Connect with us


      
ದೇಶ

ಪರಿಸರವಾದಿಗಳ ಬಗ್ಗೆ ಗೌರವವಿದೆ ಆದರೆ ಮೇಕೆದಾಟು ಯೋಜನೆ ಅಗತ್ಯ: ಡಿಕೆಶಿ

Published

on

ಬೆಂಗಳೂರು:ಜನೆವರಿ 15 (ಯು.ಎನ್.ಐ.) ಪರಿಸರ ಹೋರಾಟಗಾರರಾದ ಮೇಧಾ ಪಾಟ್ಕರ್‌ ಬಗ್ಗೆ ಗೌರವವಿದೆ. ಅವರು ತಮ್ಮದೇ ಆದ ಚಿಂತನೆಗಳ ಮೇಲೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. ನಮ್ಮ ಹೋರಾಟ ವ್ಯಕ್ತಿಗತ ಚಿಂತನೆಯಲ್ಲ,  ಜನರ ಚಿಂತನೆ. ನಮ್ಮದು ಜನರ ಬಯಕೆ, ಬದುಕಿನ ಹೋರಾಟ. ನೀರು ನಮಗೆ ಜೀವ, ಜೀವ ಇದ್ದರಷ್ಟೇ ಜೀವನ. ಅವರ ಅಭಿಪ್ರಾಯ ಅವರದ್ದು. ಸರ್ಕಾರ ಇಂತಹ ಯೋಜನೆಗೆ ಪರಿಸರ ಇಲಾಖೆ ಅನುಮತಿಯಂತಹ ಕಾನೂನು ಮಾಡಿರುವುದು ಇವರಿಗಾಗಿಯೇ ಎಂದು ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟರು.

ಅವರಿಂದು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ಮೇಕೆದಾಟು ಯೋಜನೆಗೆ ಮೇಧಾ ಪಾಟ್ಕರ್ ಹಾಗೂ ಇತರರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದರು. ನಾವು ಮೇಧಾ ಪಾಟ್ಕರ್ ಅವರ ಭಾವನೆ ಗೌರವಿಸುತ್ತೇವೆ. ಯೋಜನೆಗೆ ನನ್ನದೂ ಸೇರಿದಂತೆ ನಮ್ಮ ಕ್ಷೇತ್ರದ ಜನರ ಆಸ್ತಿಗಳು ಯೋಜನೆಗೆ ಹೋಗುತ್ತಿದ್ದು, ವಿರೋಧ ಮಾಡುವುದಾದರೆ ನಾವುಗಳು ಮಾಡಬೇಕು. ಈ ಯೋಜನೆಯಿಂದ ನಮ್ಮ ತಾಲೂಕಿಗೆ ಬಹಳ ನಷ್ಟ ಉಂಟಾಗಲಿದೆ. ಬೆಂಗಳೂರಿಗೆ ನೀರು ತರಬೇಕಾದರೆ ನಮ್ಮ ಜಮೀನು ಹೋಗುತ್ತವೆ. ರೈತರ ಜಮೀನಿಗೆ ಉತ್ತಮ ಬೆಲೆ ನೀಡುವಂತೆ ಹೋರಾಟ ಮಾಡುತ್ತೇವೆ. ಮಳವಳ್ಳಿ ಮೂಲಕವಾಗಿ ಬೆಂಗಳೂರಿಗೆ ನೀರು ತಂದಿದ್ದಾರಲ್ಲಾ, ಅಲ್ಲೆಲ್ಲ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದ್ದಾರೆ ಗೊತ್ತಾ? ಎಕರೆಗೆ ಕೇವಲ 30 ಸಾವಿರ,  50 ಸಾವಿರ, 1 ಲಕ್ಷದಂತೆ ಪರಿಹಾರ ಕೊಟ್ಟಿದ್ದಾರೆ. ಅವರು ಹಿರಿಯ ಮಹಿಳೆ, ಅವರಿಗೆ ಉತ್ತರ ನೀಡಲು ಬೊಮ್ಮಾಯಿ ಅವರು ಸೂಕ್ತ ವ್ಯಕ್ತಿ’ ಎಂದು ಉತ್ತರಿಸಿದರು

