Connect with us


      
ರಾಜಕೀಯ

ಸರ್ಕಾರ ಏನು ಮಾಡಿದರೂ ಪಾದಯಾತ್ರೆ ನಿಲ್ಲಲ್ಲ: ಡಿಕೆಶಿ

Kumara Raitha

Published

on

ಬೆಂಗಳೂರು: ಜನೆವರಿ 04 (ಯು.ಎನ್.ಐ.) ಬೆಳಗ್ಗೆಯಿಂದ ಪಾದಯಾತ್ರೆ ಕುರಿತು ಚರ್ಚೆ ಮಾಡಿದ್ದೇವೆ. ೧೦೦ ವೈದ್ಯರು,೧೦ ಆ್ಯಂಬುಲೆನ್ಸ್ ತಯಾರಿಗಿದೆ. ಸಂಪೂರ್ಣ ನಿಯಮ ಪಾಲನೆಗೆ  ಮುಂದಾಗಿದ್ದೇವೆ ರಾಜ್ಯದ ಎಲ್ಲ ಭಾಗಗಳ ಜನ  ಭಾಗವಹಿಸುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಎರಡನೇ ದಿನ ಮೈಸೂರು ಜಿಲ್ಕೆಯವರು ಬರ್ತಾರೆ. ೫ನೇ ದಿನ .ಮಂಡ್ಯ,ಹಾಸನದವರು ಬರ್ತಾರೆ ನಂತರ ತುಮಕೂರಿನವರು ಬರ್ತಾರೆ. ಪಾದಯಾತ್ರೆಯಲ್ಲಿ ಭಾಗಿಯಾಗ್ತಾರೆ. ಜನೆವರಿ ೧೯ ರವರೆಗೆ ಈ ಪಾದಯಾತ್ರೆ ನಡೆಯಲಿದೆ. ೧೮೦೦ ಜನ ಪಾದಯಾತ್ರೆಗೆ ನೊಂದಣಿ ಮಾಡಿದ್ದಾರೆ. ಬಹಿರಂಗ ಸಭೆ ಮಾಡಬಹುದು. ಜನಾಶೀರ್ವಾದ ಯಾತ್ರೆ ಮಾಡಬಹುದು. ನಾವು ನೀರಿಗಾಗಿ ಪಾದಯಾತ್ರೆ ಮಾಡ್ತೇವೆ. ಏನೇ ಮಾಡಿದ್ರೂ ಪಾದಯಾತ್ರೆ ನಿಲ್ಲಿಸಲ್ಲ. ಅವರು ಅರೆಸ್ಟ್ ಬೇಕಾದ್ರೂ ಮಾಡಲಿ. ಕೇಸ್ ಆದ್ರೂ ದಾಖಲಿಸಲಿ. ನಮ್ಮ ಪಾದಯಾತ್ರೆ ನಡೆದೇ ನಡೆಯುತ್ತೆ ಎಂದು ವಿವರಿಸಿದರು.

ಸಿಎಂ ಅವರು ಒಂದು ಕಾರ್ಯಕ್ರಮದಲ್ಲಿ ಸಿಕ್ಕಿದ್ದರು. ಆಸ್ಪತ್ರೆಗಳಿಗೆ ನಾನೇ ಹೇಳಿದ್ದೇನೆ ಅಂತ ಹೇಳಿದ್ದಾರೆ. ಪಾಪ ಅವರು ಯಾಕೆ ಹಾಗೆ ಹೇಳ್ತಾರೆ ಎಂದರು.

ಕುತ್ತಿಗೆ ಕೂಯ್ದು, ಕುತಂತ್ರ ರಾಜಕಾರಣ ಮಾಡ್ತಾರೆಂಬ ದಚಿವ  ಅಶ್ವಥ್ ನಾರಾಯಣ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅದರ ಬಗ್ಗೆ ಇನ್ನೊಮ್ಮೆ ಮಾತನಾಡ್ತೇನೆ. ಎಂತೆಂತವರ ಜೊತೆಗೋ ರಾಜಕಾರಣ ಮಾಡಿದ್ದೇನೆ. ಬೇರೆ ಟೈಂನಲ್ಲಿ ಉತ್ತರ ಕೊಡೋಣ/ ಬಹಳ ಸಂತೋಷ. ಅವರು ನಮ್ ಬ್ರದರ್ ಅಲ್ವಾ , he is Also My Brother ಅಶ್ವತ್ ನಾರಾಯಣ್ ಅಣ್ಣಾ ಎಂದು ವ್ಯಂಗ್ಯವಾಡಿದರು.

Share