Connect with us


      




ರಾಜಕೀಯ

ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳಿಗೆ ಸಚಿವ ಸಿ ಸಿ ಪಾಟೀಲ ಅಭಿನಂದನೆ

Kumara Raitha

Published

on

ಬೆಂಗಳೂರು: (ಸುವರ್ಣ ವಿಧಾನಸೌಧ) ಡಿಸೆಂಬರ್‌ ೧೪ (ಯು.ಎನ್.ಐ.) ನಮ್ಮ ನಿರೀಕ್ಷೆಯಂತೆ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳಿಗೆ ಮತ್ತಷ್ಟು ಗೌರವ ತಂದು ಕೊಟ್ಟಿದ್ದಾರೆ. ಎಲ್ಲಾ ವಿಜಯಿ ಅಭ್ಯರ್ಥಿಗಳಿಗೂ ನನ್ನ ಹಾರ್ದಿಕ ಅಭಿನಂದನೆಗಳು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ನಮ್ಮ ಬಿಜೆಪಿ ಸರ್ಕಾರ ನೀಡಿದ ಉತ್ತಮ ಆಡಳಿತ ಮತ್ತು ಅಭಿವೃದ್ಧಿಪರ ಕೆಲಸಗಳಿಂದಾಗಿ ಜನರ ಒಲವು ನಮ್ಮೊಂದಿಗಿದೆ ಎಂಬುದು ಮತ್ತೊಮ್ಮೆ ಇದರಿಂದ ಸಾಬೀತಾಗಿರುವುದು ನಮಗೆ ಸಂತೋಷ ತಂದಿದೆ. ಕೆಲವು ಕಡೆ ಬಿಜೆಪಿಗೆ ಸೋಲು ಆಗಿದ್ದರು ಕೂಡ ನಮ್ಮ ಅಭ್ಯರ್ಥಿಗಳು ಧೃತಿಗೆಡಬೇಕಾಗಿಲ್ಲ. ಜನರ ಸಮಸ್ಯೆಗಳಿಗೆ ಮತ್ತಷ್ಟು ಸ್ಪಂದಿಸುತ್ತಾ ಅವರ ವಿಶ್ವಾಸ ಗಳಿಸಿದರೆ ಬಿಜೆಪಿಗೆ ಹೆಚ್ಚಿನ ಭವಿಷ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ಮಾಜಿ ಮುಖ್ಯಮಂತ್ರಿ  ಬಿ. ಎಸ್. ಯಡಿಯೂರಪ್ಪ,  ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ, ಎಲ್ಲ ಸಚಿವರಿಗೆ, ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ನನ್ನ  ವಂದನೆಗಳು ಎಂದವರು ಹೇಳಿದ್ದಾರೆ.

Share