ಕೆಲವರು ಒಂದು ಎಕರೆ ಮುಳುಗಡೆಯಾದರೆ ಎರಡು ಎಕರೆ ನೀಡಬೇಕು ಎಂದು ಹೇಳುತ್ತಾರೆ. ರಸ್ತೆ ಅಗಲ ಮಾಡಿದರೆ ಆಸ್ತಿ ಹೋಗುತ್ತದೆ ಎಂದು ಸುಮ್ಮನಿದ್ದರೆ ರಸ್ತೆ ಆಗುವುದಿಲ್ಲ. ರಾಜೀವ್ ಗಾಂಧಿ ಅವರು ಯೋಜನೆಗಳಿಗೆ ಆಸ್ತಿ ಸ್ವಾಧೀನ ಕಾನೂನು ತಂದು ಜನರಿಗೆ ಉತ್ತಮ ಪರಿಹಾರ ಸಿಗುವಂತೆ ಮಾಡಿದರು. ಕೆಲವರು ಸರ್ಕಾರಿ ಅಧಿಕಾರಿಗಳನ್ನು ಜೊತೆ ಮಾಡಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಂತರ ಹಣ ಪರಿಹಾರಕ್ಕೆ ಆಗ್ರಹಿಸುತ್ತಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಮೇಕೆದಾಟು ಯೋಜನೆಯಿಂದ ಎಲ್ಲರಿಗೂ ಅನುಕೂಲ. ನಮ್ಮ ಸರ್ಕಾರ ಇದ್ದಾಗ ಕಾವೇರಿ ನ್ಯಾಯಾಧಿಕರಣ ತೀರ್ಪು ಹೊರ ಬಂದಿತ್ತು. ಹೀಗಾಗಿ ಈ ಯೋಜನೆಗೆ ಜೀವ ಬಂದಿತು. ತೀರ್ಪು ಬಂದ ನಂತರ ಡಿಪಿಆರ್ ಮಾಡಿದ್ದೆವು. ನಮ್ಮ ಸರ್ಕಾರ ಇನ್ನೂ ಕೆಲ ತಿಂಗಳುಗಳ ಕಾಲ ಇದಿದ್ದರೆ ಈ ಯೋಜನೆ ಒಂದು ಹಂತಕ್ಕೆ ಬರುತ್ತಿತ್ತು. ಬಿಜೆಪಿ ಸರ್ಕಾರ ಈ ಯೋಜನೆ ಮುಂದಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಭಾವಿಸಿದ್ದೆ. ಆದರೆ ಹಾಗೆ ಆಗಲಿಲ್ಲ ಎಂದು ಹೇಳಿದರು.

ಅಲ್ಲಿದ್ದ ಮಂತ್ರಿಗಳು, ಇಲ್ಲಿದ್ದ ಮುಖ್ಯಮಂತ್ರಿಗಳು ಅವರವರ ಕೆಲಸದಲ್ಲೇ ಮುಳುಗಿದ್ದರು. ಹೊಸ ಮುಖ್ಯಮಂತ್ರಿ ಬಂದಿದ್ದಾರೆ, ಅವರಿಗೆ ನೀರಾವರಿ ಇಲಾಖೆ ನಿರ್ವಹಿಸಿ ಗೊತ್ತಿದೆ. ನಾವು ಸ್ವಲ್ಪ ದಿನ ಕಾದು ನಂತರ ಹೋರಾಟ ಆರಂಭಿಸಿದ್ದೇವೆ ಎಂದು ಹೇಳಿದರು.

ಬೆಂಗಳೂರಿನ ಕೆರೆ ಕಟ್ಟೆಗಳ ಜೀರ್ಣೋದ್ಧಾರ ಮಾಡಿದರೆ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಬಹುದು ಎಂಬ ಹೇಳಿಕೆಗೆ, ‘ಸರ್ಕಾರ ಈ ವಿಚಾರವಾಗಿ ಸಮಿತಿ ಮಾಡಲಿ. ಎಲ್ಲಿ ಕಟ್ಟುನಿಟ್ಟಿನ ಪಾಲನೆ ಆಗುತ್ತಿದೆ. ಎಲ್ಲರೂ ಮಳೆ ನೀರಿನ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು ಎಂಬ ನಿಯಮವಿದೆ. ಎಲ್ಲರೂ ಅದನ್ನು ಎಲ್ಲಿ ಮಾಡುತ್ತಿದ್ದಾರೆ?’ ಎಂದರು.

ಪಾದಯಾತ್ರೆ ಮತ್ತೆ ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ, ‘ಪರಿಸ್ಥಿತಿ ಸುಧಾರಿಸಲಿ, ಸರ್ಕಾರ 10 ಜನರನ್ನು ಬಿಟ್ಟರೆ 10 ಜನ, ನೂರು ಜನರನ್ನು ಬಿಟ್ಟರೆ ನೂರು ಜನ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆ ಮಾಡುವ ಸಂಕಲ್ಪ ಯಾವಾಗಲೋ ಆಗಿದೆ’ ಎಂದರು.

