Connect with us


      




ರಾಜಕೀಯ

ಮೇಕೆದಾಟು; ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮಾಡಿದ್ದೇನು ? ಕಾರಜೋಳ ವಿವರ

Kumara Raitha

Published

on

ಬೆಂಗಳೂರು: ಜನೆವರಿ 06 (ಯು.ಎನ್.ಐ.) ಕಾಂಗ್ರೆಸ್ ಮಾಡುವ ಯಾತ್ರೆ ಮಾಡಲಿ, ಬಿಜೆಪಿ ಸರ್ಕಾರ ಬಂದ ನಂತರ ಮೇಕೆದಾಟು ಯೋಜನೆ ಜಾರಿಗೊಳಿಸಲು ಏನೇನು ಪ್ರಯತ್ನಗಳಾಗಿವೆ ಅವುಗಳ ಬಗ್ಗೆ ವಿವರ ನೀಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಅವರಿಂದು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಕಾಂಗ್ರೆಸ್ ಪಕ್ಷದಿಂದಲೇ ಮೇಕೆದಾಟು ಯೋಜನೆ ವಿಳಂಬವಾಗಿದೆ ಎಂದು ಪ್ರತಿಪಾದಿಸಿದ ಕಾರಜೋಳ ಅದಕ್ಕೆ ಸಂಬಂಧಿಸಿ ಉತ್ತರ ನೀಡುತ್ತಾ ಪ್ರಶ್ನೆಗಳ ಸುರಿಮಳೆ ಸುರಿಸಿದರು. ಫೋರ್ ಜಿ ಎಕ್ಸೆಂಪ್ಶನ್ ಕೊಡೋದಕ್ಕೆ ಐದು ವರ್ಷ ಬೇಕಾ? ದಾಖಲೆ ಇಲ್ಲಿಯೇ ಇದೆ. ಟೆಂಡರ್ ಕರೆಯೋದಕ್ಕೆ ಐದು ವರ್ಷ ಬೇಕಾ? ನೀವು (ಕಾಂಗ್ರೆಸ್) ಡಿಪಿಆರ್ ರೆಡಿ ಮಾಡೋದಕ್ಕೆ ಐದು ವರ್ಷ ತೆಗೆದುಕೊಂಡಿದ್ದೀರಿ.  ಡಿಪಿಆರ್ ರೆಡಿ ಮಾಡೋದಕ್ಕೆ ಐದು ವರ್ಷ ತೆಗೆದುಕೊಂಡ್ರಲ್ಲ ಯಾಕೆ? ಡಿಪಿಆರ್ ಮಾಡೋದಕ್ಕೆ ಕುಮಾರಸ್ವಾಮಿಯವರೇ ಬರಬೇಕಾಯ್ತಲ್ಲ. ಈಗ ರಾಜಕೀಯ ಗಿಮಿಕ್ ಮಾಡೋದು ಬಿಟ್ಟು ಯಾಕೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕಾಂಗ್ರೆಸ್ ವಿಳಂಬ ಮಾಡಿತ್ತು ಅಂತ ಉತ್ತರ ಕೊಡಲಿ ಎಂದು ಆಕ್ರೋಶದಿಂದ ನುಡಿದರು.

ಐದು ವರ್ಷ ಏನೂ ಮಾಡದೇ ಈಗ ಕಾವೇರಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ.  ೫-೧೧-೨೦೧೩ ರಂದು ೪ಜಿ ಎಕ್ಸೆಂಪ್ಶನ್ ಕೊಡಬೇಕುಅಂತ ಕಾವೇರಿ ನೀರಾವರಿ ನಿಗಮದಿಂದ ಸರ್ಕಾರಕ್ಕೆ ಪತ್ರ ಬರಿತಾರೆ. ೭-೪-೨೦೧೪ ಕ್ಕೆ ಸರ್ಕಾರ ಆ ಪ್ರಸ್ತಾವನೆ ತಿರಸ್ಕರಿಸಿ ಟೆಂಡರ್ ಕರಿಬೇಕು ಅಂತ ಹೇಳತ್ತೆ ೨೦೧೯ ರ ಜನವರಿಯಲ್ಲಿ ೪ಜಿ ಎಕ್ಸೆಂಪ್ಶನ್ ಕೊಡಿ ಅಂತ ಮತ್ತೆ ಕೇಳ್ತಾರೆ ೨೦೧೯ ಫೇಬ್ರವರಿ ಯಲ್ಲಿ ಫೋರ್ ಜಿ ಎಕ್ಸೆಂಪ್ಶನ್ ಗೆ ಅನುಮತಿ ಕೊಡ್ತಾರೆ ಎಂದು ವಿವರಿಸಿದರು.

ಇದು ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆಗಿದ್ದು,    ಆಗ ಕುಮಾರಸ್ವಾಮಿ ಸಿಎಂ, ಡಿಕೆಶಿವಕುಮಾರ್ ಜಲಸಂಪನ್ಮೂಲ ಸಚಿವರು. ೨೦೧೩ ರಿಂದ ೨೦೧೮ ರವರೆಗೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಕೆಲಸ ಮಾಡಲಿಲ್ಲ ೨೦೧೩ ರಿಂದ ೧೮ ರವರೆಗೆ ಕಾಂಗ್ರೆಸ್ ಸರ್ಕಾರ ಇತ್ತು, ಅವರೇ ವಿಳಂಬದ ಜವಾಬ್ದಾರಿ ಹೊರಬೇಕು ಎಂದು ಪ್ರತಿಪಾದಿಸಿದರು.

Share