Connect with us


      
ಸಿನೆಮಾ

ಸಂಚಾರಿ ವಿಜಯ್ ಅಭಿನಯದ ಮೇಲೊಬ್ಬ ಮಾಯಾವಿ ಸಿನಿಮಾ ಟ್ರೇಲರ್ ಬಿಡುಗಡೆ

Vanitha Jain

Published

on

ಬೆಂಗಳೂರು: ಏಪ್ರಿಲ್ 18 (ಯು.ಎನ್.ಐ.) ದಿವಂಗತ ನಟ ಸಂಚಾರಿ ವಿಜಯ್ ಅಭಿನಯದ ಮೇಲೊಬ್ಬ ಮಾಯಾವಿ ಸಿನಿಮಾದ ಟ್ರೇಲರ್ ಎಆರ್ ಸಿ ಮ್ಯೂಸಿಕ್ ಕನ್ನಡ ಯೂ ಟ್ಯೂಬ್ ಚಾನಲ್ ನಲ್ಲಿ ಇಂದು ಬಿಡುಗಡೆಯಾಗಿದೆ.

ಮೇಲೊಬ್ಬ ಮಾಯಾವಿ ಸಿನಿಮಾ ನೈಜ ಘಟನಾಧಾರಿತ ಸಿನಿಮಾವಾಗಿದ್ದು, ಕೆಜಿಫ್ ಗಿಂತ ಹಳೆಯದು ಮತ್ತು ಅಪಾಯಕಾರಿ ದಂಧೆಯ ಬಗ್ಗೆ ಈ ಸಿನಿಮಾ ಮಾತಾಡಲಿದೆ ಎಂಬ ಕುರುಹನ್ನು ಈ ಟ್ರೇಲರ್ ಬಿಟ್ಟುಕೊಟ್ಟಿದೆ.

ಶ್ರೀ ಕಟೀಲ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಸಿನಿಮಾವನ್ನು ಅಭಿನಯ ಚಕ್ರವರ್ತಿ ಸುದೀಪ್ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ನವೀನ್ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪುತ್ತೂರು ಭರತ್ ಮತ್ತು ತನ್ವಿ ಅಮಿನ್ ಕೊಲ್ಯಾ ಬಂಡವಾಳ ಹೂಡಿದ್ದಾರೆ. ಸಂಗೀತ ನಿರ್ದೇಶಕ ಎಲ್ ಎನ್ ಶಾಸ್ತ್ರಿ ಅವರ ಸಂಗೀತ, ನಟ, ಬರಹಗಾರ, ಸಂಭಾಷಣೆಗಾರ, ಚಕ್ರವರ್ತಿ ಚಂದ್ರಚೂಡ ಅವರ ಸಾಹಿತ್ಯ, ಕಥೆ, ಸಂಭಾಷಣೆ ಈ ಸಿನಿಮಾಕ್ಕಿದೆ. ಇದರ ಜೊತೆಗೆ ಈ ಚಿತ್ರದಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ಮುಖ್ಯ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿರುವುದು ವಿಶೇಷ.

ಇನ್ನು ನೈಜ ನಟನೆಯ ಮೂಲಕ ಎಲ್ಲರ ಮನಗೆದ್ದಿರುವ ಸಂಚಾರಿ ವಿಜಯ್ ಅವರು ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರ ಮುಖೇನ ಮಾಫಿಯಾದ ಕಥೆಯ ಹಂದರ ತೆರೆದುಕೊಳ್ಳಲಿದೆ. ಇನ್ನು ಅನನ್ಯ ಶೆಟ್ಟಿ ನಾಯಕಿ ನಟಿಯಾಗಿ ಬಣ್ಣ ಹಚ್ಚಿದ್ದು, ಇದು ಇವರ ಮೊದಲ ಸಿನಿಮಾವೂ ಹೌದು. ಇವರ ಜೊತೆ ಪವಿತ್ರ ಜಯರಾಮ್, ಕೃಷ್ಣಮೂರ್ತಿ ಕವತಾರ್, ಎಂ.ಕೆ ಮಠ ಸೇರಿದಂತೆ ಹಲವರು ನಟಿಸಿದ್ದಾರೆ.

Share