Connect with us


      
ರಾಜಕೀಯ

ಮೇಕೆದಾಟು ಯೋಜನೆಗೆ ಬದ್ಧ ಎಂದು ಸಿಎಂ ಘೋಷಿಸಲಿ: ಪರಮೇಶ್ವರ್

Kumara Raitha

Published

on

ಮೇಕೆದಾಟು ಸಂಗಮ: ಜನೆವರಿ 09 (ಯು.ಎನ್.ಐ.) 9000 ಕೋಟಿ ವೆಚ್ಚದ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಲಿ, ಪಾದಯಾತ್ರೆ ನಿಲ್ಲಿಸುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಬಜೆಟ್ ನಲ್ಲಿ ಈ ಕುರಿತು ಘೋಷಿಸುತ್ತೇವೆ ಎಂದು ಹೇಳಿದರೆ ಸಾಕು. ಪ್ರಧಾನಮಂತ್ರಿ, ಮುಖ್ಯಮಂತ್ರಿ  ತಮ್ಮ ಪಕ್ಷಕ್ಕಾಗಿ ಸಭೆ ಮಾಡಿಕೊಂಡು ತಿರುಗುತ್ತಿದ್ದಾರೆ. ಆದರೆ ನಾವು ರಾಜ್ಯದ ಹಿತರಕ್ಷಿಸಲು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಅವರು ಬಿಜೆಪಿಗೆ ಟಾಂಗ್ ನೀಡಿದರು.

ಸ್ವಂತಕ್ಕೆ ಅವರು ಮಾಡುವುದು ನ್ಯಾಯ ಆದರೆ  ರಾಜ್ಯದ ಜನರಿಗಾಗಿ ನಾವು ಮಾಡುವುದು ಅನ್ಯಾಯವೇ? ಎಂದು ಇದೇ ಸಂದರ್ಭದಲ್ಲಿ ಜಿ. ಪರಮೇಶ್ವರ್ ಪ್ರಶ್ನಿಸಿದರು.

Share