Published
8 months agoon
ಬೆಂಗಳೂರು: ಜನೆವರಿ 04 (ಯು.ಎನ್.ಐ.) ಮೇಕೆದಾಟು ಯೋಜನೆಯ ವಿಷಯದಲ್ಲಿ ಕಾಂಗ್ರೆಸ್ನವರು ಮಾಡಿದ ವಿಳಂಬ ದ್ರೋಹದ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕುತ್ತೇನೆ ಎಂದು ಹೇಳಿದ ತಕ್ಷಣ ಕಾಂಗ್ರೆಸ್ನ ನಾಯಕರೆಲ್ಲಾ ಕಾವೇರಿಯಿಂದ ಭೀಮಾವರೆಗೆ ಮೈಮೇಲೆ ದೆವ್ವ ಬಂದಂತೆ ಕುಣಿಯುತ್ತಿದ್ದಾರೆ. ಮತ್ತು ತನ್ನ ಬುಟ್ಟಿಯಲ್ಲಿ ಹಾವು ಇದೆ ಎಂದು ಹೇಳಿದ್ದೇನೆಯೇ ಹೊರತು, ಯಾವ ಹಾವು ಎಂದು ಹೇಳಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಅವರಿಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಮೇಕೆದಾಟು ಯೋಜನೆಯ ವಿಳಂಬಕ್ಕೆ ಕಾರಣವಾದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಅವರು ಪುನರುಚ್ಚರಿಸಿದರು.
ಅಧಿಕಾರದಲ್ಲಿದ್ದಾಗ ಆಲಸ್ಯತನ ವಿರೋಧ ಪಕ್ಷದಲ್ಲಿದ್ದಾಗ ಆಂದೋಲನ ಮಾಡುವುದು ಕಾಂಗ್ರೆಸ್ನವರ ಜಾಯಮಾನ ಎಂದು ಸಚಿವರು ಟೀಕಿಸಿದರು. ಸ್ಪೋಟಕ ಮಾಹಿತಿಯನ್ನು ಕಾಂಗ್ರೆಸ್ನವರ ಪಾದಯಾತ್ರೆಯ ಮುನ್ನವೇ ಬಿಡುಗಡೆ ಮಾಡುವುದಾಗಿ ಸಚಿವರು ತಿಳಿಸಿದರು.
ತಮಿಳುನಾಡಿನ ಬಿ.ಜೆ.ಪಿ ಅಧ್ಯಕ್ಷ ಅಣ್ಣಾಮಲೈ ರವರಿಂದ ಮೇಕೆದಾಟು ಯೋಜನೆಗೆ ಅಡೆತಡೆ ಉಂಟಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರವರು ಹೇಳಿದ್ದಾರೆ. ಡಿಎಂಕೆ ಜೊತೆಗೂಡಿ ಸರ್ಕಾರ ರಚಿಸಿರುವ ತಮಿಳುನಾಡು ಕಾಂಗ್ರೆಸಿಗರಿಗೆ ಸಿದ್ಧರಾಮಯ್ಯನವರು ಬುದ್ದಿ ಹೇಳಲಿ ಎಂದು ಹೇಳಿದರು.
40% ಕಮೀಷನ್ ವಿಚಾರ: ರಾಜ್ಯದಲ್ಲಿ 42000 ನೊಂದಾಯಿತ ಗುತ್ತಿಗೆದಾರರಿದ್ದು, ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಸದಸ್ಯತ್ವ ಕೇವಲ 800 ಮಾತ್ರ. 40% ಕಮೀಷನ್ 20% ಟ್ಯಾಕ್ಸ್ ಕೊಟ್ಟು ಕೇವಲ 40% ನಲ್ಲಿ ಕೆಲಸ ಮಾಡಿದ ಗುತ್ತಿಗೆದಾರರ ಯಾರಿರಬಹುದು? ಎಂದು ವ್ಯಂಗ್ಯವಾಡಿದರು. ಈಗ 40% ಆಗಿದೆ ಎಂದು ಹೇಳಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಈ ಹಿಂದೆಯೂ ಕಮೀಷನ್ ದಂಧೆ ಇತ್ತು ಎಂದರೆ ಎಷ್ಟು ಇತ್ತು ಎಂದು ಜನತೆಗೆ ಹೇಳಲಿ ಎಂದು ಚುಚ್ಚಿದರು.
ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಕೈ ಬಿಡುವುದಿಲ್ಲವೆಂಬುದಕ್ಕೆ ನಾನೇ ಉದಾಹರಣೆ: ಬಿಎಸ್ ವೈ
ನಿತಿನ್ ಗಡ್ಕರಿ ಔಟ್, ಬಿಎಸ್ ವೈ ಇನ್
ಸೇವೆ ಸಲ್ಲಿಸುವ ಗೌರವಕ್ಕೆ ಆಭಾರಿ: ಮಾಜಿ ಸಿಎಂ ಬಿಎಸ್ ವೈ
ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಮನವಿ ಬಂದಿದೆ. ಆದ್ರೆ…: ಸಚಿವ ಆರ್. ಅಶೋಕ್
ಬಿಜೆಪಿಯ ಅತ್ಯುನ್ನತ ಮಂಡಳಿಯಲ್ಲಿ ಮಾಜಿ ಸಿಎಂ ಬಿಎಸ್ ವೈಗೆ ಸ್ಥಾನ
ಎಲ್ಲವೂ ಸರಿಯಿದೆ, ಏನೂ ತೊಂದರೆಯಿಲ್ಲ: ಸಿಎಂ ಬೊಮ್ಮಾಯಿ