೂರು ಮಂಜುನಾಥ್ ಹಾಗೂ ಎಂ.ಸಿ.ಸುಧಾಕರ್
ಕೋರ್ಟ್ ಸೂಚನೆ ಬೆನ್ನಲ್ಲೇ “ಬಾಳಾಸಾಹೇಬರ ಹಿಂದುತ್ವಕ್ಕೆ ಜಯ” ಎಂದ ಏಕನಾಥ್ ಶಿಂಧೆ
ದ್ರೋಹಿಗಳು ಗೆಲ್ಲುವುದಿಲ್ಲ; ಶಿಂಧೆ ಬಣಕ್ಕೆ ಆದಿತ್ಯ ಠಾಕ್ರೆ ಟಾಂಗ್
ಏಕನಾಥ್ ಶಿಂಧೆ ಬಣಕ್ಕೆ ತಾತ್ಕಾಲಿಕ ರಿಲೀಫ್; ಮುಂದಿನ ವಿಚಾರಕ್ಕೆ ಜು.11ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್
ರೆಬೆಲ್ ಸಚಿವರ ಖಾತೆ ಕಿತ್ತುಕೊಂಡ ಸಿಎಂ ಉದ್ಧವ್ ಠಾಕ್ರೆ
“ಇಡಿ ಸಮನ್ಸ್ ಗೆ ಸಂಜಯ್ ರಾವತ್ಗೆ ನನ್ನ ಶುಭಾಶಯಗಳು”: ಶಿಂಧೆ ಪುತ್ರನ ವ್ಯಂಗ್ಯ