Connect with us


      




ವಿದೇಶ

ಮೆಕ್ಸಿಕೊ ಅಧ್ಯಕ್ಷರಿಗೆ ಎರಡನೇ ಬಾರಿ ಕೋವಿಡ್ ಪಾಸಿಟಿವ್

UNI Kannada

Published

on

ಮೆಕ್ಸಿಕೊ ನಗರ, ಜ 11 (ಯುಎನ್‌ ಐ) ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್‌ ಒಬ್ರಡಾರ್ ಅವರು ಎರಡನೇ ಬಾರಿಗೆ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ. ತಮ್ಮಲ್ಲಿ ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳು ಕಂಡುಬಂದಿದ್ದು, ಚೇತರಿಸಿಕೊಳ್ಳುವವರೆಗೆ ಐಸೋಲೇಷನ್‌ ನಲ್ಲಿರುವುದಾಗಿ ಅವರು ಹೇಳಿದ್ದಾರೆ. 68 ವರ್ಷದ ಲೋಪೆಜ್ ಒಬ್ರಡಾರ್ ಕೂಡ ಕಳೆದ ವರ್ಷ ಜನವರಿಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ಸೋಮವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಗಂಟಲು ನೋವಿನಿಂದ ಬಳಲುತ್ತಿದ್ದ ಅವರು ಕೊರೊನಾ ಪರೀಕ್ಷೆಗೆ ಒಳಗಾದರು. ತಾವು ಕೊರೊನಾದಿಂದ ಚೇತರಿಸಿಕೊಳ್ಳುವವರೆಗೆ ಮನೆಯಿಂದಲೇ ಕಚೇರಿ ಕೆಲಸ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ. ಲೋಪೆಜ್ ಒಬ್ರಡಾರ್ ಡಿಸೆಂಬರ್ 7 ರಂದು ಆಸ್ಟ್ರೋಜೆನ್ ಬೂಸ್ಟರ್ ಲಸಿಕೆ ಹಾಕಿಸಿಕೊಂಡಿದ್ದರು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಲೋಪೆಜ್ 2013ರಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು.

ತಾವು ಕೊರೊನಾದಿಂದ ಬಳಲುತ್ತಿರುವ ಕಾರಣ ಮೆಕ್ಸಿಕೋ ಆಂತರಿಕ ಸಚಿವ ಅಡಾನ್ ಆಗಸ್ಟೊ ಅಧ್ಯಕ್ಷರ ಅಧಿಕೃತ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ಒಬ್ರಡಾರ್ ಹೇಳಿದರು. ಮೆಕ್ಸಿಕೊ ಅಧ್ಯಕ್ಷರು ವಿಮಾನಗಳಲ್ಲಿ ಹೊರತುಪಡಿಸಿ ಹೊರಗೆ ಅಪರೂಪವಾಗಿ ಮುಖಗವಸು ಧರಿಸುತ್ತಿದ್ದರು. ಮೆಕ್ಸಿಕೋ ದೇಶಕ್ಕೆ ಪ್ರವೇಶಿಸುವ ಪ್ರಯಾಣಿಕರ ಮೇಲೆ ಅತ್ಯಲ್ಪ ನಿರ್ಬಂಧಗಳನ್ನು ವಿಧಿಸುತ್ತದೆ.

Continue Reading
Share