ಮುಖ್ಯಮಂತ್ರಿಗಳು ರಾಮನಗರ ಕಾರ್ಯಕ್ರಮಕ್ಕೆ ಬಂದ ದಿನವೇ ಆದೇಶ ಬಂದಿದ್ದು, ಅದರ ಮೇಲೆ ಕೇಸ್ ದಾಖಲಾಗಬೇಕು ಅಲ್ಲವೇ?ವಿಧಾನಸೌಧ ಕಾರ್ಯಕ್ರಮದ ವಿರುದ್ಧ ಕೇಸ್ ಹಾಕಲಿ. ಪೊಲೀಸ್ ಕಮಿಷನರ್ ಅವರು ತಮ್ಮ ವೃತ್ತಿ, ಸ್ಥಾನ ಹಾಗೂ ಸಮವಸ್ತ್ರಕ್ಕೆ ಗೌರವ ನೀಡುವುದಾದರೆ ಅಲ್ಲಿಗೆ ಬಂದಿದ್ದ ಎಲ್ಲರ ಮೇಲೂ ಕೇಸ್ ದಾಖಲಿಸಲಿ. ರಾಮನಗರ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಇತ್ತಾ? ಜನಾಶೀರ್ವಾದ ಯಾತ್ರೆ ವಿಚಾರದಲ್ಲಿ ಮಂತ್ರಿಗಳ ವಿರುದ್ಧ ಯಾಕೆ ಕ್ರಮ ಇಲ್ಲ?’ ಎಂದು ಮರುಪ್ರಶ್ನಿಸಿದರು.

ಪಾದಯಾತ್ರೆ ಬಾವುಟ ಕಟ್ಟಲು ತಮಿಳುನಾಡಿನ ಕಾರ್ಮಿಕರು ಬಂದಿದ್ದಾರೆ ಎಂಬ ಕುಮಾರಸ್ವಾಮಿಯವರ ಟೀಕೆಗೆ, ‘ತಮಿಳುನಾಡಿನ ಜನ ನಮ್ಮ ಸಹೋದರರು, ನಾವು ಭಾರತದಲ್ಲಿ ವಾಸಿಸುತ್ತಿದ್ದೇವೆ. ಬೆಂಗಳೂರಿನ ಅನೇಕ ಜನ ಹೊಸೂರಿನಲ್ಲಿ ಕೆಲಸ ಮಾಡಿ ಬರುತ್ತಿದ್ದಾರೆ. ತಮಿಳುನಾಡು ಜನರಿಗೆ ನಾವು ಶಿಕ್ಷಣ ನೀಡುತ್ತಿದ್ದೇವೆ. ಗಡಿಯಲ್ಲಿ ನಾವು ಕಿತ್ತಾಡಬೇಕಾ? ನಮ್ಮ ಜಮೀನು ಅವರ ಜಮೀನು ಅಕ್ಕಪಕ್ಕ ಇದೆ. ಅವರು ಬಂದು ಇಲ್ಲಿ ಕೆಲಸ ಮಾಡಬಾರದೆ? ಇವರು ಹೊರ ರಾಜ್ಯದವರನ್ನು ಕೆಲಸಕ್ಕೆ ಇಟ್ಟುಕೊಂಡಿಲ್ಲವೇ? ಒಂದೊಂದು ರಾಜ್ಯದಲ್ಲೂ ಒಂದೊಂದು ಕೌಶಲ್ಯದ ಕಾರ್ಮಿಕರಿದ್ದಾರೆ. ಬಿಹಾರದಿಂದ ಉತ್ತಮ ಬಡಗಿ ಬರುತ್ತಾರೆ. ಮೈಸೂರು ಭಾಗದಲ್ಲಿ ಇನ್ನು ಕಾರ್ಮಿಕರಿದ್ದಾರೆ. ಮುಂಚೆ ತಮಿಳುನಾಡಿನಿಂದ ಕಾರ್ಮಿಕರು ಬರುತ್ತಿದ್ದರು, ಈಗ ಉತ್ತರ ಭಾರತದ ರಾಜ್ಯಗಳಿಂದ ಬರುತ್ತಿದ್ದಾರೆ. ಮುಂಚೆ ತಮಿಳುನಾಡು, ಆಂಧ್ರಪ್ರದೇಶಗಳಿಂದ ಭಟ್ಟರು ಬರುತ್ತಿದ್ದರು. ಈಗ ಅವರು ಎಲ್ಲಿದ್ದಾರೆ? ಅವರು ಸುಮ್ಮನೆ ತಮ್ಮ ಚಪಲಕ್ಕೆ ಮಾತನಾಡುತ್ತಾರೆ, ಮಾತನಾಡಲಿ ಬಿಡಿ’ ಎಂದು ವ್ಯಂಗ್ಯವಾಡಿದರು.

