Connect with us


      
ಕರ್ನಾಟಕ

ಮಕ್ಕಳಿಗೆ ಬೈಸಿಕಲ್, ಮೊಟ್ಟೆ ನೀಡಲು ಹಣವಿಲ್ಲದವರಿಗೆ ಶಿಕ್ಷಣ ಸಚಿವರ ಖಾತೆ ನಿರ್ವಹಣೆಗೆ ಎಲ್ಲಿಂದ ಬಂತು ಹಣ? ಕಾಂಗ್ರೆಸ್ ಪ್ರಶ್ನೆ

Vanitha Jain

Published

on

ಬೆಂಗಳೂರು: ಜೂನ್ 29 (ಯು.ಎನ್.ಐ.) ವೈಯಕ್ತಿಕ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಬಿಜೆಪಿಯ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಬಡವರಿಗೆ ಅಕ್ಕಿ ನೀಡಲು ಹಣವಿಲ್ಲ ಎನ್ನುತ್ತಾರೆ. ಮುಖ್ಯಮಂತ್ರಿಗಳು ಮಕ್ಕಳಿಗೆ ಬೈಸಿಕಲ್ ಒದಗಿಸಲು, ಮೊಟ್ಟೆ ನೀಡಲು ಹಣವಿಲ್ಲ ಎನ್ನುತ್ತಾರೆ. ಶಿಕ್ಷಣ ಸಚಿವರು ತಮ್ಮ ಖಾಸಗಿ ಸಾಮಾಜಿಕ ಜಾಲತಾಣ ನಿರ್ವಹಿಸಲು ಲಕ್ಷಾಂತರ ಹಣ ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡುತ್ತಾರೆ ಎಂದು ಕೂ ಮಾಡಿದ್ದಾರೆ.

ಬಿಜೆಪಿ ಮಾನ ಮರ್ಯಾದೆ ಬಿಟ್ಟಿದೆ ಎಂದು ಹೇಳಿರುವ ಕಾಂಗ್ರೆಸ್ ಒಂದು ವರ್ಷದವರೆಗೆ ಸುಮಾರು ೧೧, ೩೨, ೦೦೦ ರೂ. ಖರ್ಚು ಮಾಡಿದೆ. ಅಂದರೆ ಮಾಹೆಯಾನ ೯೪,೪೦೦ ರೂ. ಹಣ ಖರ್ಚು ಮಾಡಿದ್ದಾರೆ ಎಂದು ಹೇಳಿದೆ.

Koo App

ಬಿಜೆಪಿಯ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಬಡವರಿಗೆ ಅಕ್ಕಿ ನೀಡಲು ಹಣವಿಲ್ಲ ಎನ್ನುತ್ತಾರೆ. ಮುಖ್ಯಮಂತ್ರಿಗಳು ಮಕ್ಕಳಿಗೆ ಬೈಸಿಕಲ್ ಒದಗಿಸಲು, ಮೊಟ್ಟೆ ನೀಡಲು ಹಣವಿಲ್ಲ ಎನ್ನುತ್ತಾರೆ. ಶಿಕ್ಷಣ ಸಚಿವರು ತಮ್ಮ ಖಾಸಗಿ ಸಾಮಾಜಿಕ ಜಾಲತಾಣ ನಿರ್ವಹಿಸಲು ಲಕ್ಷಾಂತರ ಹಣ ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡುತ್ತಾರೆ. #ಮಾನ_ಮರ್ಯಾದೆಬಿಟ್ಟಬಿಜೆಪಿ

ಕರ್ನಾಟಕ ಕಾಂಗ್ರೆಸ್ (@inckarnataka) 28 June 2022

Share