ರೇಣುಕಾಚಾರ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂಬ ಪ್ರಶ್ನೆಗೆ, ‘ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾವು ಸರ್ಕಾರದ ಜತೆಗೆ ಅಧಿಕಾರಿಗಳ ವಿರುದ್ಧವೂ ಹೋರಾಡಬೇಕಾಗುತ್ತದೆ’ ಎಂದರು.

ದೇಶ

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

Published

on

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ ಮಾಡಿಕೊಡುವಂತೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ನಂತರ ಫೆಬ್ರವರಿ 14ರಂದು ನಿಗದಿಯಾಗಿದ್ದ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ “ಪಂಜಾಬ್‌ನ ಜನಸಂಖ್ಯೆಯ ಶೇಕಡಾ 32ರಷ್ಟು ಪರಿಶಿಷ್ಟ ಜಾತಿಗಳ ಸಮುದಾಯದ ಪ್ರತಿನಿಧಿಗಳು ತಮ್ಮನ್ನು ಭೇಟಿ ಮಾಡಿದ್ದರು. ಗುರು ರವಿದಾಸ್ ಅವರ ಜನ್ಮದಿನದ ಅಂಗವಾಗಿ ಫೆಬ್ರವರಿ 10ರಿಂದ 16ರವರೆಗೆ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡುತ್ತೇವೆ. ಹೀಗಾಗಿ ತಮಗೆ ವೋಟ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮನವಿ ಮಾಡಿದ್ದರು. ಹೀಗಾಗಿ ಚುನಾವಣಾ ಆಯೋಗ ಪೂರ್ವ ನಿಗದಿ ಮಾಡಿದ್ದ ಫೆಬ್ರವರಿ 14ರ ಚುನಾವಣೆಯನ್ನು 6 ದಿನಗಳ ಕಾಲ ಮುಂದೂಡಬೇಕಂದು” ಸಿಎಂ ಚನ್ನಿ ಮನವಿ ಮಾಡಿದ್ದರು.
ಪಂಜಾಬ್ ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ಇಂದು ಚುನಾವಣಾ ಆಯೋಗ ಸಭೆ ನಡೆಸಿತ್ತು. ಸಭೆ ಬಳಿಕ ಮಾಹಿತಿ ನೀಡಿದ ಚುನಾವಣಾ ಅಧಿಕಾರಿಗಳು, “ಪಂಜಾಬ್ ಸರ್ಕಾರ ಮತ್ತು ಇತರ ಸಂಘಟನೆಗಳು ಚುನಾವಣೆಯನ್ನು ಮುಂದೂಡುವಂತೆ ಕೋರಿದ್ದವು.” ಗುರು ರವಿದಾಸ್ ಜನ್ಮದಿನದ ಅಂಗವಾಗಿ ಹೆಚ್ಚಿನ ಭಕ್ತರು ವಾರಣಾಸಿಗೆ ಭೇಟಿ ನೀಡುತ್ತಾರೆ. ಫೆಬ್ರವರಿ 14ರಂದು ಮತದಾನದ ದಿನವನ್ನು ಇಟ್ಟುಕೊಳ್ಳುವುದರಿಂದ ಹೆಚ್ಚಿನ ಸಂಖ್ಯೆಯ ಮತದಾರರು ಮತದಾನದಿಂದ ವಂಚಿತರಾಗುತ್ತಾರೆ” ಎಂದು ಗಮನಕ್ಕೆ ತಂದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿತು.
ರಾಜಕೀಯ ಪಕ್ಷಗಳು ಹಾಗೂ ಪಂಜಾಬ್ ಸರ್ಕಾರದ ಮನವಿ ಮೇರೆಗೆ ಚುನಾವಣೆ ದಿನಾಂಕವನ್ನು ಫೆಬ್ರವರಿ 14ರ ಬದಲಾಗಿ ಫೆಬ್ರವರಿ 20ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

Continue Reading

ದೇಶ

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

Published

on

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿವಿಮಾತು ಹೇಳಿದರು.

ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳು NCR (ರಾಷ್ಟ್ರೀಯ ರಾಜಧಾನಿ ಪ್ರದೇಶ) ಮೇಲೆ ಪರಿಣಾಮ ಬೀರಿದೆ ಮತ್ತು ಗುರುಗ್ರಾಮ್, ಫರಿದಾಬಾದ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ” ಎಂದು ಹೇಳಿದ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ನಾನು ಕೊರೋನಾ ಸಂಕಷ್ಟದ ಪರಿಸ್ಥಿತಿಯನ್ನು ತೆಗಳುತ್ತಾ ಕೂರುವುದಿಲ್ಲ. ಆಪಾದನೆ ರೋಗವನ್ನು ತೊಲಗಿಸುವುದಿಲ್ಲ. ದೇಶದಲ್ಲಿ ಕೊರೋನಾ ವೈರಸ್ ಎಲ್ಲಿದ್ದರೂ ನಿವಾರಿಸಲು ಪ್ರಯತ್ನಿಸಿಸಬೇಕು ಎಂದು ಹೇಳಿದರು.

ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಮತ್ತು ಸೋಮವಾರ ಸುಮಾರು 12,000-13,000 ಹೊಸ ಪ್ರಕರಣಗಳು ದಾಖಲಾಗಿವೆ. ಭಾನುವಾರದಂದು 18,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.

ಪಂಜಾಬ್ ಮುಕ್ಯಮಂತ್ರಿ ಅಭ್ಯರ್ಥಿ ಘೋಷಣೆ ನಾಳೆ

ಅರವಿಂದ್ ಕೇಜ್ರಿವಾಲ್ ಅವರು ಪಂಜಾಬಿನ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ನಾಳೆ (ಮಂಗಳವಾರ ಜನೆವರಿ ೧೮) ಘೋಷಿಸಲಾಗುವುದು ಎಂದು ತಿಳಿಸಿದರು.

Continue Reading

ದೇಶ

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

Published

on

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು ನಕ್ಸಲರನ್ನು ಜಾರ್ಖಂಡ್ ಖುಂಟಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಭಾನುವಾರ ರಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ರಂಗೋಡಿ ಗ್ರಾಮದಲ್ಲಿ ಮೂವರನ್ನು ಬಂಧಿಸಿದ್ದಾರೆ.

ವಿಶ್ರಮ್ ಕೊಂಗಾಡಿ ಮತ್ತು ಕುಲೇನ್ ಕೊಂಗಾಡಿ ಎಂದು ಗುರುತಿಸಲಾಗಿದೆ. ಇವರು ಕ್ರಮವಾಗಿ ಏಳು ಮತ್ತು ಐದು ವಿಭಿನ್ನ ಕ್ರಿಮಿನಲ್ ಪ್ರಕರಣಗಳಲ್ಲಿ ಇವರ ಹೆಸರು ಕೇಳಿಬಂದಿದೆ ಎಂದು ಪೊಲೀಸ್ ಅಧೀಕ್ಷಕ ಅಶುತೋಷ್ ಶೇಖರ್ ಹೇಳಿದ್ದಾರೆ.

ಬಂಧಿತರ ಬಳಿ ಇದ್ದ ಹಲವಾರು ಕಾಟ್ರಿಡ್ಜ್ ಗಳು, ಪಿಎಲ್ ‌ಎಫ್‌ಐ ಕರಪತ್ರಗಳು ಮತ್ತು ದೇಣಿಗೆ ರಶೀದಿಗಳು ಮತ್ತು ಮೊಬೈಲ್ ಫೋನ್‌ಗಳು ಮತ್ತು ಮೋಟಾರ್‌ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

Continue Reading
Advertisement
ಕರ್ನಾಟಕ1 min ago

ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದ ಒಮೈಕ್ರಾನ್!

ಬೆಂಗಳೂರು: ಜನೆವರಿ 17 (ಯು.ಎನ್.ಐ) ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ ಬರೋಬ್ಬರಿ 287 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ತೀವ್ರ ನಿಗಾದ ಮಧ್ಯೆಯೇ ಒಮೈಕ್ರಾನ್ ಪ್ರಕರಣಗಳು...

ದೇಶ14 mins ago

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ...

ದೇಶ16 mins ago

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು...

ಸಿನೆಮಾ33 mins ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ49 mins ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ53 mins ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ1 hour ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು1 hour ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ2 hours ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ದೇಶ2 hours ago

ಐಐಟಿ ಬಾಂಬೆಯ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಜನೆವರಿ 17  (ಯು.ಎನ್.ಐ.) ಐಐಟಿ ಬಾಂಬೆಯ ವಿದ್ಯಾರ್ಥಿ ಸೋಮವಾರ ಮುಂಜಾನೆ ಇಲ್ಲಿನ ಪೊವೈ ಕ್ಯಾಂಪಸ್ ನಲ್ಲಿರುವ ತನ್ನ ಹಾಸ್ಟೆಲಿನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ...

ಟ್ರೆಂಡಿಂಗ್

Share